Ramya: ಸದ್ದಿಲ್ಲದೇ ಮದುವೆ.. ಪತಿಯೊಂದಿಗೆ ಹನಿಮೂನ್ ಫೋಟೋ ಹಂಚಿಕೊಂಡ ಖ್ಯಾತ ನಟಿ ರಮ್ಯಾ; ಪೋಟೋಸ್ ನೋಡಿ
ನಟಿ ರಮ್ಯಾ ಪಾಂಡಿಯನ್ ತಮ್ಮ ಗೆಳೆಯ ಲೋವನ್ ಧವನ್ ಅವರನ್ನು ನವೆಂಬರ್ 8 ರಂದು ವಿವಾಹವಾದರು. ಇವರ ಮದುವೆ ಗಂಗಾ ನದಿಯ ದಡದಲ್ಲಿ ಅತ್ಯಂತ ಸರಳವಾಗಿ ನೆರವೇರಿತು. ಈ ನವ ಜೋಡಿಗೆ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದ್ದಂತೆ ದಂಪತಿಗಳಿಬ್ಬರೂ ಹನಿಮೂನ್‌ಗೆ ತೆರಳಿದ್ದಾರೆ. ಇದೀಗ ಈ ನವ ದಂಪತಿಗಳು ಹನಿಮೂನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿವೆ.
ನಟಿ ರಮ್ಯಾ ಪಾಂಡ್ಯನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ರಮ್ಯಾ ಪಾಂಡ್ಯನ್ ಸಿನಿಮಾಕ್ಕಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕ ಖ್ಯಾತಿ ಗಳಿಸಿದರು. ಆ ಫೋಟೋಶೂಟ್‌ನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ರಮ್ಯಾಗೆ ಸಿನಿಮಾ ಅವಕಾಶ ಸಿಗದಿದ್ದರೂ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಕಳೆದ ತಿಂಗಳು ರಮ್ಯಾ ಪಾಂಡ್ಯನ್ ಲೋವನ್ ಧವನ್ ಅವರನ್ನ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಂದಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ದೀಪಾವಳಿಯಂದು ತನ್ನ ಬಾಯ್ ಫ್ರೆಂಡ್ ಜೊತೆಗಿನ ಕ್ಲೋಸ್ ಅಪ್ ವಿಡಿಯೋವನ್ನು ಪೋಸ್ಟ್ ಮಾಡಿ ಪ್ರೀತಿಯ ವಿಚಾರವನ್ನ ಹಂಚಿಕೊಂಡಿದ್ದರು. ನಂತರ, ರಮ್ಯಾ ಪಾಂಡಿಯನ್ ಮತ್ತು ಅವರ ಗೆಳೆಯ ಲೋವನ್ ಧವನ್ ಅವರನ್ನ ನವೆಂಬರ್ 8 ರಂದು ರಿಷಿಕೇಶದ ಗಂಗಾ ನದಿಯ ದಡದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾದರು.
ಇನ್ನೂ ಮದುವೆಯಾಗುತ್ತಿದ್ದಂತೆ ರಮ್ಯಾ ಪಾಂಡ್ಯನ್ ಅವರು ಹನಿಮೂನ್ ಗೆ ಹೋಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ರಮ್ಯಾ ಅವರನ್ನ ಪತಿ ಲೋವನ್ ಧವನ್ ಅವರು ತಬ್ಬಿಕೊಂಡಿದ್ದಾರೆ. ಇನೂ ರಮ್ಯಾ ನಾಚಿಕೆಯಿಂದ ನಗುತ್ತಿರುವುದನ್ನ ಫೋಟೋದಲ್ಲಿ ಕಾಣಬಹುದಾಗಿದೆ.
ನಟಿ ರಮ್ಯಾ ಪಾಂಡ್ಯನ್ ಕೇವಲ ಒಂದೇ ಒಂದು ಫೋಟೋ ಶೂಟ್ ನಿಂದ ಜಗತ್ತಿನಾದ್ಯಂತ ಫೇಮಸ್ ಆದರು. ಟೆರೇಸ್ ಫೋಟೋ ಶೂಟ್ ವೈರಲ್ ಆದ ನಂತರ ಅವರಿಗೆ ಟಿವಿ ಮತ್ತು ಸಿನಿಮಾ ಅವಕಾಶಗಳು ಸಿಕ್ಕಿವೆ. ನಟಿ ರಮ್ಯಾ ತಮ್ಮ ಯೋಗ ಗುರು ಲೋವೆಲ್ ಧವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ, ಈಗ ಅವರ ಹನಿಮೂನ್ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
ನಟಿ ರಮ್ಯಾ ಪಾಂಡ್ಯನ್ ಅವರು ವಿಜಯ್ ಟಿವಿಯಲ್ಲಿ ಪ್ರಸಾರವಾದ ಕುಕ್ ವಿತ್ ಕೋಮಾಲಿ ಕಾರ್ಯಕ್ರಮದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಅಡುಗೆ ಕೌಶಲ್ಯವನ್ನು ತೋರಿಸಿದರು.
ಕುಕ್ ವಿತ್ ಕೋಮಾಲಿ ಕಾರ್ಯಕ್ರಮದ ನಂತರ ಅವರಿಗೆ ಬಿಗ್ ಬಾಸ್ ಅವಕಾಶ ಸಿಕ್ಕಿತು. ರಮ್ಯಾ ಪಾಂಡ್ಯನ್ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಸಿಗದ ಕಾರಣ ಆಧ್ಯಾತ್ಮದತ್ತ ಮುಖಮಾಡಿ ಯೋಗ ತರಬೇತಿಗಾಗಿ ಋಷಿಕೇಶಕ್ಕೆ ತೆರಳಿದ್ದರು.
ರಮ್ಯಾ ಪಾಂಡ್ಯನ್ ಅವರು ಸಂದರ್ಶನದಲ್ಲಿ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದರು. ಅದರಂತೆ ರಿಷಿಕೇಶದಲ್ಲಿರುವ ಶ್ರೀ ಶ್ರೀ ರವಿಶಂಕರ್ ಆಶ್ರಮಕ್ಕೆ ಯೋಗ ತರಬೇತಿಗೆ ತೆರಳಿದ್ದ ರಮ್ಯಾ ಪಾಂಡ್ಯನ್ ಮತ್ತು ಅಲ್ಲಿ ಯೋಗ ತರಬೇತುದಾರರಾಗಿರುವ ಲೋವಲ್ ಧವನ್ ನಡುವೆ ಪ್ರೀತಿ ಅರಳಿತು. ಯೋಗ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಚೆನ್ನೈಗೆ ವಾಪಸಾಗಿದ್ದರು. ದೀಪಾವಳಿ ಸಂದರ್ಭದಲ್ಲಿ ಪ್ರೀ ವೆಡ್ಡಿಂಗ್ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ ರಮ್ಯಾ ಪಾಂಡ್ಯನ್ ನವೆಂಬರ್ 8 ರಂದು ಲೋವೆಲ್ ಧವನ್ ಅವರನ್ನು ವಿವಾಹವಾದರು.












Click it and Unblock the Notifications