Ramya: ದರ್ಶನ್, ಪ್ರಜ್ವಲ್ ರೇವಣ್ಣ, ಯಡಿಯೂರಪ್ಪ ಪ್ರಕರಣದ ಬಗ್ಗೆ ನಟಿ ರಮ್ಯಾ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್‌ ಬಗ್ಗೆ ಮಾಡಿದ್ದ ಟ್ವೀಟ್ ಹಂಚಿಕೊಂಡು ಸುದ್ದಿಯಾಗಿದ್ದ ನಟಿ ರಮ್ಯಾ ಈಗ ಮತ್ತೊಮ್ಮೆ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದು, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.

ಗುರುವಾರ ಮಧ್ಯಾಹ್ನ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಕರ್ನಾಟಕ ಪೊಲೀಸರಿಗೆ ಸಲ್ಯೂಟ್ ಎಂದಿದ್ದ ರಮ್ಯಾ ಈಗ ರಾಜ್ಯದಲ್ಲಿ ಸುದ್ದಿಯಲ್ಲಿರುವ ಪ್ರಮುಖ ಮೂರು ಪ್ರಕರಣಗಳ ಬಗ್ಗೆ ಮಾತನಾಡಿದ್ದಾರೆ.

actress ramya instagram post on darshan yediyurappa prajwal revanna case

ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಸ್ಟೋರಿ ಸಾರಾಂಶ ಇಲ್ಲಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬ್ಲಾಕ್ ಮಾಡುವ ಆಯ್ಕೆ ಕೊಟ್ಟಿರುವುದರ ಹಿಂದೆ ಕಾರಣವಿದೆ. ಬ್ಲಾಕ್ ಮಾಡಿದ ಮೇಲೂ ನಿಮ್ಮನ್ನು ಟ್ರೋಲ್ ಮಾಡುತ್ತಾ ಇದ್ದಾರೆ ಎಂದರೆ ನೀವು ದೂರು ಕೊಡಲು ಕೂಡ ಅವಕಾಶ ಇದೆ. ಟ್ರೋಲ್ ಮಾಡುವವರು ನನ್ನ ಬಗ್ಗೆ ಏನೆಲ್ಲಾ ಮಾತನಾಡಿದರು, ಅಸಹ್ಯ ಭಾಷೆಗಳನ್ನು ಬಳಸಿ ಟ್ರೋಲ್ ಮಾಡಿದರು. ನನ್ನೊಬ್ಬಳನ್ನು ಮಾತ್ರವಲ್ಲ, ಬೇರೆ ನಟ-ನಟಿಯರನ್ನೂ ಕೂಡ ಟ್ರೋಲ್ ಮಾಡಿದ್ದಾರೆ. ಎಂತಾ ಕೆಟ್ಟ ಸಮಾಜದಲ್ಲಿ ಇದ್ದೇವೆ ಎಂದರೆ, ಹೀರೋ, ಹೀರೋಯಿನ್ ಮಕ್ಕಳು ಮತ್ತು ಪತ್ನಿಯರನ್ನು ಬಿಡದೆ ಟ್ರೋಲ್ ಮಾಡಿದ್ದಾರೆ.

ದೇಶದ ಕಾನೂನು ಪಾಲಿಸುವ ವ್ಯಕ್ತಿಯಾಗಿ ನಾನು ಇವರ ವಿರುದ್ಧ ಕೇಸ್‌ ದಾಖಲು ಮಾಡಿದ್ದೇನೆ. ಕೆಲವೊಮ್ಮೆ ಟ್ರೋಲ್ ಮಾಡುವ ವ್ಯಕ್ತಿಗಳಿಗೆ ಪೊಲೀಸರು ಸಣ್ಣ ವಾರ್ನಿಂಗ್ ಕೊಟ್ಟರೂ ಸಾಕು ಸುಮ್ಮನಾಗುತ್ತಾರೆ. ಆ ಬಳಿಕ ನಾನು ಅವರ ಮೇಲೆ ಹಾಕಿದ್ದ ಕೇಸ್‌ಗಳನ್ನು ವಾಪಸ್ ತೆಗೆದುಕೊಂಡಿದ್ದೇನೆ.

ಟ್ರೋಲ್ ಮಾಡುವವರು ಹೆಚ್ಚಾಗಿ ಯುವಕರು. ಅವರಿಗೆ ಭವಿಷ್ಯವಿದೆ, ಆದರೆ ಹೆಸರಿಲ್ಲದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಬಳಸಿ ಟ್ರೋಲ್ ಮಾಡಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರಿಗೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಟ್ರೋಲ್ ಮಾಡಿದವರನ್ನು ಹುಡುಕಿಕೊಂಡು ಹೋಗಿ ಕೊಲೆ ಮಾಡುವುದನ್ನು ಯಾರೂ ಮಾಡಬಾರದು. ಇಂತಹ ವಿಚಾರಕ್ಕೆ ಒಂದು ಸಣ್ಣ ದೂರು ಕೊಟ್ಟರು ಸಾಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸಿದ ಪೊಲೀಸರ ಬಗ್ಗೆ ಗೌರವ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಪೊಲೀಸರದ್ದು ಥ್ಯಾಂಕ್‌ಲೆಸ್ ಕೆಲಸ, ತಮ್ಮ ಮಿತಿಯಲ್ಲಿ ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಪೊಲೀಸರು ಬಗ್ಗಬಾರದು ಎಂದು ನಾನು ಬಯಸುತ್ತೇನೆ. ದೇಶದ ಕಾನೂನಿನ ಮೇಳೆ ಜನ ಸಾಮಾನ್ಯರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದಿರುವ ರಮ್ಯಾ, ಜಸ್ಟೀಸ್ ಫಾರ್ ರೇಣುಕಾಸ್ವಾಮಿ, ದರ್ಶನ್, ಯಡಿಯೂರಪ್ಪ ಹಾಗೂ ಪ್ರಜ್ವಲ್‌ ರೇವಣ್ಣ ಹ್ಯಾಶ್‌ ಟ್ಯಾಗ್ ಬಳಸಿದ್ದಾರೆ.

ರಾಜ್ಯದಲ್ಲಿ ಸದ್ಯ ಯಡಿಯೂರಪ್ಪ ಪೋಕ್ಸೊ ಪ್ರಕರಣ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವನ್ ಪ್ರಕರಣ ಮತ್ತು ದರ್ಶನ್ ಬಂಧನ ಪ್ರಕರಣ ಪೊಲೀಸರಿಗೆ ಸವಾಲಾಗಿದೆ. ರಾಜಕೀಯ ಒತ್ತಡದ ನಡುವೆ ಜನ ಸಾಮಾನ್ಯರಿಗೆ ನ್ಯಾಯ ಕೊಡಿಸುವುದು ಪೊಲೀಸರಿಗೂ ಸವಾಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+