ನಿನ್ನ ಖಾಸಗಿ ಭಾಗದಲ್ಲಿ ತುರಿಕೆಯಾದ್ರೆ ರಾತ್ರಿ ಫೋನ್ ಮಾಡು: ನಟಿ ರಾಧಿಕಾ ಆಪ್ಟೆಗೆ ಸ್ಟಾರ್‌ ನಟನಿಂದ ಕಿರುಕುಳ

ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳದ ಅನುಭವಗಳ ಬಗ್ಗೆ ಆಗಾಗ ಶಾಕಿಂಗ್‌ ವಿಚಾರಗಳು ಹೊರಬರುತ್ತಲೇ ಇವೆ. ಇದೀಗ ಬಹುಭಾಷಾ ನಟಿ ರಾಧಿಕಾ ಆಪ್ಟೆ ತಮಗಾದ ಲೈಂಗಿಕ ಕಿರುಕುಳದ ಘಟನೆಯೊಂದನ್ನು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಸ್ಟಾರ್‌ ನಟನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ನನ್ನ ಖಾಸಗಿ ಭಾಗದ ಬಗ್ಗೆ ನೇರವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡಿದ ಎಂದು ನಟಿ ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ.

ಬಾಲಿವುಡ್‌ನ ಸ್ಟಾರ್ ನಾಯಕಿಯಾಗಿರುವ ರಾಧಿಕಾ ಆಪ್ಟೆ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿದ್ದಾರೆ. ತಮ್ಮ ವಿಶೇಷ ಅಭಿನಯದಿಂದಲೇ ರಾಧಿಕಾ ಮನೆಮಾತಾಗಿದ್ದಾರೆ. ಹೀಗಿದ್ದರೂ ಸ್ಟಾರ್‌ ನಟರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ವಿಚಾರ ಸಂಚಲನ ಸೃಷ್ಟಿಸಿದೆ. ಯಾರು ಆ ನಟ ಹಾಗೂ ಕಿರುಕುಳ ನಡೆದಿದ್ದು ಯಾವ ಚಿತ್ರರಂಗದಲ್ಲಿ ಎಂದೂ ರಾಧಿಕಾ ರಿವೀಲ್‌ ಮಾಡಿದ್ದಾರೆ.

Actress Radhika Apte Workplace Harassment In Film Industry Bold Revelation

ಲಿಫ್ಟ್‌ನಲ್ಲಿ ಹೋಗುವಾಗ ಈ ಘಟನೆ ನಡೆದಿದ್ದು ಎಂದು ರಾಧಿಕಾ ಹೇಳಿದ್ದಾರೆ. ಒಮ್ಮೆ ತೆಲುಗು ಸ್ಟಾರ್ ನಾಯಕನ ಜೊತೆ ಲಿಫ್ಟ್‌ನಲ್ಲಿದ್ದ ಸಮಯದಲ್ಲಿ ನಟ ನನ್ನ ಬಳಿಗೆ ಬಂದು ಸ್ನೇಹದಿಂದ ಮಾತನಾಡಲು ಪ್ರಯತ್ನಿಸಿದರು. ಆದರೆ ಇದ್ದಕ್ಕಿದ್ದಂತೆ "ರಾತ್ರಿಯಲ್ಲಿ ನಿಮ್ಮ ಬೆನ್ನು ತುರಿಕೆ ಮಾಡಿದರೆ, ನಾನು ಅದನ್ನು ಉಜ್ಜುತ್ತೇನೆ" ಎಂದು ನೇರವಾಗಿ ಹೇಳಿದರು. ಇದನ್ನು ಕೇಳಿ ನಾನು ನಿಜಕ್ಕೂ ಆಘಾತಕ್ಕೊಳಗಾದೆ" ಎಂದು ರಾಧಿಕಾ ಆಪ್ಟೆ ತಮ್ಮ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ.

ಲಿಫ್ಟ್‌ನಲ್ಲಿ ಹೋಗುವಾಗ ನಡೆದಿದ್ದು

"ಆಗ ನನಗೆ ಅವರ ಪರಿಚಯವೂ ಇರಲಿಲ್ಲ. ನಾನು ಲಿಫ್ಟ್‌ನಲ್ಲಿ ಹೋಗುವಾಗ ಆ ನಟ ಮಾತ್ರ ನನ್ನೊಂದಿಗೆ ಇದ್ದರು. ನಿನ್ನ ಬೆನ್ನು ತುರಿಕೆ ಮಾಡಿದರೆ, ನನಗೆ ಕರೆ ಮಾಡು‌ ಎಂದು ಕೇಳಿದ್ದರು. ನಾನು ತಕ್ಷಣ ಕೋಪಗೊಂಡು ಅವರೊಂದಿಗೆ ದೊಡ್ಡ ಜಗಳ ಮಾಡಿದೆ. ಬಳಿಕ ಆತ ಅಲ್ಲಿಂದ ಹೋದರು. ಆದರೆ ನಾಯಕನ ಹೆಸರನ್ನು ಬಹಿರಂಗಪಡಿಸಲ್ಲ" ಎಂದು ರಾಧಿಕಾ ಹೇಳಿದ್ದಾರೆ.

ಈ ಹಿಂದೆಯೂ ರಾಧಿಕಾ ತೆಲುಗು ನಟರೊಬ್ಬರ ನಾಯಕರೊಬ್ಬರ ವಿರುದ್ಧ ಆರೋಪಗಳನ್ನು ಮಾಡಿದ್ದರು. ತೆಲುಗು ನಾಯಕನೊಬ್ಬ ತನಗೆ ಸಾಕಷ್ಟು ಕಿರುಕುಳ ನೀಡಿದ್ದಾನೆ ಮತ್ತು ಅವನ ಕಾರಣದಿಂದಾಗಿ ತಾನು ತೆಲುಗು ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ರಾಧಿಕಾ ಆಪ್ಟೆ ಈ ಹಿಂದೆ ಹೇಳಿದ್ದರು. ಈಗ ಮತ್ತೊಮ್ಮೆ ರಾಧಿಕಾ ಆಪ್ಟೆ ತೆಲುಗು ನಟರೊಬ್ಬರ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಧಿಕಾ ನಟಿಸಿದ್ದ ಸಿನಿಮಾ ಹೀರೋಗಳು ಯಾರು? ಕಿರುಕುಳ ಕೊಟ್ಟ ನಟ ಯಾರಿರಬಹುದು? ಎಂದು ಜಾಲಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+