Actress Passes Away: 38 ವಯಸ್ಸಿನ ಖ್ಯಾತ ನಟಿ ಪ್ರಿಯಾ ಕ್ಯಾನ್ಸರ್‌ನಿಂದ ನಿಧನ

ಕ್ಯಾನ್ಸರ್‌ನಿಂದಾಗಿ ಇತ್ತೀಚೆಗೆ ಅತಿ ಚಿಕ್ಕ ವಯಸ್ಸಿನವರು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದೀಗ ಖ್ಯಾತ ನಟಿ ಕ್ಯಾನ್ಸರ್‌ನಿಂದ ನಿಧನರಾಗಿದ್ದು, ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಜನಪ್ರಿಯ ದೂರದರ್ಶನ ಧಾರಾವಾಹಿ ಪವಿತ್ರ ರಿಷ್ಟಾ ಸೇರಿದಂತೆ ಮರಾಠಿ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದ ನಟಿ ಪ್ರಿಯಾ ಮರಾಠೆ (Priya Marathe) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಮುಂಬೈನಲ್ಲಿ ಭಾನುವಾರ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ ನಟಿ ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಟಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯ ಆರೈಕೆಯ ಹೊರತಾಗಿಯೂ ಅವರ ಸ್ಥಿತಿ ಹದಗೆಡುತ್ತಲೇ ಇತ್ತು. ಅಂತಿಮವಾಗಿ ಅವರು ಮುಂಬೈನ ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪವಿತ್ರ ರಿಷ್ಟಾ ಎಂಬ ಹಿಟ್‌ ಸೀರಿಯಲ್‌ನಲ್ಲಿ ವರ್ಷಾ ಪಾತ್ರದ ಮೂಲಕ ಪ್ರಿಯಾ ಮರಾಠೆ ಜನಪ್ರಿಯತೆ ಪಡೆದಿದ್ದರು. ಬಾಲಾಜಿ ಟೆಲಿಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಕಸಮ್ ಸೇ ಚಿತ್ರದಲ್ಲಿನ ವಿದ್ಯಾ ಬಾಲಿ ಮತ್ತು ಬಡೆ ಅಚ್ಚೆ ಲಗ್ತೇ ಹೈ ಚಿತ್ರದಲ್ಲಿನ ಜ್ಯೋತಿ ಮಲ್ಹೋತ್ರಾ ಪಾತ್ರಕ್ಕೂ ಅವರು ಮೆಚ್ಚುಗೆ ಪಡೆದಿದ್ದರು.

actress-priya-marathe-passes-away-at-38-after-battle-with-cancer

ಸೋಷಿಯಲ್‌ ಮೀಡಿಯಾದಿಂದ ದೂರ

2023ರಲ್ಲಿಯೇ ಪ್ರಿಯಾ ಅನಾರೋಗ್ಯದ ಕಾರಣ ನೀಡಿ, ಮರಾಠಿ ಕಾರ್ಯಕ್ರಮ ತುಜೆಕ್ ಮಿ ಗೀತ್ ಗಾತ್ ಆಹೆಯಿಂದ ಹೊರನಡೆದಿದ್ದರು. ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೇ ಸಮಯದಲ್ಲಿ ಅವರಿಗೆ ಕ್ಯಾನ್ಸರ್‌ ಇದ್ದಿದ್ದು ದೃಢವಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಸುದ್ದಿ ಹರಿದಾಡಿತ್ತು. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಆಕ್ಟೀವ್‌ ಆಗಿರಲಿಲ್ಲ.

ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಅವರು ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿದ್ದರು. 2024ರಲ್ಲಿ ಅವರ ಪತಿ, ನಟ ಶಾಂತನು ಮೋಘೆ ಅವರೊಂದಿಗೆ ಜೈಪುರದ ಅಮೆರ್ ಕೋಟೆಗೆ ಭೇಟಿ ನೀಡಿದಾಗ ಸೆರೆ ಹಿಡಿದ ಫೋಟೋಗಳನ್ನ ಕೊನೆಯದಾಗಿ ಪೋಸ್ಟ್ ಮಾಡಿದ್ದರು. ತಮ್ಮ ಪ್ರವಾಸದ ಸಮಯದಲ್ಲಿ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

ಸ್ಟ್ಯಾಂಡ್-ಅಪ್ ಹಾಸ್ಯನಟಿ ಮತ್ತು ದೂರದರ್ಶನ ನಟಿಯಾಗಿ ಪ್ರಿಯಾ ಮರಾಠೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಮುಂಬೈನಲ್ಲಿ ಜನಿಸಿದ ಅವರು ನಟನಾ ಉದ್ಯಮಕ್ಕೆ ತೆರಳುವ ಮೊದಲು ನಗರದಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದರು. ಅವರ ಮೊದಲ ಹಿಂದಿ ಟಿವಿ ಕಾರ್ಯಕ್ರಮ ಏಕ್ತಾ ಕಪೂರ್ ಅವರ ಕಸಮ್ ಸೇ. ಇದರಲ್ಲಿ ಅವರು ವಿದ್ಯಾ ಬಾಲಿ ಪಾತ್ರ ನಿರ್ವಹಿಸಿದರು. 2010ರಲ್ಲಿ ಕಾಮಿಡಿ ಸರ್ಕಸ್‌ನ ಭಾಗವಾಗಿದ್ದರು. ಮರಾಠೆ ಮರಾಠಿ ಧಾರಾವಾಹಿ "ತು ತಿಥೆ ಮೆ"ನಲ್ಲಿ ಪ್ರಿಯಾ ಮೋಹಿತೆ ಪಾತ್ರದಲ್ಲಿ ನಟಿಸಿದರು. ಬಳಿಕ ಸಾಥ್ ನಿಭಾನ ಸಾಥಿಯಾ ಕಾರ್ಯಕ್ರಮದ ತಾರಾಗಣ ಸೇರಿ ಭವಾನಿ ರಾಥೋಡ್ ಪಾತ್ರ ನಿರ್ವಹಿಸಿದ್ದರು. ಚಿಕ್ಕ ವಯಸ್ಸಿಗೆ ಅಕಾಲಿಕ ನಿಧನ ಹೊಂದ ನಟಿಗೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+