Pranitha Subhash: ಸ್ನಾನ ಮಾಡುವ ವಿಡಿಯೋ ಶೇರ್ ಮಾಡಿದ ಪೊರ್ಕಿ ಬೆಡಗಿ ಪ್ರಣೀತಾ, ನೆಟ್ಟಿಗರು ಏನಂದ್ರು?
ಕನ್ನಡದ 'ಪೊರ್ಕಿ' ಸಿನಿಮಾ ನಟ ದರ್ಶನ್ ತೂಗುದೀಪ ಅವರಿಗೆ ಎಷ್ಟು ಹೆಸರು ಕೊಟ್ಟಿತೋ ಅವರ ಎದುರು ನಟಿಸಿದ್ದ ನಟಿ ಪ್ರಣೀತಾ ಅವರನ್ನು ಕೂಡ ಸ್ಟಾರ್ ಆಗಿಸಿತ್ತು. ಕನ್ನಡದ ಬಳಿಕ ತೆಲುಗು, ತಮಿಳು ಸಿನಿಮಾಗಳಿಗೆ ಕಾಲಿಟ್ಟ ನಟಿ ಸದ್ಯ ಮದುವೆ ಮಕ್ಕಳು ಎಂದು ಆರಾಮಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ ಪ್ರಣೀತಾ ಸುಭಾಷ್, ಇತ್ತೀಚೆಗೆ ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿ ತಮ್ಮ ಫಾಲೋವರ್ಸ್ ಮೆಚ್ಚುಗೆ ಪಡೆಯುತ್ತಾರೆ. ಆದರೆ, ಇತ್ತೀಚೆಗೆ ಅವರು ಹಂಚಿಕೊಂಡಿರುವ ವಿಡಿಯೋ ಒಂದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಕೋಪಗೊಂಡಿದ್ದು, ಮೊದಲು ಅದನ್ನು ಡಿಲೀಟ್ ಮಾಡಿ ಎಂದು ಆಗ್ರಹಿಸಿದ್ದಾರೆ. ಅದೇ.. ಅವರು ಸ್ನಾನ ಮಾಡುತ್ತಾ ಇರುವ ಬಾತ್ ಟಬ್ ವಿಡಿಯೋ!.

ಬಾತ್ ಟಬ್ ವಿಡಿಯೋ ಹಂಚಿಕೊಂಡ ನಟಿ ಪ್ರಣೀತಾ!
ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ಸಣ್ಣ ಚಿತ್ರಗಳಲ್ಲಿ ನಟಿಸಿದ್ದ ಪ್ರಣಿತಾ ಸುಭಾಷ್ ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಪವನ್ ಕಲ್ಯಾಣ್ ಎದುರು ಎರಡನೇ ನಾಯಕಿಯಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಆ ಚಿತ್ರದ ನಂತರ ಆಕೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಒಳ್ಳೆ ಆಫರ್‌ಗಳು ಬಂದವು. ತೆಲುಗಿನಲ್ಲಿ ಸರಣಿ ಸಿನಿಮಾ ಮಾಡಿರುವ ಪ್ರಣೀತಾ, ಮಹೇಶ್ ಬಾಬು ಜೊತೆ ಬ್ರಹ್ಮೋತ್ಸವಂ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು.
2021ರಲ್ಲಿ ಉದ್ಯಮಿ ನಿತಿನ್ ರಾಜು ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಣೀತಾ ಸುಭಾಷ್, 2022ರಲ್ಲಿ ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದದ್ದರು. ಬಳಿಕ ಪ್ರಣೀತಾ ಕೆಲವು ದಿನಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಚಿತ್ರಗಳಿಗೆ ರೀ ಎಂಟ್ರಿ ಕೊಟ್ಟಿರುವ ಪ್ರಣೀತಾ ಹಿಂದಿಯಲ್ಲಿ ಒಂದು ಹಾಗೂ ಮಲಯಾಳಂನಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಈಗ ಅವರ ಬಾತ್ ಟಬ್ ವಿಡಿಯೋ ಸಕತ್ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಪ್ರಣೀತಾ ಸುಭಾಷ್ ತಮ್ಮ ವೈಯಕ್ತಿಕ ವಿಚಾರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಪ್ರಣೀತಾ ಶೇರ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಣೀತಾ ಸುಭಾಷ್ ಬಾತ್ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬಾತ್ ಟಬ್ ನಲ್ಲಿ ಕುಳಿತು ಬಿಳಿ ನೊರೆಯ ನಡುವೆ ಖುಷಿ ಖುಷಿಯಿಂದ ಇರುವ ವಿಡಿಯೋವನ್ನು ಪ್ರಣೀತಾ ಸುಭಾಷ್ ಶೇರ್ ಮಾಡಿದ್ದು, "ಸೆಲ್ಫ್ ಕೇರ್ ಎನ್ನುವುದು ಬಬಲ್ ಬಾತ್ ಬಗ್ಗೆ ಅಲ್ಲ ಎಂದು ಅವರು ಹೇಳಬಹುದು. ಆದರೆ, ಹಾಟ್ ಬಬಲ್ ಬಾತ್ ಕೊಡುವಷ್ಟು ರಿಲಾಕ್ಸ್ ಇನ್ನೇಲ್ಲೂ ಸಿಗುವುದಿಲ್ಲ" ಎಂದಿದ್ದಾರೆ.
ಪ್ರಣೀತಾ ಬಾತ್ ಟಬ್‌ನಲ್ಲಿ ಕುಳಿತು ಬಬಲ್‌ಗಳ ಜೊತೆಗೆ ಆಟವಾಡುತ್ತಿದ್ದಾರೆ. ಈ ವಿಡಿಯೋ ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳು ಲೈಕ್‌ಗಳ ಸುರಿಮಳೆ ಮಾಡುತ್ತಿದ್ದರೆ, ಕೆಲ ನೆಟಿಜನ್‌ಗಳು ಪ್ರಣೀತಾ ವಿರುದ್ಧ ಕಿಡಿಕಾರಿದ್ದಾರೆ. ಈಕೆಗೆ ಸ್ನಾನ ಮಾಡುವ ವಿಡಿಯೋ ಹಾಕುವ ಅಗತ್ಯವೇನಿದೆ ಎಂದು ಕೇಳುತ್ತಿದ್ದಾರೆ. ಮತ್ತೆ ಹಲವು ಈ ವಿಡಿಯೋವನ್ನು ಡಿಲೀಟ್ ಮಾಡಿ ಎಂದು ಕೇಳುತ್ತಿದ್ದಾರೆ. ನಟಿ ಪ್ರಣೀತಾ ಸುಭಾಷ್ ಕನ್ನಡದಲ್ಲಿ ಪೊರ್ಕಿ, ಜರಾಸಂಧ, ವಿಷಲ್, ಬ್ರಹ್ಮ, ಮಾಸ್ ಲೀಡರ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications