'ನಾನೀಗ ಹೀಗಿರಲು ಕಾರಣ ನನ್ನ ಪಪ್ಪ': ವೇದಿಕೆ ಮೇಲೆ ನಿವೇದಿತಾ ಗೌಡ ಕಣ್ಣೀರು
ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಈವರೆಗೂ ಒಬ್ಬರಿಗೊಬ್ಬರು ಎದುರಿಗೆ ನಿಲ್ಲುತ್ತಾ ಕಿತ್ತಾಡುತ್ತಿದ್ದ ಹುಡುಗರ ತಂಡ ಹಾಗೂ ಹುಡುಗಿಯರ ತಂಡ ಈ ಬಾರಿ ಜೊತೆಯಾಗಿದೆ. ಈ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದ್ದು, ಸ್ಪರ್ಧಿಗಳು ಜೋಡಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ವಾರದ ವಿಶೇಷ ಸಂಚಿಕೆಯಲ್ಲಿ ನಿವೇದಿತಾ ಗೌಡ ಹಾಗೂ ಧನರಾಜ್ ಜೋಡಿಯಾಗಿದ್ದು, ಇಬ್ಬರು ಜೊತೆಯಾಗಿ ಮುಗಿಲು ಬೆಳ್ಮುಗಿಲು ನನ್ನ ಈ ಮಗಳು ಹಾಡಿಗೆ ಡಾನ್ಸ್ ಮಾಡಿದ್ದಾರೆ. ಅಪ್ಪ-ಮಗಳ ಬಾಂಧವ್ಯ ತೋರಿಸುವ ಇವರಿಬ್ಬರ ನೃತ್ಯ ನೋಡಿ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ಪ್ರತಿಯೊಬ್ಬರು ಕೂಡ ಕಣ್ಣೀರು ಹಾಕಿದ್ದಾರೆ. ಈ ಸಂಚಿಕೆಗೆ ವಿಶೇಷ ಅತಿಥಿಗಳಾಗಿ ಬಂದಿರುವ ನಟ ನೆನಪಿರಲಿ ಪ್ರೇಮ್ ಕೂಡ ಇವರ ನೃತ್ಯ ನೋಡಿ ಭಾವುಕರಾಗಿದ್ದಾರೆ.

ಈ ನೃತ್ಯದ ಬಳಿಕ ಮಾತನಾಡಿದ ನಿವೇದಿತಾ ಗೌಡ, 'ನನ್ನ ಜೀವನದಲ್ಲಿ ಏನೇನೋ ಆಗಿ ಹೋಯ್ತು. ನನ್ನ ಲೈಫ್‌ನಲ್ಲಿ ಒಂದಷ್ಟು ಆದ ಮೇಲೂ ನಾನು ಇಷ್ಟೊಂದು ಸ್ಟ್ರಾಂಗ್ ಆಗಿರಬೇಕು ಎಂದರೆ ಅದಕ್ಕೆ ಕಾರಣ ನನ್ನ ಪಪ್ಪ. ಏನೇ ಆಗಲಿ ನಾನು ನಿನ್ನ ಜೊತೆ ಇದ್ದೇನೆ. ನೀನು ಏನೂ ತಲೆಕೆಡಿಸಿಕೊಳ್ಳಬೇಡ ಅನ್ನುತ್ತಾರೆ. ನನ್ನ ಈ ರೀತಿಯ ಜೀವನ ಅವರಿಗೆ ಕಷ್ಟವಾಗುತ್ತದೆ' ಎಂದು ಕಣ್ಣೀರು ಹಾಕಿದ್ದಾರೆ. ಈ ವೇಳೆ ರಜತ್, ಐಶ್ವರ್ಯಾ ಸೇರಿದಂತೆ ಪ್ರತಿಯೊಬ್ಬರು ಕೂಡ ಕಣ್ಣೀರು ಹಾಕಿದ್ದಾರೆ. ಸದ್ಯ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಹಾಜರಾದ ರಜತ್ ಕಿಶನ್
ಬಿಗ್ ಬಾಸ್ ಸೀಸನ್ 11ರ ಬಳಿಕ ರಜತ್ ಕಿಶನ್ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಇತ್ತೀಚಿಗೆ ಕೆಲವು ಬೆಳವಣಿಗೆಗಳು ನಡೆದಿದ್ದು, ರಜತ್ ಜೈಲುವಾಸ ಅನುಭವಿಸುವ ಸಂದರ್ಭ ಕೂಡ ಎದುರಾಗಿತ್ತು. ಹೌದು ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದ ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು.

ಎರಡು ದಿನಗಳು ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದ ವಿನಯ್ ಗೌಡ ಹಾಗೂ ರಜತ್‌ಗೆ ಈ ವಾರದ ಆರಂಭದಲ್ಲಿ ಜಾಮೀನು ಸಿಕ್ಕಿತ್ತು. ಇದೀಗ ರಜತ್ ಕಿಶನ್ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋಗೆ ತಮ್ಮ ಹಿಂದಿನ ಮಾಸ್ ಲುಕ್‌ನಲ್ಲೇ ಎಂಟ್ರಿಕೊಟ್ಟಿದ್ದಾರೆ. ಆದರೆ ವಿನಯ್ ಗೌಡ ಮಾತ್ರ ಈ ಬಾರಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಸಂಚಿಕೆಗೂ ಕೂಡ ಗೈರಾಗಿದ್ದಾರೆ.












Click it and Unblock the Notifications