Mokshitha Pai: ಅಕ್ಕನನ್ನೇ ಮರೆತ ಮೋಕ್ಷಿತಾ ತಮ್ಮ: ಯಾರಿಗೂ ಬೇಡ ಇಂತಹ ಶಿಕ್ಷೆ!

ಬಿಗ್​ ಬಾಸ್ ಕನ್ನಡ ಸೀಜನ್‌ 11 ಇನ್ನೇನು ಅಂತಿಮ ದಿನಗಳತ್ತ ಸಾಗುತ್ತಿದ್ದು, ಗ್ರ್ಯಾಂಡ್ ಫಿನಾಲೆ ಕೂಡ ಸಮೀಪಿಸುತ್ತಿದೆ. ಈಗಾಗಲೇ ತೊಂಬತ್ತಕ್ಕೂ ಹೆಚ್ಚು ದಿನ ಪೂರೈಸಿರುವ ಬಿಗ್ ಬಾಸ್ ಕನ್ನಡ ಸೀಜನ್‌ 11 ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ಮೊದಲು ಹದಿನೇಳು ಬಳಿಕ ಮೂರು ಒಟ್ಟು ಇಪ್ಪತ್ತು ಜನರಿಂದ ತುಂಬಿದ್ದ ಬಿಗ್‌ ಬಾಸ್ ಮನೆ ಈಗ ಖಾಲಿ ಖಾಲಿಯಾಗಿದ್ದು, ಇದೀಗ ಒಂಬತ್ತು ಜನರಿಗೆ ಬಂದು ತಲುಪಿದೆ. ಇಂತಹ ಹೊತ್ತಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ​ಬಾಸ್​ ಮನೆಯೊಳಗೆ ಸಪ್ರೈಸ್‌ ಎಂಟ್ರಿ ಕೊಡುತ್ತಿದ್ದಾರೆ.

ನಿನ್ನೆಯ ಸಂಚಿಕೆಯಲ್ಲಿ ಭವ್ಯ ಗೌಡ, ತ್ರಿವಿಕ್ರಮ್‌ ಹಾಗೂ ರಜತ್ ಕುಟುಂಬಸ್ಥರು ಬಿಗ್‌ ಬಾಸ್‌ ಮನೆಯೊಳಗೆ ಬಂದು ಸ್ಪರ್ಧಿಗಳೊಂದಿಗೆ ಸಮಯ ಕಳೆದಿದ್ದು, ಇಂದು ಇತರ ಸ್ಪರ್ಧಿಗಳ ಕುಟುಂಬಸ್ಥರು ಬರಲಿದ್ದಾರೆ. ಈಗಾಗಲೇ ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಪಾರು ಖ್ಯಾತಿಯ ಮೋಕ್ಷಿತಾ ಪೈ ಕುಟುಂಬಸ್ಥರು ಬಿಗ್‌ ಬಾಸ್‌ ಮನೆಯೊಳಗೆ ಬಂದ ವಿಡಿಯೋ ನೋಡಿ ಪ್ರೇಕ್ಷಕರು ಕೂಡ ಕಣ್ಣೀರು ಹಾಕುವಂತಾಗಿದೆ.

Actress Mokshitha Pai Family Visit Bigg Boss Kannada Season 11 House

ಮೋಕ್ಷಿತಾ ಪೈ ತಮ್ಮ ವಿಶೇಷ ಚೇತನ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಮೋಕ್ಷಿತಾ ತಮ್ಮ ಅನೇಕ ವಿಡಿಯೋಗಳಲ್ಲಿ ತಮ್ಮನನ್ನು ತೋರಿಸಿ ಆತನ ಬಗ್ಗೆ ಹೇಳಿಕೊಂಡಿದ್ದರು. ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದ ಮೋಕ್ಷಿತಾ ಬಿಗ್​ ಬಾಸ್ ಮನೆಯಲ್ಲಿ ಆಗಾಗ ಆತನನ್ನೇ ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದರು. ಇದೀಗ ಬಹಳ ದಿನಗಳ ನಂತರ ಅಂದರೆ ಸುಮಾರು ತೊಂಬತ್ತೈದು ದಿನಗಳ ನಂತರ ಮೋಕ್ಷಿತಾ ತಮ್ಮನನ್ನು ಕಂಡು ಕಣ್ಣೀರು ಹಾಕಿದ್ದಾರೆ.

Actress Mokshitha Pai Family Visit Bigg Boss Kannada Season 11 House

ತಂದೆ-ತಾಯಿ ಹಾಗೂ ತಮ್ಮನನ್ನು ಕಂಡು ಮೋಕ್ಷಿತಾ ಓಡೋಡಿ ಬಂದಿದ್ದು, ಮೊದಲು ತಮ್ಮನನ್ನೇ ಮಾತನಾಡಿಸಿದ್ದಾರೆ. ಆದರೆ ಆತ ಅಕ್ಕನನ್ನೇ ಮರೆತು ಹೋಗಿರುವುದು ಕಂಡು ಬಂದಿತು. 'ಅವನು ನನ್ನನ್ನು ಮರೆತಿದ್ದಾನೆ. ತುಂಬಾ ಮಿಸ್‌ ಮಾಡಿಕೊಳ್ಳುತ್ತಿದೆ' ಎಂದು ಮೋಕ್ಷಿತಾ ತಮ್ಮನನ್ನು ತಬ್ಬಿಕೊಂಡಿದ್ದಾರೆ. ಪುಟಾಣಿ ಅಕ್ಕ ಎಲ್ಲಿ ಎಂದು ಕೇಳಿದರೂ ಪ್ರತಿಕ್ರಯಿಸದ ತಮ್ಮನ್ನು ನೋಡಿ 'ಅವನು ನನ್ನ ಮರೆತು ಹೋಗಿದ್ದಾನೆ' ಎಂದು ಮೋಕ್ಷಿತಾ ಜೋರಾಗಿ ಅತ್ತಿದ್ದಾರೆ. ಮೋಕ್ಷಿತಾ ಸ್ಥಿತಿ ನೋಡಿ ಇತರ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದ್ದಾರೆ. ಈ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಯಾರಿಗೂ ಇಂತಹ ಪರಿಸ್ಥಿತಿ ಬೇಡ ಎಂದು ಪ್ರೇಕ್ಷಕರು ಕೂಡ ಮೋಕ್ಷಿತಾ ಕಂಡು ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+