ನಟಿ ಮಂಜು ವಾರಿಯರ್ ಖಾಸಗಿ ಅಂಗ ಮುಟ್ಟಿದ ಅಭಿಮಾನಿ, ವಿಡಿಯೋ ವೈರಲ್
ನಟಿ ಮಂಜು ವಾರಿಯರ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೇಟ್ಟೈಯನ್ ಸಿನಿಮಾದ ಮನಸಿಲಾಯೋ ಸಾಂಗ್ ಭರ್ಜರಿ ಸ್ಟೆಪ್ ಹಾಕಿ ಇಂಟರ್‌ನೆಟ್ ಶೇಕ್ ಮಾಡಿದ್ದರು. ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಂಜು ವಾರಿಯರ್ ಅವರಿಗೆ ಸಾರ್ವಜನಿಕ ಸ್ಥಳದಲ್ಲೇ ಮುಜುಗುರ ಹಾಗೂ ಅಸಹ್ಯಕರ ಅನುಭವವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಪಿಂಗ್ ಮಾಲ್ ಉದ್ಘಾಟನೆಗೆ ಬಂದಿದ್ದ ನಟಿಯನ್ನು ಕಾಣಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ಅಭಿಮಾನಿಯೊಬ್ಬ ಸಾರ್ವಜನಿಕವಾಗಿ ನಟಿಯ ಖಾಸಗಿ ಭಾಗವನ್ನು ಮುಟ್ಟಿದ್ದಾನೆ.
ಈ ವಿಡಿಯೋದಲ್ಲಿ ನಟಿ ಕಾರು ಹತ್ತುವ ವೇಳೆ ಎಲ್ಲರನ್ನೂ ಮಾತನಾಡಿಸುತ್ತಾ ಹಾಯ್ ಏಳುವಾಗ ಅಭಿಮಾನಿಯೊಬ್ಬ ಜನರ ಗುಂಪಿನಲ್ಲಿ ನಟಿಯ ಸೊಂಟಕ್ಕೆ ಕೈಹಾಕಿದ್ದಾನೆ. ಜನ ಹೆಚ್ಚಾಗಿದ್ದ ಕಾರಣ ಆ ಕ್ಷಣಕ್ಕೆ ಅದು ನಟಿ ಮಂಜು ವಾರಿಯರ್ ಅವರ ಗಮನಕ್ಕೆ ಬಂದಿಲ್ಲ. ಬಳಿಕ ಅವರು ನಗುತ್ತಲೇ ಅಭಿಮಾನಿಗಳತ್ತ ಕೈಬೀಸಿ ಹೊರಟು ಹೋಗಿದ್ದಾರೆ. ವಿಡಿಯೋ ಹರಿದಾಡುತ್ತಿದ್ದು, ಈ ಘಟನೆಗೆ ನೆಟ್ಟಿಗರಿಂದ ಖಂಡನೆ ವ್ಯಕ್ತವಾಗಿದೆ.

ಶಾಪಿಂಗ್ ಮಾಲ್ ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಮಂಜು ಅವರು ಕಾರಿನ ಬಳಿಗೆ ಬಂದಾಗ ಜನ ಅವರನ್ನು ಸುತ್ತುವರೆದರು. ಆಗ ಮತ್ತೆ ಕಾರಿನಿಂದ ಇಳಿದು ಅಲ್ಲಿ ನೆರದಿದ್ದ ಜನರಿಗೆ ನಮಸ್ಕಾರ ಮಾಡಿ ಕೆಲವರಿಗೆ ಶೇಕ್ ಹ್ಯಾಂಡ್ ಕೂಡ ಮಾಡಿದರು. ಈ ವೇಳೆ ವ್ಯಕ್ತಿಯೊಬ್ಬ ಜನರ ನಡುವೆ ಬಂದು ಮಂಜು ಅವರ ಸೊಂಟವನ್ನು ಮುಟ್ಟಿ ಎಳೆದಿದ್ದಾನೆ. ಇದಕ್ಕೆ ಮಂಜು ವಾರಿಯರ್ ತಲೆಕೆಡಿಸಿಕೊಳ್ಳದೆ ಸೆಲ್ಫಿ ತೆಗೆದುಕೊಂಡು ಹೊರಟುಹೋಗಿದ್ದಾರೆ. ಪ್ರಸ್ತುತ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಹಂಚಿಕೊಂಡಿರುವ ಹಲವರು ಆ ವ್ಯಕ್ತಿಯ ನಡೆಯನ್ನು ಖಂಡಿಸಿದ್ದಾರೆ. ಅಷ್ಟು ಜನರ ಎದುರಲ್ಲೇ ಇಂತಹ ನೀಚ ಕೆಲಸ ಮಾಡಿದವನನ್ನು ಸಾರ್ವಜನಿಕವಾಗಿಯೇ ಗೂಸಾ ಕೊಡಬೇಕಿತ್ತು. ನಟಿ ಕೂಡ ಏನೂ ಆಗದಂತೆ ಸುಮ್ಮನಿದ್ದಿದ್ದು ತಪ್ಪು. ಅವನಿಗೆ ಅಲ್ಲೇ ಉತ್ತರ ಕೊಡಬೇಕಿತ್ತು ಎಂದಿದ್ದಾರೆ. ಅಭಿಮಾನಿಯಾದರೆ ದೂರದಿಂದಲೂ ನೋಡಿ, ಒಂದು ಸೆಲ್ಫಿ ತೆಗೆದುಕೊಳ್ಳಬೇಕು. ಖಾಸಗಿ ಅಂಗ ಮುಟ್ಟುವುದು ಅಂದರೆ ಅದೆಂತಾ ಅಭಿಮಾನ ಎಂದು ಪ್ರಶ್ನಿಸಿದ್ದಾರೆ.

ಈ ದೌರ್ಜನ್ಯ ಅಲ್ಲಿನ ಕೆಲವು ಜನರ ಫೋನ್‌ಗಳಲ್ಲಿ ರೆಕಾರ್ಡ್ ಆಗಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಪೋಸ್ಟ್ ಮಾಡಿದ ನಂತರ ಅದು ಬೆಳಕಿಗೆ ಬಂದಿತು. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ದುಷ್ಕರ್ಮಿಯನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
1995ರಲ್ಲಿ ಬಿಡುಗಡೆಯಾದ ಸಾಕ್ಷ್ಯಂ ಮೂಲಕ ಮಂಜು ವಾರಿಯರ್ ನಾಯಕಿಯಾಗಿ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಪಾವಧಿಯಲ್ಲಿಯೇ ಅವರು ಸ್ಟಾರ್ ನಾಯಕಿಯಾದರು. ಬಳಿಕ ನಟ ದಿಲೀಪ್ ಜೊತೆ ಪ್ರೀತಿಯಲ್ಲಿ ಬಿದ್ದು, ಇಬ್ಬರೂ 1998ರಲ್ಲಿ ವಿವಾಹವಾದರು. ಬಳಿಕ ಅವರು ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ, ಪತಿ ದಿಲೀಪ್ ಮತ್ತೊಬ್ಬ ನಟಿ ಜೊತೆ ಅಕ್ರಮ ಸಂಬಂಧ ಬೆಳೆಸಿದ ನಂತರ ಇಬ್ಬರೂ ಡಿವೋರ್ಸ್ ಪಡೆದಿದ್ದರು. ಬಳಿಕ 2014ರಿಂದ ಮಂಜು ಅವರು ಮತ್ತೆ ಸಿನಿಮಾಗಳತ್ತ ಮುಖ ಮಾಡಿದರು. 2024ರಲ್ಲಿ ತೆರೆಕಂಡ ರಜನಿಕಾಂತ್ ಅವರ "ವೆಟ್ಟೈಯನ್" ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದಾರೆ.












Click it and Unblock the Notifications