Kriti Kharbanda: ಬಾಲಿವುಡ್ ನಟನ ಜೊತೆ ಹಸೆಮಣೆ ಏರಲು ಸಜ್ಜಾದ 'ಗೂಗ್ಲಿ' ನಟಿ ಕೃತಿ ಕರಬಂಧ

ಗೂಗ್ಲಿ, ಚಿರು ಸಿನಿಮಾಗಳ ಮೂಲಕ ಕನ್ನಡಿಗರ ಮನ ಸೆಳೆದ ನಟಿ ಕೃತಿ ಕರಬಂಧ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ, ನಟ ಯಶ್ ಅವರ ಜೊತೆಗಿನ 'ಗೂಗ್ಲಿ' ಸಿನಿಮಾ ಸಕ್ಸಸ್ ತಂದುಕೊಟ್ಟಿತ್ತು. ಈಗ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ತಮ್ಮ ಬಹುಕಾಲದ ಗೆಳೆಯ, ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲು ನಟಿ ಕೃತಿ ಕರಬಂಧ ಸಿದ್ಧತೆ ನಡೆಸಿದ್ದಾರೆ. ಬಾಲಿವುಡ್‌ನ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಒಂದು ಎಂದು ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂಧ ಜೋಡಿಯನ್ನು ಕರೆಯಲಾಗುತ್ತದೆ. ಇಬ್ಬರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.

Actress Kriti Kharbanda and Pulkit Samrat Are Getting Married in March

ಗೂಗ್ಲಿ ನಟಿ ಕೃತಿ ಕರಬಂಧ ಮದುವೆ

ಕಳೆದ ತಿಂಗಳು, ಈ ಜೋಡಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇರುವ ಕೆಲವು ಸುಂದರವಾದ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದವು. ಹೀಗಾಗಿ ಅಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನೆಟಿಜನ್‌ಗಳು ಊಹಿಸಿಕೊಂಡಿದ್ದಾರೆ. ಆದರೆ, ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೂ ಮೂಲವೊಂದು ಇವರ ನಿಶ್ಚಿತಾರ್ಥವಾಗಿದೆ ಎಂದು ತಿಳಿಸಿದೆ.

ನಟ ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂಧ 2019 ರ ಆಕ್ಷನ್-ಕಾಮಿಡಿ 'ಪಾಗಲ್‌ ಪಂತಿ' ಸಿನಿಮಾದಲ್ಲಿ ಕೆಲಸ ಮಾಡುವಾಗ ಡೇಟಿಂಗ್ ಪ್ರಾರಂಭಿಸಿದರು. ನಂತರ ಚಿತ್ರದ ಪ್ರಚಾರದ ಸಮಯದಲ್ಲಿ ತಾವು ಕಮಿಟ್ ಆಗಿರುವುದಾಗಿ ಘೋಷಿಸಿದ್ದರು. ಈ ಇಬ್ಬರ ಸಂಬಂಧಕ್ಕೆ ಐದು ವರ್ಷಗಳಾಗಿದ್ದು, ತತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ.

ಇತ್ತೀಚೆಗೆ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಮುಂದಿನ ಮಾರ್ಚ್ 13 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಪ್ರೇಮಿಗಳ ದಿನದಂದು ತಮ್ಮ ಮದುವೆ 'ಮಾರ್ಚ್' ನಲ್ಲಿ ಎಂಬ ಬಗ್ಗೆ ಸುಳಿವು ನೀಡಿದ್ದರು.

Actress Kriti Kharbanda and Pulkit Samrat Are Getting Married in March

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ನಟಿ ಕೃತಿ ಕರಬಂಧ ತಮ್ಮ ಪೋಸ್ಟ್‌ಗೆ " ಒಟ್ಟಿಗೆ ಕೈ ಕೈ ಹಿಡಿದು 'ಮಾರ್ಚ್' ಮಾಡೋಣ' ಎಂಬ ಶೀರ್ಷಿಕೆ ಕೊಟ್ಟಿದ್ದರು. ಇದಕ್ಕೆ ಪುಲ್ಕಿತ್ ಸಾಮ್ರಾಟ್ ಮಾಡೋಣ ಎಂದು ರಿಫ್ಲೈ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ಮದುವೆಯ ತಿಂಗಳು ಎಂದು ವದಂತಿ ಹಬ್ಬಿಸಿದ್ದರು.

ನಟ, ನಟಿಗೆ ಹತ್ತಿರವಿರುವ ಮೂಲವೊಂದು ಬಾಲಿವುಡ್ ಹಂಗಾಮಾಕ್ಕೆ ಮಾಹಿತಿ ನೀಡಿದೆ. "ಕೃತಿ ಮತ್ತು ಪುಲ್ಕಿತ್ ಈ ವರ್ಷ ಮದುವೆಯಾಗಲು ಬಯಸಿದ್ದಾರೆ. ಅವರು ದಿನಾಂಕವನ್ನು ಸಹ ನಿಗಧಿ ಮಾಡಿದ್ದಾರೆ. ಅವರ ಮದುವೆ ಮಾರ್ಚ್ 13 ರಂದು ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ" ಎಂದಿದೆ. ಆದರೆ, ಮದುವೆ ಎಲ್ಲಿ ಎಂಬ ಬಗ್ಗೆ ವಿವರಗಳು ಲಭ್ಯವಾಗಿಲ್ಲ.

ಈ ಹಿಂದೆ, ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಪುಲ್ಕಿತ್ ಸಾಮ್ರಾಟ್ ತಮ್ಮ ಗೆಳತಿ ಕೃತಿ ಕರಬಂಧ ಬಗ್ಗೆ ಮನಸಾರೆ ಹೊಗಳಿದ್ದರು. ತಾವುಬ್ಬರು ಹೇಗೆ ಒಬ್ಬರಿಗೊಬ್ಬರು ಸಪೋರ್ಟಿವ್ ಆಗಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದರು. "ನಾವಿಬ್ಬರೂ ಮಹತ್ವಾಕಾಂಕ್ಷೆಯ ವ್ಯಕ್ತಿಗಳು. ನಾವಿಬ್ಬರು ಉತ್ತಮ ಸ್ನೇಹಿತರು ಅಥವಾ ಸಂಗಾತಿಯಾಗಿ ನಮ್ಮ ನಮ್ಮ ಜೀವನದಲ್ಲಿ ಬೆಳೆಯಲು ಮತ್ತು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪರಸ್ಪರ ಸಪೋರ್ಟ್ ಮಾಡುತ್ತೇವೆ. ನನ್ನ ಜೀವನದಲ್ಲಿ ಆಕೆಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ" ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+