ನಟಿ ಜಾನ್ವಿ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ: ಯಾವ ಪಕ್ಷದಿಂದ?

ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ ಜನಪ್ರಿಯ ಸುದ್ದಿ ನಿರೂಪಕಿ ಜಾನ್ವಿ ಈಗ ಕನ್ನಡ ಚಿತ್ರರಂಗದ ನಟಿಯಾಗಿ ಹೊಸ ಹೆಜ್ಜೆಯಿಟ್ಟಿದ್ದಾರೆ. ಬಿಗ್ ಬಾಸ್ ವಿನ್ನರ್‌ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸುದ್ದಿ ನಿರೂಪಣೆಯಿಂದ ನಟಿಯಾಗಿ ಬಡ್ತಿ ಪಡೆದಿರುವ ಜಾನ್ವಿ ಅವರಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ದೊಡ್ಡ ಜನ ನಾಯಕಿಯಾಗುವ ಕನಸು ಇದೆಯಂತೆ.

ತಮ್ಮ ರಾಜಕೀಯ ಪ್ರವೇಶದ ಆಸಕ್ತಿಯ ಬಗ್ಗೆ ನಟಿ ಜಾನ್ವಿ ಮಿರರ್‌ ಕನ್ನಡದ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. 'ನಾನು ಎಲ್ಲಾ ನಟಿಯರಿಂದ ಸ್ಪೂರ್ತಿ ಪಡೆದಿದ್ದೇನೆ. ದೊಡ್ಡ ದೊಡ್ಡ ಸಾಧನೆ ಮಾಡಿದವರಿಂದ ಸ್ಪೂರ್ತಿ ಪಡೆದಿದ್ದೇನೆ. ಆದರೆ ಜಯಲಲಿತಾ ಅವರನ್ನು ನೋಡಿದಾಗ ಜಾಸ್ತಿ ಇಷ್ಟ ಆಗುತ್ತಾರೆ' ಎಂದಿದ್ದಾರೆ.

Actress Janvi s Aspirations for Politics in Karnataka Insights and Inspirations

'ಎಂತಹ ಡೈನಾಮಿಕ್‌ ಲೇಡಿ, ಎಂತಹ ಗಂಡಸರನೆಲ್ಲಾ ಮುಣ್ಣು ಮುಕ್ಕಿಸಿದ್ದಾರೆ. ಏನು ಜ್ಞಾನ, ಏನು ಧೈರ್ಯ ಅವರ ವಿಡಿಯೋಗಳನ್ನು ನಾನು ಪದೇ ಪದೇ ನೋಡುತ್ತಿರುತ್ತೇನೆ. ಅದನ್ನು ನೋಡಿದಾಗ ನಿಜವಾಗಿಯೂ ವಾವ್‌ ಅನಿಸುತ್ತದೆ. ಅವರು ಒಂದು ಘಟಾನುಘಟಿ ಮಹಿಳೆ ಎನ್ನಬಹುದು. ಒಂದು ಹೆಣ್ಣು ಮನಸ್ಸು ಮಾಡಿದರೆ ಎಂತವರನ್ನಾದರೂ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಅವರು ಸಾಕ್ಷಿಯಾಗುತ್ತಾರೆ' ಎಂದರು.

'ಈ ನಟನಾ ಜರ್ನಿಯಲ್ಲಿ ಚಿಕ್ಕದಾಗಿ ಹೆಜ್ಜೆ ಇಟ್ಟಿದ್ದೇನೆ. ಅವರೆಲ್ಲಾ ನನಗೆ ಸ್ಪೂರ್ತಿಯಾಗುತ್ತಾರೆ. ನೋಡೋಣ ದೇವರು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಅಂತಾ. ನನ್ನ ಶ್ರಮ ಹಾಕೇ ಹಾಕುತ್ತೇನೆ. ಆದರೆ ಎಲ್ಲಿವರೆಗೂ ಗುರಿ ತಲುಪುತ್ತೇವೆ ಎನ್ನುವುದು ಗೊತ್ತಿಲ್ಲ. ನಮ್ಮ ಹಣೆಯಲ್ಲಿ ಏನು ಬರೆದಿದೆ ಗೊತ್ತಿಲ್ಲ' ಎಂದು ಹೇಳಿದರು.

'ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಆದರೆ ಇಲ್ಲಿನ ಒಂದು ಪರಿಸ್ಥಿತಿ ನೋಡಿದರೆ ದುಡ್ಡಿಲ್ಲದಿದ್ದರೆ ಏನು ಆಗಲ್ಲ ಅನಿಸುತ್ತದೆ. ಆದರೆ ಗೊತ್ತಿಲ್ಲ ವಿಧಿ ಹೇಗೆ ಇದೆಯೋ. ಆಸಕ್ತಿ ಇದ್ದರೆ ಅದರ ಕಡೆ ಗಮನ ಕೊಟ್ಟು ಕೆಲಸ ಮಾಡಬೇಕು. ನನ್ನ ಪರಿಸ್ಥಿತಿ ಹಾಗಿಲ್ಲ. ಮನೆ ಜವಾಬ್ದಾರಿ ಇದೆ. ಆದರೆ ನನಗೆ ರಾಜಕೀಯ ಇಷ್ಟ. ನಾನು ಚಿಕ್ಕವಳಿಂದಲೂ ಏನಾದರೂ ಊಹೆ ಮಾಡಿಕೊಳ್ಳುತ್ತಿರುತ್ತೇನೆ. ನಾನು ದೊಡ್ಡ ಲೀಡರ್‌ ಆಗಿರುತ್ತೇನೆ. ನನ್ನ ಹಿಂದೆ ಎಲ್ಲಾ ಜನ ಬರುತ್ತಾರೆ. ನಾನು ಸಮಾಜ ಸೇವೆ ಮಾಡುತ್ತಿರುತ್ತೇನೆ. ಎಲ್ಲರೂ ಜೈಕಾರ ಹಾಕುತ್ತಾರೆ ಎನ್ನುವುದೇ ನನ್ನ ಕಲ್ಪನೆ.

Actress Janvi s Aspirations for Politics in Karnataka Insights and Inspirations

ನಾನು ಮನೆಯಲ್ಲಿದ್ದು ನಿದ್ದೆ ಬಂದಿಲ್ಲ ಎಂದರೆ ಇದನ್ನೇ ಊಹಿಸಿಕೊಳ್ಳುತ್ತಿರುತ್ತೇನೆ. ನನ್ನ ಸ್ನೇಹಿತರಿಗೆಲ್ಲಾ ಹೇಳುತ್ತಿರುತ್ತೇನೆ. ಪವರ್‌ಫುಲ್‌ ಮಹಿಳೆಯಾಗಲು ಆದಕ್ಕೆ ಒಂದು ವೇದಿಕೆ ಬೇಕು. ಆ ರೀತಿಯ ಆಸೆ ನನಗೆ ಇದೆ. ಆದರೆ ಪರಿಸ್ಥಿತಿ ನೋಡಿದರೆ ದುಡ್ಡಿದ್ದರೆ ದುನಿಯಾ ಎನ್ನುವ ರೀತಿ ಇದೆ. ರಾಜಕೀಯದಲ್ಲಿ ಪ್ರಾಮಾಣಿಕತೆ ಎನ್ನುವುದಕ್ಕಿಂತ ದುಡ್ಡಿರಬೇಕು. ಶಕ್ತಿವಂತರಾಗಿರಬೇಕು. ಅದರಲ್ಲೂ ನಮ್ಮ ಕರ್ನಾಟಕ ರಾಜಕೀಯ ಬೇರೆ ಇದೆ. ಇಲ್ಲಿ ಪುರುಷರದ್ದೇ ಮೇಲುಗೈ' ಎಂದು ಜಾನ್ವಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+