ನಾವಿಬ್ಬರು ಮೂವರಾಗಿ ಮೂರು ತಿಂಗಳಾಯ್ತು- ಮಗನ ಫೋಟೋ ಹಂಚಿಕೊಂಡ ನಟಿ ಹರಿಪ್ರಿಯಾ
ಹಿತ್ತಲಕ ಕರಿಬ್ಯಾಡ ಮಾವ ಅಂತ ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ ಹೆಜ್ಜೆ ಹಾಕಿ ಸಾಕಷ್ಟು ಜನಪ್ರಿಯತೆ ಪಡೆದ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಹಾಗೂ ತಮ್ಮ ಪತಿ ವಸಿಷ್ಠ ಸಿಂಹ ಅವರೊಂದಿಗೆ ತಮ್ಮ ಮೂರು ತಿಂಗಳ ಮಗನ ಫೋಟೋವನ್ನು ಶೇರ್ ಮಾಡಿದ್ದಾರೆ.
ಹರಿಪ್ರಿಯಾ ಮುದ್ದಾದ ಮಗುವಿಗೆ ಜನ್ಮ ನೀಡಿ ಒರೋಬ್ಬರಿಗೆ ಮೂರು ತಿಂಗಳು ಕಳೆದಿವೆ. ಜನವರಿ 26ರಂದು ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೂರು ತಿಂಗಳು ಕಳೆದ ಬಳಿಕ ಏಪ್ರಿಲ್ 26ರಂದು ತಮ್ಮ ಮಗುವಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಮಗುವಾದ ಬಳಿಕ ಹರಿಪ್ರಿಯಾ ಸಿನಿಮಾಕ್ಕೆ ಕೊಂಚ ಬ್ರೇಕ್ ಹಾಕಿದ್ದು ಮಗುವಿನ ಆರೈಕೆಯಲ್ಲಿ ಬ್ಯೂಸಿ ಆಗಿದ್ದಾರೆ.

2023ರ ಜನವರಿ 26ರಂದು ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವರ್ಷ ಜನವರಿ 26ರಂದು ಹರಿಪ್ರಿಯಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಇದೀಗ ಅವರು ಮೂರು ತಿಂಗಳಾದ ಬಳಿಕ ಬ್ಲ್ಯಾಕ್ ಆಂಡ್ ವೈಟ್‌ನಲ್ಲಿರುವ ಮಗುವಿನ ಪೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಕ್ಕೆ ನಾವಿಬ್ಬರು ಮೂವರಾಗಿ ಇಂದಿಗೆ ಮೂರು ತಿಂಗಳಾಯ್ತು ಎಂದು ಬರೆದುಕೊಂಡಿದ್ದಾರೆ. ಈ ಫೋಟೋಕ್ಕೆ ಹರಿಪ್ರಿಯಾ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು ಮಗುವನ್ನು ವರ್ಣಿಸಿದ್ದಾರೆ.
ಈ ಹಿಂದೆ ಕನ್ನಡ ಚಿತ್ರರಂಗದ ಈ ಸ್ಟಾರ್ ದಂಪತಿ ಮಗು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ನಟಿ ಹರಿಪ್ರಿಯಾ ಅವರ ಸೀಮಂತ ನಡೆದ ಬೆನ್ನಲ್ಲೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಫೋಟೊವನ್ನು ಜನವರಿ 13 ರಂದು ವೈರಲ್ ಮಾಡಲಾಗಿತ್ತು.
ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ನಟ ನಟಿಯರು, ಅವರ ವೈಯಕ್ತಿಕ ಜೀವನದ ಕುರಿತು ಸಾಕಷ್ಟು ಪೋಸ್ಟ್‌ಗಳು ವೈರಲ್ ಆಗುತ್ತವೆ. ಅದರಲ್ಲೂ ನಟ ನಟಿಯರ ಡೇಟಿಂಗ್, ಮದುವೆ, ಮಕ್ಕಳ ಫೋಟೋಗಳು, ಪ್ರಗ್ನೆಂಟ್, ಸೀಮಂತ ಕುರಿತು ಟ್ರೋಲ್ ಆಗುತ್ತವೆ. ಅಂತೆಯೇ ಹರಿಪ್ರಿಯಾ ಮಗುವಿನದ್ದು ಎನ್ನಲಾದ ಫೋಟೋ ವೈರಲ್ ಆಗಿತ್ತು.

ಹರಿಪ್ರಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಕರುನಾಡ ಸುದ್ದಿ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಮಗುವಿನ ಫೋಟೋ ಹಂಚಿಕೊಳ್ಳಲಾಗಿತ್ತು. ಆದರೆ ಈ ಪೋಸ್ಟ್ ಹರಿಪ್ರಿಯಾ ಅವರಾಗಲಿ ವಸಿಷ್ಠ ಸಿಂಹ ಆಗಲಿ ಹಂಚಿಕೊಂಡ ಫೋಟೋ ಆಗಿರಲಿಲ್ಲ.
ಜನವರಿ 26ರಂದು ಗಂಡು ಮಗುವಿನ ಜನನವಾಗಿತ್ತಾದರೂ ಈ ದಂಪತಿ ಮಗುವಿನ ಫೋಟೋ ಎಲ್ಲೂ ಸಹ ಹಂಚಿಕೊಂಡಿರಲಿಲ್ಲ. ಹರಿಪ್ರಿಯಾ ಅವರ ತಾಯಿ ಕೂಡ ವೈರಲ್ ಆದ ಈ ಮಗುವಿನ ಫೋಟೋ ಅಸಲಿ ಅಲ್ಲ ಎಂದಿದ್ದರು. ಹೀಗಾಗಿ ಅದನ್ನು ನಕಲಿ ಫೋಟೋ ಎನ್ನಲಾಗಿತ್ತು. ಇದೀಗ ಕಳೆದ ದಿನ ಅಂದರೆ ಏಪ್ರಿಲ್ 26ರಂದು ಮೊದಲ ಬಾರಿಗೆ ಹರಿಪ್ರಿಯಾ ವಸಿಷ್ಠಾ ಸ್ಟಾರ್ ದಂಪತಿ ತಮ್ಮ ಗಂಡು ಮಗುವಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಮುದ್ದಾದ ಮಗುವನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.












Click it and Unblock the Notifications