Gouri Kishan: ಖ್ಯಾತ ನಟಿಗೆ ಪ್ರೆಸ್‌ಮೀಟ್‌ನಲ್ಲೇ ಬಾಡಿ ಶೇಮಿಂಗ್, ತೂಕದ ಬಗ್ಗೆ ಕಾಮೆಂಟ್
ಖ್ಯಾತ ನಟಿಗೆ ಪ್ರೆಸ್‌ಮೀಟ್‌ನಲ್ಲೇ ಬಾಡಿ ಶೇಮಿಂಗ್ ಮಾಡಿರುವ ಘಟನೆ ನಡೆದಿದೆ. ತಮಿಳು ನಟಿ ಗೌರಿ ಕಿಶನ್ ಅವರಿಗೆ ತಮ್ಮ ಹೊಸ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ನಟಿಯ ತೂಕದ ಬಗ್ಗೆ ಲೈಂಗಿಕವಾಗಿ ಟೀಕಿಸಿದ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನಟಿ ಆ ಪ್ರಶ್ನೆಗೆ ಅಲ್ಲೇ ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟಿದ್ದಾರೆ. ಪ್ರತಿಕೋದ್ಯಮದ ಹೆಸರಿನಲ್ಲಿ ಪತ್ರಕರ್ತರ ಈ ನಡೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಗೌರಿ ಕಿಶನ್ ತಿರುಗೇಟು ನೀಡಿರುವ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಖ್ಯಾತ ಸಿನಿಮಾ ನಟ, ನಟಿಯರು ಗೌರಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಘಟನೆಯನ್ನು ಖಂಡಿಸಿದ್ದಾರೆ.
ಗೌರಿ ಅವರ ಸಹನಟ ಆದಿತ್ಯ ಮಾಧವನ್ ಅವರನ್ನು ವರದಿಗಾರರೊಬ್ಬರು, ದೃಶ್ಯವೊಂದರಲ್ಲಿ ಅವರ ತೂಕವನ್ನು ಉಲ್ಲೇಖಿಸಿ ಅವರನ್ನು ಎತ್ತುವುದು ಕಷ್ಟವೇ ಎಂದು ಕೇಳಿದಾಗ ಈ ವಿವಾದ ಪ್ರಾರಂಭವಾಗಿದೆ. ಆಗ ಪ್ರೆಸ್‌ಮೀಟ್‌ನಲ್ಲಿದ್ದ ಗೌರಿ ಮಧ್ಯಪ್ರವೇಶಿಸಿ, ನನ್ನ ತೂಕವು ನಿಮಗೆ ಹೇಗೆ ಸಂಬಂಧಿಸಿದೆ? ಅದು ಈ ಚಿತ್ರಕ್ಕೆ ಹೇಗೆ ಪ್ರಸ್ತುತವಾಗಿದೆ? ನನ್ನ ತೂಕವು ನನ್ನ ಆಯ್ಕೆ. ಅದು ನನ್ನ ಪ್ರತಿಭೆಯನ್ನು ಅರ್ಥೈಸುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೆ ಪ್ರತಕರ್ತರು ತಮ್ಮ ಪ್ರಶ್ನೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಆಗ ಮತ್ತೆ ಚಳಿ ಬಿಡಿಸಿದ ನಟಿ, ಪ್ರತಿಯೊಬ್ಬ ಮಹಿಳೆಯೂ ವಿಭಿನ್ನ ದೇಹ ಪ್ರಕಾರವನ್ನು ಹೊಂದಿರುತ್ತಾಳೆ. ಬಾಡಿ-ಶೇಮಿಂಗ್ ಅನ್ನು ಸಾಮಾನ್ಯಗೊಳಿಸುವುದನ್ನು ನಿಲ್ಲಿಸಿ. ನಾನು ಪಾತ್ರಗಳ ಆಧಾರಿತ ಚಿತ್ರಗಳಲ್ಲಿ ಶ್ರಮಪಟ್ಟು ಕೆಲಸ ಹಾಕಿದ್ದೇನೆ. ಇದಕ್ಕೆ ನಿಮ್ಮ ದೃಢೀಕರಣದ ಅಗತ್ಯವಿಲ್ಲ ಎಂದು ಜೋರುಧ್ವನಿಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಘಟನೆಯು ತಮಿಳು ಸಿನಿಮಾರಂಗದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ನಟಿ ಬೆಂಬಲಕ್ಕೆ ಹಲವು ಕಲಾವಿದರು ನಿಂತಿದ್ದಾರೆ.
ಅದೇ ಪ್ರಶ್ನೆ ನಿಮ್ಮನೆ ಮಹಿಳೆಯರಿಗೆ ಕೇಳಿದ್ರೆ ಹೇಗಿರುತ್ತೆ?
ನಟಿ ಖುಷ್ಬೂ ಸುಂದರ್ ಕೂಡ ವರದಿಗಾರನ ನಡೆ ಖಂಡಿಸಿದ್ದಾರೆ. ಪತ್ರಿಕೋದ್ಯಮ ತನ್ನ ನೆಲೆಯನ್ನು ಕಳೆದುಕೊಂಡಿದೆ. ಪತ್ರಕರ್ತರು ಎಂದು ಕರೆಯಲ್ಪಡುವವರು ಪತ್ರಿಕೋದ್ಯಮವನ್ನು ಗಟಾರಕ್ಕೆ ಕೊಂಡೊಯ್ಯುತ್ತಾರೆ. ಮಹಿಳೆಯ ತೂಕ ಎಷ್ಟು ಎಂಬುದು ಅವರ ಕೆಲಸವಲ್ಲ. ಅಲ್ಲದೆ ನಟನ ಬಳಿ ಅದರ ಬಗ್ಗೆ ಕೇಳುವುದು ಎಂತಹ ನಾಚಿಕೆಗೇಡಿನ ಸಂಗತಿ. ತನ್ನ ನಿಲುವನ್ನು ಸಮರ್ಥಿಸಿಕೊಂಡು ಅದನ್ನು ಮರಳಿ ನೀಡಿದ ಯುವ ನಟಿ ಗೌರಿ ಅವರಿಗೆ ಅಭಿನಂದನೆಗಳು. ನಾವು ಮಹಿಳೆಯರು, ನಟರು, ತಮ್ಮ ಕುಟುಂಬಗಳಲ್ಲಿನ ಮಹಿಳೆಯರ ಬಗ್ಗೆ ಅದೇ ಪ್ರಶ್ನೆಯನ್ನು ಕೇಳಿದರೆ, ಪುರುಷರು ಸರಿಯೇ? ಗೌರವ ಎಂದಿಗೂ ಒಂದು ಕಡೆಯಿಂದ ಸಿಗುವುದಿಲ್ಲ. ನೀವು ಗೌರವಿಸಲ್ಪಡಬೇಕೆಂದು ನಿರೀಕ್ಷಿಸಿದರೆ, ಮೊದಲು ಗೌರವ ನೀಡಲು ಕಲಿಯಿರಿ" ಎಂದು ಸೋಷಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ಪಡಿಸಿದ್ದಾರೆ.












Click it and Unblock the Notifications