ಮದುವೆ ಆಗದೇ ಗರ್ಭಿಣಿಯಾದ ಭಾವನಾ: ಐವಿಎಫ್‌ಗೆ ವೀರ್ಯ ದಾನ ಮಾಡಿದ ವ್ಯಕ್ತಿ ಯಾರು?
ನಟಿ ಭಾವನಾ ರಾಮಣ್ಣ ಬೋಲ್ಡ್ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ನಟಿ ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಲು ಹೊರಟಿರುವ ವಿಚಾರ ಸಧ್ಯ ಭಾರೀ ಚರ್ಚೆಯಾಗುತ್ತಿದೆ. ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳ ಮಕ್ಕಳಿಗೆ ಭಾವನಾ ತಾಯಿಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧವಾಗಿ ಚರ್ಚೆ ನಡೆಯುತ್ತಿದೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಟಿ ಭಾವನಾ ರಾಮಣ್ಣ ಅವರು ತಮ್ಮ ನಿರ್ಧಾರದ ಬಗ್ಗೆ ಆಕೆ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.
ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳ ಮಕ್ಕಳಿಗೆ ತಾಯಿಯಾಗುತ್ತಿರುವ ನಟಿ ಭಾವನಾ ಅವರು ಈಗಾಗಲೇ ಸಾಕಷ್ಟು ಸಂದರ್ಶನಗಳಲ್ಲಿ ಕೆಲವರ ಗೊಂದಲಗಳು ಹಾಗೂ ಟೀಕೆ, ಟಿಪ್ಪಣಿಗಳ ಬಗ್ಗೆಯೂ ಪ್ರತಿಕ್ರಿಯಿಸುತ್ತಿದ್ದಾರೆ. ಐವಿಎಫ್ ಚಿಕಿತ್ಸೆಗಾಗಿ ನನ್ನ ಆಪ್ತರು ದೆಹಲಿಗೆ ಹೋಗುವಂತೆ ಸಲಹೆ ಕೊಟ್ಟಿದ್ದರು. ಆದರೆ ನಾನು ಯಾಕೆ ಭಯ ಪಡಬೇಕು, ಎಲ್ಲರಿಗೂ ಗೊತ್ತಾಗಲಿ ಎಂದು ಬೆಂಗಳೂರಿನಲ್ಲೇ ಅದಕ್ಕೆ ಮುಂದಾದೆ ಎಂದು ಕೂಡ ನಟಿ ಭಾವನಾ ರಾಮಣ್ಣ ಅವರು ಹೇಳಿದ್ದಾರೆ.

ಇನ್ನೂ ಐವಿಎಫ್ ತಂತ್ರಜ್ಞಾನದ ಮೂಲಕ ಮಕ್ಕಳ ಪಡೆಯಲು ಮುಂದಾಗಿರುವ ನಟಿ ಭಾವನಾ ಅವರು, ಐವಿಎಫ್ ಪ್ರಕ್ರಿಯೆ ವೇಳೆ ದಾನಿಯ ಆಯ್ಕೆ ಹೇಗೆ ನಡೆಯುತ್ತದೆ? ದಾನಿಯನ್ನ ಭಾವನಾ ಖುದ್ದಾಗಿ ಆಯ್ಕೆ ಮಾಡಿಕೊಂಡ್ರಾ? ದಾನಿಗಳಿಗೆ ಇರುವ ನಿಯಮಗಳೇನು? ಈ ಬಗ್ಗೆ ಭಾವನಾ ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮದುವೆಯಾಗದೆ, ಸಂಗಾತಿ ಇಲ್ಲದೆ, ಐವಿಎಫ್ ಮುಖಾಂತರ ಭಾವನಾ ರಾಮಣ್ಣ ಗರ್ಭ ಧರಿಸಿದ್ದಾರೆ. ಈಗಾಗಲೇ ನಟಿ ಭಾವನಾ ಅವರಿಗೆ ಆರು ತಿಂಗಳು ತುಂಬು ಗರ್ಭಿಣಿಯಾಗಿದ್ದಾರೆ.
ಇನ್ನೂ ಭಾವನಾ ಅವರಿಗೆ ಸೆಪ್ಟೆಂಬರ್ ಅಥವಾ ಆಕ್ಟೋಬರ್ ಮೊದಲ ವಾರದ ವೇಳೆ ಅವಳಿ ಮಕ್ಕಳಿಗೆ ನಟಿ ಭಾವನಾ ಅವರು ಜನ್ಮ ನೀಡಲಿದ್ದಾರೆ. ಸದ್ಯ ಭಾವನಾ ಅವರು ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗುತ್ತಿರುವುದಕ್ಕೆ ಸಾಕಷ್ಟು ಟೀಕೆ ಹಾಗೂ ಚರ್ಚೆಗಳ ನಡುವೆ ಭಾವನಾ ಅವರಿಗೆ ವೀರ್ಯವನ್ನ ದಾನ ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ನಟಿ ಭಾವನಾ ರಾಮಣ್ಣ ಅವರು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಇನ್ ವಿಟ್ರೊ ಫರ್ಟಿಲೈಸೇಶನ್(IVF) ಎನ್ನುವುದು ಒಂದು ಸಹಾಯಕ ಸಂತಾನೋತ್ಪತ್ತಿ ತಂತ್ರ. ಭ್ರೂಣವನ್ನು ರಚಿಸಲು ಪ್ರಯೋಗಾಲಯದಲ್ಲಿ ಮಹಿಳೆಯಿಂದ ಪಡೆದ ಅಂಡಾಣು ಮತ್ತು ದಾನಿಯಿಂದ ಪಡೆದ ವೀರ್ಯವನ್ನು ಸಂಯೋಜಿಸಲಾಗುತ್ತದೆ. ಬಳಿಕ ಆ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ದಾನಿಗಳನ್ನು ಆಯ್ಕೆಮಾಡುವಾಗ, ದಾನಿಯ ಆರೋಗ್ಯ, ವಯಸ್ಸು, ವಂಶವಾಹಿ ಹಿನ್ನೆಲೆ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ.
ಡೋನರ್ ಆಯ್ಕೆ ಬಗ್ಗೆ ಒಂದಷ್ಟು ನಿಯಮಾವಳಿಗಳಿವೆ. ಪೇಷೆಂಟ್ ಅಗತ್ಯತೆಗೆ ತಕ್ಕಂತೆ ಏನೆಲ್ಲಾ ಅರ್ಹತೆಗಳಿರಬೇಕು ಡೋನರ್‌ಗೆ ಎನ್ನುವುದು ಇದೆ. ಯಾವ ಡೋನರ್ ಅಲ್ಲಿ ಏನೇನು ಇರಬೇಕು, ಡೋನರ್ ಯಾವ ವಯಸ್ಸಾಗಿರಬೇಕು ಎಲ್ಲವನ್ನು ಪರಿಗಣಿಸುತ್ತಾರೆ. ಡೋನರ್ ರಕ್ತಪರೀಕ್ಷೆ ನಡೆಸುವುದರಿಂದ ಸಾಕಷ್ಟು ಮಾಹಿತಿ ಸಿಗುತ್ತದೆ. ಅವರ ದೈಹಿಕ, ಮಾನಸಿಕ ಹಾಗೂ ಕ್ರಿಮಿನಲ್ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ನಟಿ ಭಾವನಾ ಹೇಳಿದ್ದಾರೆ.
ಈ ಬಗ್ಗೆ ನಾನು ವೈದ್ಯರನ್ನು ನಂಬಿದೆ. ಅವ್ರು ಹೇಳಿದ ಡೋನರ್ ಅನ್ನು ಒಪ್ಪಿಕೊಂಡೆ. ಆದರೆ ನಾನು ದಕ್ಷಿಣ ಭಾರತದ ಡೋನರ್ ಬೇಕು ಎಂದಿದ್ದೆ. ನಾನು ದೆಹಲಿಗೆ ಹೋಗಿ ಚಿಕಿತ್ಸೆ ಪಡೆದಿದ್ದರೆ ಉತ್ತರ ಭಾರತದ ಡೋನರ್ ಸಿಗುವ ಸಾಧ್ಯತೆಯಿತ್ತು. ಆಹಾರ ಶೈಲಿ, ಜೀನ್ಸ್, ಡಿಎನ್‌ಎ ಎಲ್ಲಾ ಒಂದೇ ತರ ಇರುತ್ತದೆ ಎನ್ನುವ ಕಾರಣಕ್ಕೆ ನಾನು ದಕ್ಷಿಣದವರು ಬೇಕು ಎಂದಿದ್ದೆ. ಇನ್ನುಳಿದಂತೆ ನಾನು ಏನು ಕೇಳಲಿಲ್ಲ. ಈಗ ದೊಡ್ಡ ದೊಡ್ಡ ಆಸ್ಪತ್ರೆ ಬ್ರ್ಯಾಂಡ್‌ಗಳಿವೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ನಟಿ ಭಾವನಾ ಹೇಳಿದ್ದಾರೆ.












Click it and Unblock the Notifications