Actress Anusha Rai: ಬಿಗ್ ಬಾಸ್ ಅನುಷಾ ರೈ ಮದುವೆಯಾಗುವ ಹುಡುಗ.. Actor Darshan ಥರ ಇರ್ಬೇಕಂತೆ..
Actress Anusha Rai: ಸಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಿನಿ ರಂಗದಲ್ಲಿ ವಿವಾಹದ ವಿಚಾರಗಳು ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲಿವೆ. ಅದರಲ್ಲೂ ಕೆಲ ನಟ, ನಟಿ, ನಿರೂಪಾಕ, ನಿರೂಪಾಕಿಯರು ತನ್ನ ಲೈಫ್ ಪಾರ್ಟ್ನರ್ ಹೇಗಿರಬೇಕೆನ್ನುವ ಆಸೆಯನ್ನು ಹೊರಹಾಕುತ್ತಲಿರುತ್ತಾರೆ. ಹಾಗೆಯೇ ಇದೀಗ ಹಾಗೆಯೇ ಇದೀಗ ಬಿಗ್ ಬಾಸ್ 11ರ ಸ್ಪರ್ಧಿಯಾಗಿದ್ದ ಅನುಷಾ ರೈ ಕೂಡ ಮದುವೆ ಆಗುವ ಗುಟ್ಟೊಂದನ್ನ ಬಿಚ್ಚಿಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ಹುಡುರಿಯರಿಗೆ ಈ ಪ್ರಶ್ನೆ ಕೇಳಿದರೆ, ಬಹುತೇಕ ಮಂದಿ ವಿವಾಹ ಆಗುವವರು ಇಂತಹ ನಟನ ಥರ ಇರಬೇಕು ಅಥವಾ ದೊಡ್ಡ ಬ್ಯುಸಿನೆಸ್‌ಮೆನ್ ಆಗಿರಬೇಕು ಎಂದು ಹೇಳುತ್ತಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದರಲ್ಲೂ, ನಟ, ನಟಿಯರು ಈ ಬಗ್ಗೆ ಪ್ರತಿಕ್ರಿಯಿಸಿದರೆ ಅದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿಬಿಡುತ್ತದೆ. ಇಂತಹ ಸುಮಾರು ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಹೀಗೆ ಮನದ ಆಸೆಯನ್ನು ಹೊರಹಾಕುವುದು ತಪ್ಪಲ್ಲ. ಇದು ಅವರವರ ವಾಕ್ ಸ್ವಾತಂತ್ರ್ಯ ಆಗಿರುತ್ತದೆ.

ಹಾಗೆಯೇ ಇದೀಗ ಬಿಗ್ ಬಾಸ್ 11ರ ಸ್ಪರ್ಧಿ ಅನುಷಾ ರೈ ಅವರಿಗೆ ಮಾಧ್ಯಮದವರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಅವರು, ನನ್ನ ಮದುವೆನಾ.. ನನ್ ಮದು ನೋಡುವುದಕ್ಕೆ ಅಷ್ಟೊಂದು ಆಸೆನಾ ನಿಮಗೆಲ್ಲಾ.. ಮೊದಲು ಹುಡುಗನನ್ನ ಹುಡುಕಿ ಎಂದು ಹೇಳಿ ಗಮನ ಸೆಳೆದಿದ್ಧಾರೆ.
ನಿಮ್ಮನ್ನ ಮದುವೆ ಆಗುವ ಹುಡುಗ ಹೇಗೆ ಇರಬೇಕು, ಯಾವೆಲ್ಲಾ ಗುಣಲಕ್ಷಣಗಳು ಇರಬೇಕೆಂದು ಕೇಳಿದ ಪ್ರಶ್ನೆಗೂ ಅನುಷಾ ರೈ ಉತ್ತರಿಸಿದ್ದಾರೆ. ನನ್ನನು ಮದುವೆ ಆಗುವ ಹುಡುಗ ನಮ್ಮ ಡಿ ಬಾಸ್ ಥರ ಅಂದರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೀತಿಯಲ್ಲಿ ಇರಬೇಕು ಎಂದು ಹೇಳುವ ಮನದರನಸ ಮನದಾಸೆಯನ್ನು ಬಿಚ್ಚಿಟ್ಟಿದ್ದು, ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಅನುಷಾ ರೈ ಅವರು ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು.
ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ನಾಗಕನ್ನಿಕೆ ಹಾಗೂ ರಾಜಕುಮಾರಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ 11ಕ್ಕೂ ಎಂಟ್ರಿ ಕೊಟ್ಟಿದ್ದು, ಅಲ್ಲಿಂದ ಹೊರಗಡೆ ಬಂದಮೇಲೆ ದೇಶ-ವಿದೇಶ ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಹೊಸ ಹೊಸ ಪೋಸ್ಟರ್, ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಾ ಮಿಂಚುತ್ತಿದ್ದಾರೆ.












Click it and Unblock the Notifications