ಡಿವೋರ್ಸ್ ಅಂತೂ ನಾನು ನಂಬಲ್ಲ: ಬಿಗ್‌ ಬಾಸ್‌ ಅನುಷಾ ರೈ ಹೀಗಂದಿದ್ಯಾಕೆ?

ನನಗೆ ಲವ್‌ ಮ್ಯಾರೇಜ್‌ ಇಷ್ಟ. ಜೊತೆಗೆ ಅರೇಂಜ್‌ ಮ್ಯಾರೇಜ್‌ ಕೂಡ ಇಷ್ಟ ಇದೆ. ಅರೇಂಜ್‌ ಮ್ಯಾರೇಜ್‌ ಆದ್ರೂನೂ ಎರಡು ಕುಟುಂಬಗಳು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ನಾನು ಮತ್ತೆ ನನ್ನ ಸಂಗಾತಿ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾವು ಇಷ್ಟಪಟ್ಟವರನ್ನೇ ಮದುವೆ ಆಗುವುದು ಒಳ್ಳೆಯದು. ಯಾಕೆಂದರೆ ನಾವಿಷ್ಟಪಟ್ಟವರ ಜೊತೆ ನಮ್ಮ ಹೊಂದಾಣಿಕೆ ಉತ್ತಮವಾಗಿರುತ್ತದೆ ಎಂದು ನಟಿ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಅನುಷಾ ರೈ ಹೇಳಿದ್ದಾರೆ.

ಇತ್ತೀಚಿಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆ ಇರುವ ನಿರೀಕ್ಷೆಗಳ ಬಗ್ಗೆ ಮಾತನಾಡಿದ ಅವರು, ನಾವು ಇಷ್ಟಪಟ್ಟವರನ್ನೇ ಮದುವೆ ಆದರೆ ಅವರ ಇಷ್ಟ ಕಷ್ಟಗಳೆಲ್ಲಾ ಮೊದಲೇ ನಮಗೆ ಗೊತ್ತಿರುತ್ತದೆ. ಹೀಗಾಗಿ ಬಹುಶಃ ಲವ್‌ ಕಮ್‌ ಅರೇಂಜ್‌ ಮ್ಯಾರೇಜ್ ಆದರೆ ಚಂದ ಅಂತಾ ನನಗೆ ಅನಿಸುತ್ತದೆ ಎಂದು ನಟಿ ಅನುಷಾ ರೈ ಹೇಳಿದರು.

Actress Anusha Rai Discusses Her Views On Love and Arranged Marriage Expectations

ಇನ್ನು ತಮ್ಮ ಬಾಳ ಸಂಗಾತಿ ಮೇಲಿರುವ ನಿರೀಕ್ಷೆ ಬಗ್ಗೆ ಮಾತನಾಡಿದ ಅವರು, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮ ಮಧ್ಯ ಹೊಂದಾಣಿಕೆ ಇರಬೇಕು. ಎಲ್ಲವೂ ಅನುಕೂಲ ಇದ್ದು ಸೆಟೆಲ್‌ ಆಗಿರಬೇಕು ಎನ್ನುವುದೆಲ್ಲಾ ಇಲ್ಲ. ತುಂಬಾ ಶ್ರೀಮಂತಿಕೆ ಇಲ್ಲದೇ ಇದ್ದರೂ ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು. ಜೊತೆಗೆ ಜೋಡಿನೂ ಚೆನ್ನಾಗಿರಬೇಕು ಎಂದರು.

ನಿಜ ಹೇಳಬೇಕು ಅಂದರೆ ನನಗೆ ಕಪ್ಪಗಿರುವ ಹುಡುಗ ಇಷ್ಟ. ತೀರಾ ಕ್ಯೂಟ್‌ ಆಗಿರುವವರಿಗಿಂತ ಸ್ವಲ್ಪ ಮಾಸ್‌ ಆಗಿರುವವರು ಇಷ್ಟ ಆಗುತ್ತಾರೆ. ನನ್ನ ಗುಣದ ವಿರುದ್ಧ ಗುಣದ ಹುಡುಗ ಸಿಕ್ಕರೆ ಏನೂ ಮಾಡಲು ಆಗುವುದಿಲ್ಲ. ಡಿವೋರ್ಸ್ ಅಂತೂ ನಾನು ನಂಬಲ್ಲ. ಎಂತವನನ್ನೋ ಕಟ್ಟಿಕೊಂಡಿದ್ದೇನೆ. ಜೊತೆಯಲ್ಲಿ ಇರಬೇಕು ಇರುತ್ತೇನೆ ಅಷ್ಟೇ. ಬಿಟ್ಟಂತೂ ಹೋಗಲ್ಲ ಎಂದು ಅನುಷಾ ಹೇಳಿದರು.

Actress Anusha Rai Discusses Her Views On Love and Arranged Marriage Expectations

ಇನ್ನು ಧರ್ಮ ಕೀರ್ತೀರಾಜ್‌ ರೀತಿಯ ಹುಡುಗ ಸಿಕ್ಕರೆ ಏನು ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಿಜ ಹೇಳ ಬೇಕು ಎಂದರೆ ಧರ್ಮ ತುಂಬಾ ಒಳ್ಳೆ ವ್ಯಕ್ತಿ. ನನಗೆ ಒಳ್ಳೆಯ ಸ್ನೇಹಿತರು. ಅವರಂತಹ ಗುಣಗಳಿರುವ ವ್ಯಕ್ತಿ ಸಿಕ್ಕರೂ ನನಗೆ ಇಷ್ಟ ಆಗುತ್ತಾರೆ ಎಂದಿರುವ ಅನುಷಾ ರೈ ಯಾವುದೇ ಕಾರಣಕ್ಕೂ ತಾವು ಹಾಗೂ ಧರ್ಮ ಕೀರ್ತೀರಾಜ್‌ ಜೋಡಿಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+