ನನ್ನ ಗರ್ಭ ನನ್ನ ನಿರ್ಧಾರ.. ಗುಡ್‌ನ್ಯೂಸ್‌ ಯಾವಾಗ ಅನ್ನೋದನ್ನು ಬಿಟ್ಟುಬಿಡಿ- ಅನು ಪ್ರಭಾಕರ್‌

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ನಟಿಯರಲ್ಲಿ ಒಬ್ಬರಾದ ಅನು ಪ್ರಭಾಕರ್‌ ಸದ್ಯ ಸಿನಿಮಾ ಮಾತ್ರವಲ್ಲದೇ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ಭಾಗಿಯಾಗಿರುವ ಅನು ಪ್ರಭಾಕರ್‌ ಹೆಣ್ಣಿನ ಜೀವನದ ಪ್ರಮುಖ ಘಟ್ಟ ತಾಯ್ತನದ ಬಗ್ಗೆ ಬಹಳ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ.

ಸಾಮಾನ್ಯವಾಗಿ ಮದುವೆ ಆದ ಕೆಲ ತಿಂಗಳು ಕಳೆಯುತ್ತಿದ್ದಂತೆ ಆಪ್ತರು ಗುಡ್‌ ನ್ಯೂಸ್‌ ಯಾವಾಗ? ಎಂದು ಪ್ರಶ್ನೆ ಮಾಡುತ್ತಿರುತ್ತಾರೆ. ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಅನು‌ ಪ್ರಭಾಕರ್, ಇತ್ತೀಚಿಗೆ ನಾನೊಂದು ಪುಸ್ತಕ ಓದಿದ್ದೆ. ನನ್ನ ಗರ್ಭ (Womb) ನನ್ನ ನಿರ್ಧಾರ. ನನ್ನನ್ನು ಯಾರು ಪ್ರಶ್ನಿಸಬೇಡಿ. ಯಾಕೆಂದರೆ ಪ್ರಶ್ನಿಸುವವರು ಎಲ್ಲವನ್ನೂ ಪ್ರಶ್ನಿಸುತ್ತಾರೆ. ನಮ್ಮ ಭಾರತದಲ್ಲಿ ಯಾವಾಗ ಗುಡ್‌ನ್ಯೂಸ್‌ ಅಂತಾ ಕೇಳುತ್ತಲೇ ಇರುತ್ತಾರೆ. ರಸ್ತೆಗಳಲ್ಲಿ ಅಡ್ಡ ಹಾಕಿ ಯಾವಾಗ ಗುಡ್‌ನ್ಯೂಸ್‌ ಅಂತಾ ಕೇಳಿದ್ದಾರೆ ಎಂದರು.

Actress Anu Prabhakar Said To Stop Questioning About The Decision Of Motherhood Of Girls

ನಮ್ಮ ಭಾರತದಲ್ಲಿ ಎರಡು ಮಕ್ಕಳು ಎನ್ನುವುದೆಲ್ಲಾ ಇದೆ. ಆದರೆ ಹೊರ ದೇಶದಲ್ಲಿ ಎಂಟು ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಅದು ಅವರ ನಿರ್ಧಾರ. ಅದ ಬಗ್ಗೆ ಸಹ ಕೆಲವರು ಕಮೆಂಟ್‌ ಮಾಡುತ್ತಾರೆ. ಮಕ್ಕಳಾಗಿಲ್ವಾ ಕಮೆಂಟ್‌ ಮಾಡುತ್ತಾರೆ. ಒಂದೇ ಮಗುನಾ ಅದರ ಬಗ್ಗೆ ಸಹ ಕಮೆಂಟ್‌ ಮಾಡುತ್ತಾರೆ. ಅಯೋ ಮೂರು ಮಕ್ಕಳು ಮಾಡಿಕೊಂಡುರು ಅಂತಾನೂ ಕಮೆಂಟ್‌ ಮಾಡುತ್ತಾರೆ ಎಂದರು

ಅಯ್ಯೋ ಎಂಟು ಮಕ್ಕಳು ಮಾಡಿಕೊಂಡರು ಮಾನ ಮರ್ಯಾದೆ ಇಲ್ಲಾ, ವರ್ಷಕ್ಕೊಂದು ಹೆತ್ತುಕೊಂಡು ಅನ್ನುತ್ತಾರೆ. ಆದರೆ ಅದೆಲ್ಲಾ ಅವರಿಷ್ಟ. ಒಂದೇ ಒಂದು ಆಲೋಚಿಸಬೇಕು. ಪದೇ ಪದೇ ಗರ್ಭಪಾತವಾಗಿ ಆ ಹುಡುಗಿ ದೈಹಿಕವಾಗಿ ನೋವು, ಮಾನಸಿಕ ನೋವು, ತಾಯಿ ಆಗಲು ಆಗುತ್ತಿಲ್ಲ ಎನ್ನುವ ನೋವು, ಇದೆಲ್ಲದರ ಮಧ್ಯ ಗುಡ್‌ನ್ಯೂಸ್‌ ಯಾವಾಗ ಅಂತಾ ಕೇಳುವುದು ಅವಳಿಗೆ ಎಷ್ಟು ನೋವು ಕೊಡಬಹುದು ಎಂದು ಪ್ರಶ್ನಿಸಿದರು.

Actress Anu Prabhakar Said To Stop Questioning About The Decision Of Motherhood Of Girls

ಆಕೆಯ ಪರಿಸ್ಥಿತಿ ಬಗ್ಗೆ ನಿಮಗೆ ಗೊತ್ತಿರುವುದಿಲ್ಲ. ಹೀಗಾಗಿ ದಯವಿಟ್ಟು ಆ ಪ್ರಶ್ನೆನೇ ಕೇಳು ಹೋಗಬೇಡಿ. ಯಾಕೆಂದರೆ ಅಲ್ಲಿ ಹಿಂದೆ ಏನಾಗುತ್ತಿದೆಯೋ ಗೊತ್ತಿಲ್ಲ. ನಿಮಗೆ ಚರ್ಚೆ ಮಾಡಲು ಬೇಕಾದ ವಿಷಯಗಳಿವೆ. ಒಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾವತ್ತೂ ಪ್ರಶ್ನೆ ಮಾಡಬೇಡಿ. ಯಾಕೆಂದರೆ ಅಲ್ಲಿ ಏನು ನೋವಿದೆ ಎನ್ನುವುದು ನಮಗೆ ಯಾವತ್ತೂ ಗೊತ್ತಿರುವುದಿಲ್ಲ ಎಂದು ಹೇಳಿದರು.

ಈ ಪರಿಸ್ಥಿತಿ ಬಗ್ಗೆ ನಾನು ತುಂಬಾ ಆಲೋಚನೆ ಮಾಡುತ್ತೇನೆ. ನನ್ನ ಜೊತೆ ಕೆಲವರು ಹದಿನೈದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ನೋಡಿದ ತಕ್ಷಣ ಅವರ ಪರಿಸ್ಥಿತಿಯ ಬಗ್ಗೆ ನನಗೆ ಅರ್ಥವಾಗುತ್ತದೆ. ಯಾಕೆಂದರೆ ಅವರ ಮನೆ ಪರಿಸ್ಥಿತಿ ಹೇಗಿದೆಯೋ ನಮಗೆ ಗೊತ್ತಿರುವುದಿಲ್ಲ. ಹೀಗಾಗಿ ಸ್ಪಲ್ಪ ಕೈಂಡ್‌ ಆಗಿರಿ. ಸುಮ್ಮನೆ ಕಮೆಂಟ್‌ ಮಾಡಬೇಡಿ. ಇನ್ನು ಸಾಮಾಜಿಕ ಜಾಲತಾಣಗಳಂತೂ ಬಿಡಿ ಸಹಿಸಿಕೊಳ್ಳಲಾಗದಂತದ್ದು ಎಂದು ಅನು ಪ್ರಭಾಕರ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+