ಈ ವಿಷಯ ಆಗದಿದ್ದರೆ ದಿಗಂತ್ ಮೇಲೆ ಹೋಪ್ಸ್‌ ಕಳ್ಕೋತಿನಿ ಅಂದ ಐಂದ್ರಿತಾ ರೇ!

ನಟ ದಿಗಂತ್ ಅವರ ಸಿನಿಮಾ ಬಗ್ಗೆ ನಟಿ ಹಾಗೂ ಅವರ ಪತ್ನಿ ಐಂದ್ರಿತಾ ರೇ ಅವರು ಮಾತನಾಡಿರುವುದು ವೈರಲ್ ಆಗುತ್ತಿದೆ. ನಟ ದಿಗಂತ್ ಅವರು ನಟಿಸಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಕನ್ನಡದ ಸ್ಟಾರ್ ನಟರು ಪ್ಯಾನ್‌ ಇಂಡಿಯಾ ಮೂವಿಗಳಲ್ಲಿ ಬ್ಯುಸಿಯಾದ ಮೇಲೆ ಕನ್ನಡದಲ್ಲಿ ಸಿನಿಮಾಗಳ ಕೊರತೆ ಎದುರಾಗಿದೆ.

ಅಲ್ಲದೇ ಕೆಲವು ಪ್ರಮುಖ ನಟರ ಸಿನಿಮಾಗಳು ಎರಡು ಅಥವಾ ಮೂರು ವರ್ಷಗಳಿಗೆ ಒಂದರಂತೆ ಬಿಡುಗಡೆಯಾಗುತ್ತಿದೆ. ಇದರ ನಡುವೆ ದಿಗಂತ್ ಅವರ ಎಡಗೈಯೇ ಅಪಘಾತಕ್ಕೆ ಕಾರಣ ಮೂವಿ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಈ ರೀತಿ ಇರುವಾಗಲೇ ಐಂದ್ರಿತಾ ರೇ ಅವರು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

Actress Aindrita Ray said that if this matter does not happen she will Lost hopes on Diganth

ಎಡಗೈಯೇ ಅಪಘಾತಕ್ಕೆ ಕಾರಣ ಎನ್ನುವ ಮೂವಿಯ ಬಗ್ಗೆ ಮಾತನಾಡಿರುವ ಐಂದ್ರಿತಾ ರೇ ಅವರು, ದಿಗಂತ ಅವರ ಈ ಮೂವಿ ತುಂಬಾನೇ ಇಷ್ಟವಾಯ್ತು. ಹೌದು ಅವರ ಎಲ್ಲಾ ಮೂವಿಗಳ ಬಗ್ಗೆ ನನ್ನ ಫಸ್ಟ್‌ ರಿಯಾಕ್ಷನ್‌ ಇದೆ. ಆದರೆ, ಈ ಸಿನಿಮಾ ನಿಜಕ್ಕೂ ಭಿನ್ನವಾಗಿದೆ ತುಂಬಾನೇ ಇಷ್ಟಾಯ್ತು ಅಂತ ಹೇಳಿದ್ದಾರೆ. ಮುಂದುವರಿದು ನಿಜವಾಗಿಯೂ ಈ ಸಿನಿಮಾ ಬಗ್ಗೆ ಹೆಮ್ಮೆಯಾಗುತ್ತಿದೆ. ದಿಗಂತ ಈ ಮೂವಿಯನ್ನ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ ಅಂತ ಹೇಳುತ್ತಲ್ಲೇ ದಿಗಂತ್ ಸಿನಿಮಾ ಕೆರಿಯರ್ ಹಾಗೂ ಮೂವಿ ಸಕ್ಸಸ್‌ನ ಬಗ್ಗೆ ಐಂದ್ರಿತಾ ಅವರು ಅಚ್ಚರಿಯ ಹೇಳಿಕೆಯನ್ನೂ ಕೊಟ್ಟಿದ್ದಾರೆ.

ಈ ಸಿನಿಮಾದಲ್ಲಿ ತುಂಬಾ ನಗುವ ಸನ್ನಿವೇಶಗಳಿವೆ. ನಾನೂ ತುಂಬನೇ ನಕ್ಕಿದ್ದೀನಿ. ಮೂವಿ ಕಥೆಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್‌ ಇದೆ. ಎಲ್ಲಾ ಕಲಾವಿದರು ಚೆಂದವಾಗಿ ನಟಿಸಿದ್ದಾರೆ. ತುಂಬಾ ಚೆನ್ನಾಗಿದೆ ಅಂತ ದಿಗಂತ ಅವರ ಬೆನ್ನು ತಟ್ಟಿದ್ದಾರೆ.

ಹೋಪ್ಸ್‌ ಕಳ್ಕೋತೀನಿ ಅಂದ ಐಂದ್ರಿತಾ ರೇ: ಇನ್ನು ನಟ ದಿಗಂತ ಅವರ ಸಿನಿಮಾ ಎಡಗೈಯೇ ಅಪಘಾತಕ್ಕೆ ಕಾರಣ ಮೂವಿ ಚೆನ್ನಾಗಿದೆ ಅಂತ ಹೇಳುವುದಕ್ಕೂ ಮುಂಚೆ ಐಂದ್ರಿತಾ ಅವರು ಹೇಳಿರುವ ಮಾತೊಂದು ವೈರಲ್ ಆಗುತ್ತಿದೆ. ಈ ಮೂವಿ ಹಿಟ್ ಆಗಿಲ್ಲ ಅಂದ್ರೆ ಹೋಪ್ಸ್‌ ಬಿಟ್ಟು ಬಿಡುತ್ತೇನೆ ಅಂತ ಐಂದ್ರಿತಾ ಅವರು ಹೇಳಿದ್ದಾರೆ. ಇದಕ್ಕೆ ಕಾರಣ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿರುವ ದಿಗಂತ್ ಅವರ ಕೆಲವು ಸಿನಿಮಾನಗಳು ನಿರೀಕ್ಷಿತ ಯಶಸ್ಸನ್ನು ತಂದುಕೊಟ್ಟಿಲ್ಲ. ಈ ಮಾತಿಗೆ ದಿಗಂತ್‌ ಅವರು ಸಣ್ಣಗೆ ನಕ್ಕಿದ್ದಾರೆ.

ನಟ ದಿಗಂತ್ ಹೇಳಿದ್ದೇನು ?

ಸಿನಿಮಾಗೆ ಪ್ರೇಕ್ಷಕರು ಪ್ರತಿಕ್ರಿಯಿಸುತ್ತಿರುವ ರೀತಿ ಖುಷಿಕೊಟ್ಟಿದೆ. ಸಿನಿಮಾದ ಕೆಲವೊಂದು ದೃಶ್ಯಗಳಿಗೆ ಪ್ರೇಕ್ಷಕರು ತುಂಬಾ ಎಂಜಾಯ್‌ ಮಾಡಿದ್ದಾರೆ. ಸಿನಿಮಾ ಬಗ್ಗೆ ಒಳ್ಳೆಯ ರಿವ್ಯೂ ಬರ್ತಿದೆ. ಈ ಸಿನಿಮಾ ಬಗ್ಗೆ ತುಂಬಾ ಹೋಪ್ಸ್‌ ಇದೆ ಅಂತ ಅವರು ಹೇಳಿಕೊಂಡಿದ್ದಾರೆ. ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+