Rashmika Mandanna: ರಶ್ಮಿಕಾ ನ್ಯಾಷನಲ್ ಕ್ರಶ್ ಅಲ್ಲ, ಈಗ ನನ್ನ ಕ್ರಶ್ ಎಂದ ಖ್ಯಾತ ನಟ
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಎಂಬ ಕಿರೀಟ ಮುಡಿಗೇರಿಸಿಕೊಂಡಿದ್ದರು. ಒಂದೇ ಸಿನಿಮಾದಲ್ಲಿ ರಶ್ಮಿಕಾ ಮಾಡಿದ್ದ ಮೋಡಿ ಕಡಿಮೇಯನಲ್ಲ. ಟಾಲಿವುಡ್ ಅಂಗಳಕ್ಕೆ ಕಾಲಿಟ್ಟು ಅಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡರು. ಈಗ ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಒಟ್ಟೊಟ್ಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೊಡಗಿನ ಈ ಕುವರಿಗೆ ಇಂದಿಗೂ ಭಾರೀ ಡಿಮ್ಯಾಂಡ್ ಇದೆ. ವರ್ಷಗಳು ಉರುಳಿದರೂ ನ್ಯಾಷನಲ್ ಕ್ರಶ್ ಅನ್ನೋ ಟೈಟಲ್ ರಶ್ಮಿಕಾ ಅವರಿಂದ ದೂರವಾಗಿಲ್ಲ. ಇನ್ನು ರಶ್ಮಿಕಾ ಜೊತೆ ನಟ ವಿಜಯ್ ದೇವರಕೊಂಡ ಡೇಟಿಂಗ್, ಲವ್ ವದಂತಿ ಹೊಸದೇನಲ್ಲ. ಇದರ ನಡುವೆ ಮತ್ತೊಬ್ಬ ಖ್ಯಾತ ನಟನಿಗೆ ರಶ್ಮಿಕಾ ಅವರ ಮೇಲೆ ಲವ್ ಆಗಿದೆ. ಈ ಮಾತನ್ನ ವೇದಿಕೆಯಲ್ಲೇ ರಶ್ಮಿಕಾಗೆ ನೇರವಾಗಿ ಹೇಳಿರುವ ನಟ, ನೀನು ನ್ಯಾಷನಲ್ ಕ್ರಶ್ ಅಲ್ಲ, ನನ್ನ ಕ್ರಶ್ ಎಂದಿದ್ದಾರೆ.
ಹೌದು ಇತ್ತೀಚೆಗೆ ತಮಿಳು ನಟ ಧನುಷ್ ಅವರೊಂದಿಗೆ ರಶ್ಮಿಕಾ ನಟಿಸಿರುವ ಕುಬೇರ ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಬಹುಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ರಶ್ಮಿಕಾ ವಿಭಿನ್ನ ಶೇಡ್‌ನಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರವೇ ಒಂದು ಕೇಂದ್ರಬಿಂದು ಎಂದು ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ಮೂಲಕ ರಶ್ಮಿಕಾ ಅವರ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಇದೀಗ ಖ್ಯಾತ ನಟನೇ ಬಂದು ನೀನು ನನ್ನ ಕ್ರಶ್ ಎಂದು ರಶ್ಮಿಕಾಗೆ ಹೇಳಿದ್ದಾರೆ.

ರಶ್ಮಿಕಾನ ನೋಡಿದಾಗ ನಟಿ ಶ್ರೀದೇವಿ ನೆನಪಾದ್ರು
ಹೈದರಾಬಾದ್‌ನಲ್ಲಿ ನಡೆದ ಕುಬೇರ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆದಿದೆ. ಇದೇ ಕಾರ್ಯಕ್ರಮದಲ್ಲಿ ಹಲವು ಸ್ಟಾರ್‌ಗಳು ಭಾಗವಹಿಸಿದ್ದರು. ಟಾಲಿವುಡ್‌ನ ಹಿರಿಯ ನಟರಾದ ಚಿರಂಜೀವಿ ಹಾಗೂ ನಾಗಾರ್ಜುನ್ ಕೂಡ ಇದ್ದರು. ಮೊದಲಿಗೆ ನಾಗಾರ್ಜುನ ಅವರು ರಶ್ಮಿಕಾರನ್ನ ಹೊಗಳುತ್ತಾ, ರಶ್ಮಿಕಾ ಅವರನ್ನು ಸ್ಕ್ರೀನ್ ಮೇಲೆ ನೋಡಿದಾಗ ನನಗೆ ನಟಿ ಶ್ರೀದೇವಿ ನೆನಪಾದರು. ನಿಜಕ್ಕೂ ಈ ಸಿನಿಮಾದಲ್ಲಿ ತುಂಬಾ ಫ್ರೇಮ್‌ಗಳು ತುಂಬಾ ಚೆನ್ನಾಗಿವೆ. ಈ ಚಿತ್ರದಲ್ಲಿ ರಶ್ಮಿಕಾ ಸುಂದರವಾಗಿ ಕಾಣುತ್ತಿದ್ದರು. ರಶ್ಮಿಕಾ ಅವರನ್ನು ನ್ಯಾಷನಲ್ ಕ್ರಶ್ ಅಂತಾರೆ. ಆ ಹೆಸರಿನಿಂದ ಕರೆಯುವುದರಲ್ಲಿ ಆಶ್ಚರ್ಯವಿಲ್ಲ. ಈ ಚಿತ್ರದಿಂದಾಗಿ ರಶ್ಮಿಕಾ ಈಗ ಕೇವಲ ನ್ಯಾಷನಲ್ ಕ್ರಶ್ ಅಲ್ಲ, ನನ್ನ ಕ್ರಶ್ ಕೂಡ ಎಂದು ನಾಗಾರ್ಜುನ ಹೊಗಳಿದ್ದಾರೆ. ಇದನ್ನು ಕೇಳಿ ರಶ್ಮಿಕಾ ಫುಲ್ ಶಾಕ್ ಆಗಿದ್ದು ನಾಗಾರ್ಜುನ ಅವರಿಗೆ ಲವ್ ಸಿಂಬಲ್ ತೋರಿದ್ದಾರೆ.
ಇದಕ್ಕೂ ಮುನ್ನ ಕುಬೇರ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಾಗಾರ್ಜುನ ಅವರು ರಶ್ಮಿಕಾ ಅವರ ಸತತ ಹಿಟ್‌ಗಳನ್ನು ಶ್ಲಾಘಿಸಿದ್ದರು. ಈ ಹುಡುಗಿ ರಶ್ಮಿಕಾ ನಿಮಗೆ ಗೊತ್ತಾ? ಈ ಹುಡುಗಿ ಪ್ರತಿಭೆಯ ಶಕ್ತಿ ಕೇಂದ್ರ. ಅಂದರೆ ಕಳೆದ ಮೂರು ವರ್ಷಗಳಲ್ಲಿ ಅವರ ಸಿನಿಮಾಗಳ ಪಟ್ಟಿ ನೋಡಿದರೆ ಅವರು ನಿಜಕ್ಕೂ ಅದ್ಭುತ. ನಮ್ಮಲ್ಲಿ ಯಾರೂ 2000-3000 ಕೋಟಿ ನಟರಲ್ಲ, ಆದರೆ ರಶ್ಮಿಕಾ ಮಂದಣ್ಣ ನಮ್ಮೆಲ್ಲರನ್ನೂ ಸೋಲಿಸಿದವಳು ಎಂದು ಕೊಂಡಾಡಿದ್ದರು.

ನನಗೂ ಕ್ರಶ್ ಎಂದ ಮೆಗಾಸ್ಟಾರ್
ಬಳಿಕ ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ ಕೂಡ, ನಾಗಾರ್ಜುನ್ ಅವರು ನಾನು ಹೇಳಬೇಕಿದ್ದ ಮಾತನ್ನು ಈಗಾಗಲೇ ಹೇಳಿದ್ದಾರೆ. ರಶ್ಮಿಕಾ ಅವರು ನಿಮಗೆ ಕ್ರಶ್ ಆಗುವುದರ ಜೊತೆಗೆ ನನ್ನ ಕ್ರಶ್ ಕೂಡ ಆಗಿದ್ದಾರೆ ಎಂದು ಚಿರಂಜೀವಿ ಹೇಳಿದ್ದಾರೆ. ಇಬ್ಬರು ನಟರ ಮಾತನ್ನು ಕೇಳಿ ರಶ್ಮಿಕಾ ವೇದಿಕೆಯಲ್ಲೇ ಏನು ಮಾತನಾಡುವುದು ಗೊತ್ತಿಲ್ಲದಂತೆ ಶಾಕ್‌ಗೆ ಒಳಗಾಗಿದ್ದಾರೆ.












Click it and Unblock the Notifications