Actor Yash: ಹೊಸ ದಾಖಲೆ ಪುಟ ಸೇರಿದ ನಟ ಯಶ್‌ ಟಾಕ್ಸಿಕ್‌ ಚಿತ್ರದ ಟೀಸರ್ ತುಣುಕು

Actor Yash: ರಾಕಿಂಗ್ ಸ್ಟಾರ್ ನಟ ಯಶ್‌ ಜನವರಿ 8ರಂದು ಮಂಗಳೂರಿನ ಕಡಲ ತೀರದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಇದೇ ವೇಳೆ ಬಿಡುಗಡೆಯಾಗಿದ್ದ ಟಾಕ್ಸಿಕ್‌ ಚಿತ್ರದ ಟೀಸರ್ ತುಣುಕು ಭಾರೀ ಸದ್ದು ಮಾಡಿತ್ತು. ಇದೀಗ ಇದೇ ತುಣುಕು ಹೊಸ ದಾಖಲೆ ಬರೆದಿದೆ. ಹಾಗಾದರೆ ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆಗಳು ಹೇಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೆಜಿಎಫ್‌ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದ ಯಶ್‌ ಇದೀಗ ಟಾಕ್ಸಿಕ್‌ ಚಿತ್ರದ ಟೀಸರ್‌ನ ಆ ಒಂದೇ ಒಂದು ತುಣುಕು ಮತ್ತೊಂದು ದಾಖಲೆ ಬರೆದಿದೆ. ನಟ ಯಶ್ ಬರ್ತಡೇ ಪ್ರಯುಕ್ತ ಟಾಕ್ಸಿಕ್‌ ಸಿನಿಮಾದ ಮೊದಲ ಟೀಸರ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಅಭಿಮಾನಿಗಳು ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆಯೇ ಬಿಡುಗಡೆಯಾಗಿರುವ ಟೀಸರ್‌ ಅತೀ ಹೆಚ್ಚು ವೀಕ್ಷಣೆ ಮೂಲಕ ಹೊಸ ದಾಖಲೆನ್ನು ಸೃಷ್ಟಿಸಿದೆ.

Actor Yash s Toxic Movie Teaser created New Record Huge viral

ಈವರೆಗೂ ಈ ಟೀಸರ್‌ ತುಣುಕನ್ನು 5,00,00,000ಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲಿಗೆ 50 ಮಿಲಿಯನ್‌ ಆದಂತಾಗಿದ್ದು, ಈ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದನ್ನು ವೀಕ್ಷಣೆ ಮಾಡಿದವರು ಈಗಲೇ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ. ಇನ್ನೂ ಸಿನಿಮಾನ ಬಿಡುಗಡೆಯಾದರೆ, ಇನ್ನೂ ಯಾವೆಲ್ಲಾ ದಾಖಲೆಗಳನ್ನು ಮುರಿಯುತ್ತದೆಯೋ ಕಾದುನೋಡಬೇಕಿದೆ ಅಂತಿದ್ದಾರೆ.

ಅಲ್ಲದೆ, ಈ ಟೀಸರ್‌ನಲ್ಲಿ ನಟ ಯಶ್‌ ಕಾರು ಇಳಿದು, ಸ್ಟೈಲಾಗಿ ಸಿಗರೇಟ್‌ ಹಚ್ಚಿಕೊಂಡಿ ಬರುತ್ತಿರುವ ದೃಶ್ಯವಂತೂ ಸಖತ್‌ ಹೈಲೇಟ್‌ ಆಗಿದೆ. ಜೊತೆಗೆ ಪಬ್‌ಗೆ ಎಂಟ್ರಿ ಕೊಡುತ್ತಿದ್ದರೆ ಬರುವ ಬ್ಯಾಗ್ರೌಂಡ್‌ ಮ್ಯೂಸಿಕ್‌ ಅಂತೂ ವೀಕ್ಷರನ್ನು ಸೆಳೆಯುತ್ತಲೇ ಇದೆ. ಈ ಟೀಸರ್‌ನಲ್ಲಿ ಯಶ್‌ ತುಂಬಾ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದಾರೆ ಅಂತಲೂ ಕೆಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಈಗಾಗಲೇ ಕೆಜಿಎಫ್‌ ಸಿನಿಮಾವು ವಿಶ್ವ ದಾಖಲೆ ಬರೆದಿದೆ. ಈ ಸಿನಿಮಾದ ಮೂಲಕ ಯಶ್‌ ಗ್ರಾಂಡ್‌ ಎಂಟ್ರಿ ಕೊಟ್ಟಿದ್ದು, ಇಂಡಸ್ಟ್ರಿಯಲ್ಲಿ ಮಿಂಚಿದ್ದರು. ಇದೀಗ ನಟ ಯಶ್‌ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ಇವರಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಕೆಜಿಎಫ್‌ನಲ್ಲಿ ರಾಕಿಬಾಯ್‌ ಆಗಿ ಗುರುತಿಸಿಕೊಂಡಿರುವ ನಟ ಯಶ್‌ ಇದೀಗ ಮತ್ತೆ ಟಾಕ್ಸಿಕ್‌ ಚಿತ್ರದ ಮೂಲಕ ಸೌಂಡ್‌ ಮಾಡಲು ಮುಂದಾಗಿದ್ದಾರೆ.

ಬರೀ ಈ ಚಿತ್ರದ ಟೀಸರ್‌ ತುಣುಕು ನೋಡಿ ವೀಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಇನ್ನೂ ಸಿನಿಮಾ ರಿಲೀಸ್‌ ಆದರೆ, ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+