Puneeth Rajkumar: ಥಿಯೇಟರ್‌ಗೆ ಬರ್ತಿದ್ದಾರೆ ಅಪ್ಪು, ಫ್ಯಾನ್ಸ್‌ಗೆ ಬರ್ತ್‌ಡೇ ಸರ್‌ಪ್ರೈಸ್‌

ಸ್ಯಾಂಡಲ್‌ವುಡ್‌ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ (ಅಪ್ಪು) ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇದೇ ಮಾರ್ಚ್‌ 17ರಂದು ಪುನೀತ್‌ ಅವರ ಹುಟ್ಟುಹಬ್ಬ ಇರುವ ಹೊತ್ತಲ್ಲೇ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್‌ ಸಿಗಲಿದೆ. ಈ ವಿಚಾರ ಗೊತ್ತಾದ್ರೆ ಪುನೀತ್‌ ಫ್ಯಾನ್ಸ್‌ ಹುಚ್ಚೆದ್ದು ಕುಣಿಯೋದು ಗ್ಯಾರಂಟಿ. ಏನಪ್ಪಾ ಅಂತ ಸ್ಪೆಷಲ್‌ ಸುದ್ದಿ ಅನ್ನೋರು ಮುಂದೆ ಈ ಸ್ಟೋರಿ ಓದಿ ತಿಳಿಯುತ್ತೆ..

ಪುನೀತ್‌ ಅವರು ಇಹಲೋಕ ತ್ಯಜಿಸಿದ್ದರೂ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವಂತೆ ಈಗಲೂ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ನಗುವಿನ ಒಡೆಯನಾಗಿ ಆಟೋ, ಕಾರು ವಾಹನಗಳ ಮೇಲೆ ರಾರಾಜಿಸುತ್ತಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ಅಪ್ಪು ಫೋಟೋಗಳು, ಪುತ್ಥಳಿಗಳು ತಲೆ ಎತ್ತಿವೆ. ಅಪ್ಪು ನಮ್ಮೊಂದಿಗೇ ಇದ್ದಾರೆ ಅಂತಿದ್ದಾರೆ ಅವರ ಅಭಿಮಾನಿಗಳು. ಇದೀಗ ಅಪ್ಪು ಅಭಿಮಾನಿಗಳ ಮುಂದೆ ಮತ್ತೊಮ್ಮೆ ಬರಲು ರೆಡಿಯಾಗಿದ್ದಾರೆ.

Actor Puneeth Rajkumar Appu Movie Re-releasing On March 14

ಅಪ್ಪು ಅವರ ಸಿನಿಮಾಗಳನ್ನು ನೋಡುವ ಭಾಗ್ಯ ಇಲ್ವಲ್ಲಾ? ಅನ್ನೋದು ಅವರ ಅಭಿಮಾನಿಗಳ ಕೊರಗು. ನಾಲ್ಕು ವರ್ಷಗಳಿಂದ ಅವರಿಲ್ಲದೆ ಸಿನಿಮಾಗಳು ಕೂಡ ಇಲ್ಲ ಎಂದು ನೊಂದಿದ್ದರು. ಥಿಯೇಟರ್‌ನಲ್ಲಿ ಅಪ್ಪು ಸಿನಿಮಾ ನೋಡೋದೆ ಒಂದು ಮಜಾ ಅಂತಿದ್ದವರು ಈಗ ಮುಖ ಗಂಟು ಮಾಡಿಕೊಂಡಿದ್ದಾರೆ. ಅಪ್ಪು ಅವರ ಗಂಧದ ಗುಡಿ ಕಣ್ತುಂಬಿಕೊಂಡ ಫ್ಯಾನ್ಸ್‌ಗೆ ಇನ್ನು ಮುಂದೆ ಅವರ ಸಿನಿಮಾ ಬರೋಲ್ಲ ಅನ್ನೋದು ನೋವಿನ ಸಂಗತಿ. ಆದರೆ ಅಪ್ಪು ಸಿನಿಮಾ ಈಗ ಥಿಯೇಟರ್‌ನಲ್ಲಿ ರಿಲೀಸ್‌ ಆಗಲು ಸಜ್ಜಾಗಿದ್ದು, ಫ್ಯಾನ್ಸ್ ಆಸೆ ಕೂಡ ಈಡೇರಲಿದೆ.

ಹೌದು, ಅಪ್ಪು ಅವರು ನಟರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಾಗ ತೆರೆ ಕಂಡಿದ್ದ ಅಪ್ಪು ಸಿನಿಮಾ ಈಗ ಅವರ ಹುಟ್ಟುಹಬ್ಬದ ಹೊತ್ತಿನಲ್ಲೇ ರೀರಿಲೀಸ್‌ ಆಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಮಾರ್ಚ್ 14ರಂದು "ಅಪ್ಪು" ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಅಪ್ಪು ಪತ್ನಿ ಅಶ್ವಿನಿ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

Actor Puneeth Rajkumar Appu Movie Re-releasing On March 14

ಈ ಸಿನಿಮಾದ ಹಾಡುಗಳೆಲ್ಲವೂ ಇಂದಿಗೂ ಸೂಪರ್‌ ಹಿಟ್‌. ಅದರಲ್ಲೂ ತಾಲಿಬಾನ್‌ ಅಲ್ಲಾ..ಅಲ್ಲಾ ಹಾಡು ಪಡ್ಡೆ ಹುಡುಗರ ಹಾಟ್‌ ಫೇವರೇಟ್‌ ಹಾಡು. ಈ ಸಾಲನ್ನು ಉಲ್ಲೇಖಿಸಿರುವ ಅಶ್ವಿನಿ ಅವರು, ಮಿಸ್‌ ಅಂಡರ್‌ಸ್ಟಾಂಡಿಂಗ್‌ ಬೇಡ.. ಮ್ಯಾಜಿಕ್‌ ಅನ್ನು ನೋಡಲು ಸಿದ್ಧರಾಗಿ. ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬಕ್ಕೆ ಅವರು ಅಪ್ಪು ಆಗಿ ಥಿಯೇಟರ್‌ಗಳಿಗೆ ಮರಳುತ್ತಿದ್ದಾರೆ. 14ನೇ ಮಾರ್ಚ್ 2025ರಂದು ಚಿತ್ರಮಂದಿರಗಳಲ್ಲಿ ನಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ಮತ್ತೆ ಹೊತ್ತು ತರುತ್ತಿದೆ ಎಂದು ಹೇಳಿದ್ದಾರೆ.

2002ರಲ್ಲಿ ತೆರೆಕಂಡಿದ್ದ ಅಪ್ಪು ಸಿನಿಮಾ ಪುನೀತ್‌ ರಾಜ್‌ಕುಮಾರ್‌ ಅವರ ಹೀರೋ ಕೆರಿಯರ್‌ಗೆ ತಿರುವು ಕೊಟ್ಟ ಮೊದಲ ಸಿನಿಮಾ. ಈ ಸಿನಿಮಾ ಸಖತ್‌ ಹಿಟ್‌ ಕೂಡ ಕಂಡಿದ್ದರಿಂದ ಅಂದಿನಿಂದ ಪುನೀತ್‌ ಅವರಿಗೆ ಅಪ್ಪು ಎನ್ನುವ ಹೆಸರು ಕೂಡ ಬಂತು. ಈ ಸಿನಿಮಾಗೆ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್‌ ಕಟ್‌ ಹೇಳಿದ್ದರು. ರಾಜ್‌ಕುಟುಂಬದ ಪೂರ್ಣಿಮಾ ಎಂಟರ್‌ಪ್ರೈಸಸ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಈ ಸಿನಿಮಾ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಟಿ ರಕ್ಷಿತಾ ನಾಯಕಿಯಾಗಿದ್ದರು. ಚಿತ್ರಮಂದಿರಗಳಲ್ಲಿ 200 ದಿನಗಳ ಪ್ರದರ್ಶನ ಕಾಣುವ ಮೂಲಕ "ಅಪ್ಪು" ಎಂದೇ ಪುನೀತ್‌ ಇಂದಿಗೂ ಪ್ರಸಿದ್ಧರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+