Prabhu Deva: ನಟ ಪ್ರಭುದೇವ ಅಜ್ಜಿ ನಿಧನ: ಮೈಸೂರಿಗೆ ಆಗಮಿಸಿದ ನಟ

ಮೈಸೂರು ಜುಲೈ 10: ಅಜ್ಜಿ ಪುಟ್ಟಮ್ಮಣ್ಣಿ ಅವರ ಅಂತ್ಯಕ್ರಿಯೆಗಾಗಿ ನಟ ಪ್ರಭುದೇವ ಅವರು ಇಂದು ಮೈಸೂರಿಗೆ ಆಗಮಿಸಿದ್ದಾರೆ.

ನಟ, ಡ್ಯಾನ್ಸರ್ ಮಾಸ್ಟರ್ ಪ್ರಭುದೇವ ಅವರ ಅಜ್ಜಿ ಕಳೆದ ದಿನ (ಜುಲೈ 9) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ ಕಳೆದ ದಿನ (ಜುಲೈ 9) ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆಗಾಗಿ ನಟ ಇಂದು ಮೈಸೂರಿಗೆ ಆಗಮಿಸಿದ್ದಾರೆ.

Actor Prabhu Deva came to Mysore for the funeral of his grandmother

ಪುಟ್ಟಮ್ಮಣ್ಣಿ ಅವರು ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರ ತಾಯಿ. ಮೈಸೂರು ತಾಲೂಕಿನ ದೂರ ಗ್ರಾಮದಲ್ಲಿಂದು ಪುಟ್ಟಮ್ಮಣ್ಣಿ ಅವರ ಅಂತ್ಯಕ್ರಿಯೆ ನಡೆಯಲಿದ್ದು ಪ್ರಭುದೇವ ಹಾಗೂ ಸಹೋದರರು ಮೈಸೂರಿಗೆ ಆಗಮಿಸಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರಿನ ಮೂಲಕ ದೂರ ಗ್ರಾಮಕ್ಕೆ ಪ್ರಭದೇವ ತೆರಳಲಿದ್ದಾರೆ. ಹಿರಿಯ ನೃತ್ಯ ಸಂಯೋಜಕ ಮೂಗೂರು ಸುಂದರಂ ಅವರು ಮೂಲತ: ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದವರು.

ದೂರ ಗ್ರಾಮದ ವೈಸ್ ಚೇರ್ಮನ್ ಮಹದೇವಪ್ಪ ಮತ್ತು ಪುಟ್ಟಮ್ಮಣ್ಣಿ ಅವರ ಮಗಳು ಮಹದೇವಮ್ಮ ಅವರನ್ನು ವಿವಾಹವಾಗಿದ್ದರು. ನಂತರ ಚಿತ್ರರಂಗದಲ್ಲಿ ಯಶಸ್ಸು ಕಂಡು ಚೆನ್ನೈನಲ್ಲಿ ನೆಲೆಸಿದ್ದರು. ಅವರಿಗೆ ರಾಜು, ಪ್ರಭುದೇವ, ನಾಗೇಂದ್ರ ಸೇರಿ ಮೂವರು ಪುತ್ರರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+