Prabhas Marriage: ನಟ ಪ್ರಭಾಸ್ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ದೊಡ್ಡಮ್ಮ, ಯಾರು ಆ ಹುಡುಗಿ?
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಲಕ್ಷಾಂತರ ಮಂದಿ ಯುವತಿಯರ ಡಾರ್ಲಿಂಗ್, ಡ್ರೀಮ್ ಬಾಯ್. ಸದ್ಯ 45 ವರ್ಷ ವಯಸ್ಸಾದರೂ ಪ್ರಭಾಸ್ ಇನ್ನೂ ಸಿಂಗಲ್ ಆಗಿಯೇ ಉಳಿಯುವ ಮೂಲಕ ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿದ್ದಾರೆ. ಪ್ರಭಾಸ್ ಮದುವೆ ಯಾವಾಗ? ಅನ್ನೋ ಹಲವು ವರ್ಷಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದ್ಯಾವುದೋ ಗಾಳಿಸುದ್ದಿ ಅಲ್ಲ. ಪ್ರಭಾಸ್ ಅವರ ದೊಡ್ಡಮ್ಮನೇ ಮದುವೆ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ.ಹೌದು ಖ್ಯಾತ ಕೃಷ್ಣಂರಾಜು ಅವರ ಪತ್ನಿಯಾಗಿರುವ ಶ್ಯಾಮಲಾ ದೇವಿ ಪ್ರಭಾಸ್ ಅವರಿಗೆ ದೊಡ್ಡಮ್ಮ.
ಪ್ರಭಾಸ್ ಹೆಚ್ಚಾಗಿ ತನ್ನ ದೊಡ್ಡಪ್ಪ ಕೃಷ್ಣಂರಾಜು ಅವರೊಂದಿಗೆ ನಂಟು ಹೊಂದಿದ್ದು ಮಾತ್ರವಲ್ಲದೆ, ಒಟ್ಟಿಗೆ ತೆರೆ ಮೇಲೂ ಮಿಂಚಿದ್ದರು. ಇತ್ತೀಚೆಗೆ ಅವರ ನಿಧನರಾದಾಗ ಪ್ರಭಾಸ್ ಬಿಕ್ಕಿಬಿಕ್ಕಿ ಅತ್ತಿದ್ದರು. ಹೀಗಾಗಿ ಪ್ರಭಾಸ್‌ಗೆ ಕೃಷ್ಣಂರಾಜು ಅಂದ್ರೆ ತಂದೆಗಿಂತಲೂ ಹೆಚ್ಚು. ಇಲ್ಲಿವರೆಗೆ ಪ್ರಭಾಸ್ ಅವರು ತಮ್ಮ ಮದುವೆ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡುತ್ತಿರಲಿಲ್ಲ. ಹೀಗಾಗಿ ಹೆಚ್ಚಾಗಿ ಗಾಸಿಪ್‌ಗಳೇ ಸದ್ದು ಮಾಡುತ್ತಿದ್ದವು. ಆ ನಟಿ ಜೊತೆ, ಈ ನಟಿ ಜೊತೆ ಪ್ರಭಾಸ್ ಮದುವೆ ಎಂದೆಲ್ಲ ವದಂತಿಗಳು ಹಬ್ಬುತ್ತಲೇ ಇವೆ. ಇನ್ನು ಪ್ರಭಾಸ್ ಮದುವೆ ವಿಚಾರದಲ್ಲಿ ಹೆಚ್ಚು ತಳುಕು ಹಾಕಿಕೊಂಡ ಹೆಸರು ಕನ್ನಡತಿ, ನಟಿ ಅನುಷ್ಕಾ ಶೆಟ್ಟಿ. ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರಿಂದ ಒಳ್ಳೆಯ ಬಾಂಡಿಂಗ್ ಇತ್ತು. ಇವರ ಒಡನಾಟ ನೋಡಿ ಇಬ್ಬರೂ ಮದುವೆಯಾಗೋದು ಫಿಕ್ಸ್ ಎಂದೇ ಸುದ್ದಿ ಹಬ್ಬಿತ್ತು.

ಆದರೆ ಪ್ರಭಾಸ್ ಆಗಲಿ, ಅನುಷ್ಕಾ ಶೆಟ್ಟಿ ಆಗಲಿ ಈ ವದಂತಿಗಳಿಗೆ ತೆರೆ ಎಳೆಯುವ ಕೆಲಸ ಮಾಡಲೇ ಇಲ್ಲ. ಹಾಗಾಗಿ ಪ್ರಭಾಸ್ ಮದುವೆ ದೊಡ್ಡ ಯಕ್ಷಪ್ರಶ್ನೆಯಾಗಿ ಉಳಿಯಿತು. ಅಂತೂ ಇಂತೂ ಡಾರ್ಲಿಂಗ್ ಪ್ರಭಾಸ್‌ಗೆ ಕಂಕಣ ಭಾಗ್ಯ ಕೂಡಿಬರುತ್ತಿದೆ. ಈ ಬಗ್ಗೆ ಅವರ ನೆಚ್ಚಿನ ದೊಡ್ಡಮ್ಮ ಶ್ಯಾಮಲಾ ದೇವಿ ಮಹತ್ವದ ಮಾಹಿತಿ ನೀಡಿದ್ದಾರೆ.
ದಿವಂಗತ ಕೃಷ್ಣಂ ರಾಜು ಅವರ ಪತ್ನಿಯಾದ ಶ್ಯಾಮಲಾ ದೇವಿ ಸೋಮವಾರ ದ್ರಾಕ್ಷರಾಮ ಭೀಮೇಶ್ವರ ಸ್ವಾಮಿಯ ದರ್ಶನ ಪಡೆದು, ನಂತರ ಪ್ರಭಾಸ್ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 'ನೀವು ದೇವರಲ್ಲಿ ಏನು ಪ್ರಾರ್ಥಿಸಿದಿರಿ ಎಂದು ಮಾಧ್ಯಮಗಳು ಕೇಳಿದ್ದಕ್ಕೆ, ಅದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ, ನೀವೆಲ್ಲರೂ ಪ್ರಭಾಸ್ ಅವರ ಮದುವೆಯ ಬಗ್ಗೆ ಕೇಳುತ್ತಿರಿ ಅಲ್ಲವೇ? ಪಾರ್ವತಿ ದೇವಿ ಬಳಿ ಪ್ರಭಾಸ್ ಮದುವೆ ಬೇಗ ಆಗಲಿ ಎಂದೇ ಪ್ರಾರ್ಥಿಸಿದ್ದೇನೆ' ಎಂದಿದ್ದಾರೆ.

ಡಾರ್ಲಿಂಗ್‌ನ ಭಾವಿ ಪತ್ನಿ ಯಾರು?
'ಇದೇ ವರ್ಷ ಪ್ರಭಾಸ್ ಮದುವೆ ಆಗುತ್ತಾ ಎಂಬ ಪ್ರಶ್ನೆಗೂ ಉತ್ತರಿಸಿರುವ ಅವರು, ಶಿವನ ಅಪ್ಪಣೆ ಇಲ್ಲದೆ ಏನೂ ನಡೆಯಲ್ಲ ಎಂದು ಹೇಳಲಾಗುತ್ತದೆ. ನಾವು ಆ ಅಪ್ಪಣೆಗಾಗಿ ಕಾಯುತ್ತಿದ್ದೇವೆ. ದೇವರು ಬಯಸಿದಾಗಲೇ ಅದು ಆಗುತ್ತದೆ. ಆ ಸಮಯ ಖಂಡಿತವಾಗಿಯೂ ಬರುತ್ತದೆ. ನಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಅವರಿಗೂ ನಾವು ಉತ್ತಮ ಸಂಬಂಧವನ್ನು ಸಹ ನೋಡಬೇಕು' ಎಂದಿದ್ದಾರೆ.
'ಪ್ರಭಾಸ್ ಸಂಬಂಧಿಕರ ಮಗಳನ್ನು ಮದುವೆಯಾಗುತ್ತಾರೋ ಅಥವಾ ಚಿತ್ರರಂಗದ ನಾಯಕಿಯನ್ನು ಮದುವೆಯಾಗುತ್ತಾರೋ ಎಂದು ತನಗೆ ತಿಳಿದಿಲ್ಲ. ಆದರೆ ದೇವರ ಅಪ್ಪಣೆಯಂತೆ ಮದುವೆ ಖಂಡಿತವಾಗಿಯೂ ನಡೆಯುತ್ತದೆ' ಎಂದೂ ಶ್ಯಾಮಲಾ ದೇವಿ ಸಿಹಿಸುದ್ದಿ ನೀಡಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಪ್ರಭಾಸ್ ಅವರಿಗೆ ಹುಡುಗಿ ಫಿಕ್ಸ್ ಆಗಿದ್ದು, ಮದುವೆಗೆ ಭರ್ಜರಿ ತಯಾರಿಯೂ ನಡೆಯುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ.












Click it and Unblock the Notifications