ನಟಿಯ ಸೊಂಟಕ್ಕೆ ಎಲ್ಲರೆದುರೇ ಕೈ‌ ಹಾಕಿದ ನಟ, ವಿಡಿಯೋ ವೈರಲ್

ಸಿನಿಮಾಗಳಲ್ಲಿ ಪ್ರೇಕ್ಷಕರನ್ನ ರಂಜಿಸಬೇಕು ಅಂತ ಕೆಲವು ರೊಮ್ಯಾಂಟಿಕ್‌ ಸೀನ್‌ಗಳನ್ನ ಇಟ್ಟಿರುತ್ತಾರೆ. ಸಾಮಾನ್ಯವಾಗಿ ನಟಿಯರನ್ನ ಸಖತ್‌ ಬೋಲ್ಡ್‌ ಆಗಿ ತೋರಿಸುವುದು ಈಗಿನ ಸಿನಿಮಾಗಳ ಗಿಮಿಕ್‌ ಅಂದ್ರೆ ತಪ್ಪಾಗಲ್ಲ. ಆದರೆ ನಟಿಯರನ್ನು ಸ್ಪರ್ಶಿಸುವ ಸೀನ್‌ ಶೂಟಿಂಗ್‌ ವೇಳೆ ಜಾಗ್ರತೆಯೂ ವಹಿಸಿರುತ್ತಾರೆ. ಆದರೆ ಖ್ಯಾತ ನಟನೊಬ್ಬ ಕಾರ್ಯಕ್ರಮದ ವೇದಿಕೆಯಲ್ಲೇ ನಟಿಯ ಸೊಂಟಕ್ಕೆ ಕೈಹಾಕುವ ಮೂಲಕ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾನೆ. ನಟಿಗೆ ಕೊಂಚ ಮುಜುಗರವಾದರೂ ನಟ ಪದೇ ಪದೇ ಸೊಂಟ ಮುಟ್ಟಿ ಪೋಲಿಯಂತೆ ವರ್ತಿಸಿರುವ ವಿಡಿಯೋ ವೈರಲ್‌ ಆಗಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭೋಜ್‌ಪುರಿ ನಟ ಪವನ್ ಸಿಂಗ್ ಅವರು ನಟಿ ಅಂಜಲಿ ರಾಘವ್ ಅವರ ಸೊಂಟವನ್ನು ಅನುಚಿತವಾಗಿ ಮುಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನಟನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಸೈಯಾ ಸೇವಾ ಕರೇ ಹಾಡಿನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಈ ಸಂಗತಿ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.

actor-pawan-singh-viral-video-with-actress-anjali-raghav-controversy

ಈ ಹಾಡಿನಲ್ಲಿ ನಟಿ ಅಂಜಲಿ ರಾಘವ್ ಕೂಡ ಕಾಣಿಸಿಕೊಂಡಿದ್ದು, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಆದರೆ ಕಾರ್ಯಕ್ರಮದ ಈ ವಿಡಿಯೋ ವೈರಲ್ ಆದ ನಂತರ ಹಾಡಿನ ಪ್ರಚಾರವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗೆ ಗುರಿಯಾಗಿದೆ.

ಮುಜುಗರದಿಂದ ಒದ್ದಾಡಿದ ನಟಿ

ವೈರಲ್‌ ವಿಡಿಯೋದಲ್ಲಿ ಪವನ್ ಸಿಂಗ್ ಮತ್ತು ಅಂಜಲಿ ರಾಘವ್ ಒಂದೇ ವೇದಿಕೆಯಲ್ಲಿ ಒಟ್ಟಿಗೆ ನಿಂತಿರುವುದು ಕಂಡುಬರುತ್ತದೆ. ಅಂಜಲಿ ಹೊಳೆಯುವ ಚಿನ್ನದ ಸೀರೆಯನ್ನು ಧರಿಸಿ ಮೈಕ್‌ನಲ್ಲಿ ಮಾತನಾಡುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಪವನ್ ಕಾರ್ಯಕ್ರಮದ ನಡುವೆ ಅಂಜಲಿ ಅವರ ಸೊಂಟದ ಮೇಲೆ ಎರಡೆರಡು ಬಾರಿ ಕೈ ಇಟ್ಟಿದ್ದಾರೆ. ಇದರಿಂದ ಕಸಿವಿಸಿಗೊಂಡ ನಟಿ ಸುಮ್ಮನೆ ನಗುತ್ತಾ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವರು ಇದನ್ನು ಅನುಚಿತ ನಡವಳಿಕೆ ಎಂದು ಕರೆದಿದ್ದಾರೆ. ಈ ಮನುಷ್ಯ ಎಂದಿಗೂ ಬದಲಾಗಲ್ಲ ಎಂದು ಹಲವರು ಟೀಕಿಸಿದ್ದಾರೆ. ನಟಿ ಖಾಸಗಿ ಭಾಗವನ್ನು ಈ ರೀತಿ ಸಾರ್ವಜನಿಕವಾಗಿಯೇ ಸ್ಪರ್ಶಿಸುವ ಅಗತ್ಯವೇನಿತ್ತು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. "ಸಮ್ಮತಿ ಅನ್ನೋದು ಒಂದು ಮೂಲಭೂತ ವಿಷಯ. ಯಾರಾದರೂ ಕೇಳದೆ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಬಾರದು" ಎಂದು ಬುದ್ಧಿ ಹೇಳಿದ್ದಾರೆ.

ನಟ ಪವನ್ ಸಿಂಗ್ ಇಂತಹ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲೇನಲ್ಲ. ಗಾಯಕನಾಗಿಯೂ ಗುರುತಿಸಿಕೊಂಡಿರುವ ಪವನ್‌, ಈ ಹಿಂದೆಯೂ ಅನುಚಿತ ವರ್ತನೆಯ ಆರೋಪಗಳನ್ನು ಎದುರಿಸಿದ್ದಾರೆ. ಸಹ ನಟಿ ಅಕ್ಷರಾ ಸಿಂಗ್ ಕೂಡ ತಮ್ಮ ಮೇಲೆ ಕಿರುಕುಳ ಮತ್ತು ದುರ್ನಡತೆಯ ಆರೋಪ ಮಾಡಿದ್ದರು. ಆದರೆ ಪದೇ ಪದೇ ಇಂತಹ ವಿಚಾರಗಳಿಂದಲೇ ನಟ ಪವನ್‌ ಸುದ್ದಿಯಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+