ನಟ ಮಡೆನೂರು ಮನು ಪೊಲೀಸ್ ಕಸ್ಡಡಿಗೆ
ಕಿರುತೆರೆ ನಟಿಯೊಬ್ಬರು ತಮ್ಮ ಮಾಡಿರುವ ಅತ್ಯಾಚಾರ ಆರೋಪ ಕೇಸ್‌ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಹನಟಿ ನೀಡಿದ ದೂರಿನ ಮೇರೆಗೆ ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಿನ್ನೆ ಬಂಧಿಸಿದ್ದರು. ಇಂದು ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮನು ಅವರನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸಹನಟಿಯೊಬ್ಬರು ಮನು ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಮನು ಅವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಕೇಳಿದ್ದರು. ಅದರಂತೆ ಮೇ 27ರವರೆಗೂ ಮನು ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇಂದಿನಿಂದಲೇ ಪೊಲೀಸರು ಮನು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.

ಈ ಆರೋಪದಲ್ಲಿ ವಿಡಿಯೋ ಆಡಿಯೋ ಸಾಕ್ಷ್ಯಾಧಾರಗಳು ಎನಿಸುವುದಿಲ್ಲ. ಇದು ನ್ಯಾಯಾಲಯದಲ್ಲಿ ನಿಲ್ಲಲ್ಲ ಎಂದು ಮನು ಪರ ವಕೀಲರು ಹೇಳಿದ್ದಾರೆ. ಮನು ಅವರು ನಟಿಸಿರುವ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಇಂದು ಬಿಡುಗಡೆಯಾಗಿದೆ. ಇದಕ್ಕೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ ಎಂದು ಮನು ಪರ ವಕೀಲರು ಹೇಳಿದ್ದಾರೆ.
ʼಅಪ್ಪಣ್ಣ ಬಗ್ಗೆ ವಿಡಿಯೋ ಮಾಡಿಸಿದ್ದೇ ಮನುʼ
ವೈರಲ್ ಆಡಿಯೋದಲ್ಲಿ ಮತ್ತೊಬ್ಬ ನಟ ಅಪ್ಪಣ್ಣ ಹೆಸರು ಕೂಡ ಕೇಳಿಬಂದಿತ್ತು. ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಸಂತ್ರಸ್ತೆ, ನಟ ಅಪ್ಪಣ್ಣ ಅವರ ವಿಚಾರವಾಗಿ ಮನು ಒತ್ತಾಯ ಮಾಡಿ ಆಡಿಯೋ ರೆಕಾರ್ಡ್ ಮಾಡಿಸಿದ್ದ. ಕಳೆದ ಏಪ್ರಿಲ್‌ನಲ್ಲಿ ಬ್ಲಾಕ್‌ಮೇಲ್ ಮಾಡಿ ಅವನೇ ವಿಡಿಯೋ ಮಾಡಿಸಿದ್ದ ಎಂದು ಹೇಳಿದ್ದಾರೆ. ಅಲ್ಲದೆ ಅಪ್ಪಣ್ಣ ಜೊತೆ ಕಾರ್ಯಕ್ರಮಗಳಿಗೆ ಹೋಗಬಾರದು ಎಂದು ಮನು ಬೆದರಿಸಿದ್ದ. ಈ ವಿಡಿಯೋ ಮಾಡಿದ್ರೆ ನಾನು ನಿನ್ನ ಕೈಬಿಡೋದಿಲ್ಲ ಎಂದು ನಂಬಿಸಿದ್ದ. ಇದಕ್ಕೆ ನಾನು ಅಪ್ಪಣ್ಣ ಅವರ ಬಳಿ ಕ್ಷಮೆ ಕೂಡ ಕೇಳಿದ್ದೇನೆ ಎಂದಿದ್ದಾರೆ.

ಇದೇ ಕೇಸ್‌ನಲ್ಲಿ ಅಲೋಕ್ ಎಂಬುವವರ ಹೆಸರು ಕೂಡ ಕೇಳಿಬಂದಿದೆ. ಅವರು ಸಮಾಜ ಸೇವಕರು, ನನ್ನ ಹಾಗೂ ಆತನ ಮಧ್ಯೆ ಯಾವುದೇ ಲವ್ ಇರಲಿಲ್ಲ. ಆ ವ್ಯಕ್ತಿಯೇ ನನ್ನ ಮತ್ತು ಮನು ವಿಚಾರದಲ್ಲಿ ಸಂಧಾನ ಮಾಡುತ್ತಿದ್ದರು. ಮನು ನನಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ನನಗೆ ಚೆನ್ನಾಗಿ ಕುಡಿಸಿ ಸಾಕಷ್ಟು ಆಡಿಯೋ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.
ಆದರೂ ಇದನ್ನೆಲ್ಲ ಸಹಿಸಿಕೊಂಡು ಈಗ ದೂರು ಕೊಡಲು ಕಾರಣ ಏನಂದ್ರೆ, ಕಳೆದ ಮನು ನನಗೆ ಕುಡಿಸಿ, ಖಾಸಗಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ. ಈಗ ವೈರಲ್ ಆಗಿರುವ ಆಡಿಯೋ ಹಾಗೂ ವಿಡಿಯೋಗಳನ್ನು ಮನು ನನ್ನಿಂದ ಬಲವಂತವಾಗಿ ಮಾಡಿಸಿದ್ದ. ಶನಿವಾರ ಅವನು ನನ್ನೊಂದಿಗೆ ಕ್ರೂರವಾಗಿ ನಡೆದುಕೊಂಡ ಕಾರಣಕ್ಕೆ ದೂರು ಕೊಟ್ಟೆ. ಮನು ಸಿನಿಮಾ ವಿಚಾರಕ್ಕೂ ನಾನು ದೂರು ಕೊಟ್ಟಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಮನು ನನಗೆ ಮುಂದೆ ಏನು ಮಾಡುತ್ತಾನೋ ಎಂಬ ಭಯದಿಂದ ದೂರು ಕೊಟ್ಟೆ ಎಂದಿದ್ದಾರೆ.












Click it and Unblock the Notifications