ನುಚ್ಚು ನೂರಾಯ್ತು ಮಡೆನೂರು ಮನು ಕನಸು, ಕನ್ನಡ ಚಿತ್ರರಂಗದಿಂದ ಮಹತ್ವದ ನಿರ್ಧಾರ!
ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನುಗೆ ಕನ್ನಡ ಚಿತ್ರರಂಗ ದೊಡ್ಡ ಶಾಕ್ ನೀಡಿದೆ. ನಟರಾದ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದರ್ಶನ್ ಅವರ ಬಗ್ಗೆ ಮನು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ವಿಚಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ಪರಿಗಣಿಸಿ, ಇಂದು ದಿಢೀರ್ ಸಭೆ ನಡೆಸಿದೆ. ಈ ಸಭೆಯಲ್ಲಿ ಮನು ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಈಗ ತಾನೇ ಮೊದಲ ಸಿನಿಮಾ ರಿಲೀಸ್ ಆಗಿ ದೊಡ್ಡ ನಟನಾಗಬೇಕು ಎಂದುಕೊಂಡಿದ್ದ ಮನು ಅವರ ಕನಸಿಗೆ ದೊಡ್ಡ ಆಘಾತ ನೀಡಲು ಚಿತ್ರರಂಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪದ ಜೊತೆಗೆ ಸ್ಯಾಂಡಲ್‌ವುಡ್ ನಟ ಸಾವಿನ ಬಗ್ಗೆಯೂ ಮಡೆನೂರು ಮನು ಮಾತನಾಡಿದ್ದಾರೆ ಎಂಬ ಸಾಲು ಸಾಲು ಆರೋಪ ಹೊತ್ತಿರುವುದಿರಂದ ಅವರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಈ ಸಂಬಂಧ ಇಂದಿನ ಸಭೆಯಲ್ಲಿ ಚಿತ್ರರಂಗದ ಪ್ರಮುಖರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಈಗಾಗಲೇ ಮೂರೂ ನಟರ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ಇದರೊಂದಿಗೆ ಮನು ಅವರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.

ಕಿರುತೆರೆ ಮೂಲಕ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಮಡೆನೂರು ಮನು, ಈಗಷ್ಟೇ ಚಿತ್ರರಂಗದಲ್ಲಿ ಮೊದಲ ಸಿನಿಮಾ ಮೂಲಕ ಅಂಬೆಗಾಲಿಟ್ಟಿದ್ದಾರೆ. ಆದರೆ ಸಿನಿರಂಗದಲ್ಲಿ ಮೊದಲ ಹೆಜ್ಜೆಯಲ್ಲೇ ಮನು ಭವಿಷ್ಯ ತಲೆಕೆಳಗಾಗಿದೆ. ಮನುದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಮನು ಅವರನ್ನು ಕಿರುತೆರೆ ಹಾಗೂ ಹಿರಿತೆರೆಯಿಂದ ಬ್ಯಾನ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅ*ತ್ಯಾಚಾರ ಕೇಸ್ ಒಂದೆಡೆಯಾರೆ ಮನು ವಿರುದ್ಧ ಶಿವಣ್ಣ, ಧ್ರುವ, ದರ್ಶನ್ ಅಭಿಮಾನಿಗಳು ಕೂಡ ದೂರು ನೀಡಲು ಮುಂದಾಗಿದ್ದಾರೆ. ಈಗ ಮಡೆನೂರು ಮನು ವಿರುದ್ಧ ಫಿಲ್ಮ್ ಚೇಂಬರ್ ಕೂಡ ದೂರು ಕೊಡಲು ಮುಂದಾಗಿದೆ. ವೈರಲ್ ಆಗಿರುವ ಆಡಿಯೋ ಕುರಿತು ಗಂಭೀರವಾಗಿ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾಹಿತಿ ನೀಡಿದ್ದಾರೆ.

ಮನು ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಬಂಧ ಚಿತ್ರರಂಗದ ಎಲ್ಲ ಸಂಸ್ಥೆಗಳನ್ನು ಕರೆದು ಸಭೆ ಮಾಡಿದ್ದೇವೆ. ಆತ ನಿಜಕ್ಕೂ ದುರಹಂಕಾರದ ಮಾತುಗಳನ್ನಾಡಿದ್ದಾನೆ. ಹಾಗಾಗಿ ಇಡೀ ಚಿತ್ರರಂಗ ಮನುಗೆ ಅಸಹಕಾರ ತೋರಿಸಲು ತೀರ್ಮಾನಿಸಿದೆ. ಮನು ಈಗಾಗಲೇ ಜೈಲು ಸೇರಿದ್ದಾರೆ. ಎಲ್ಲ ಅಂಗ ಸಂಸ್ಥೆಗಳೂ ಅವರಿಗೆ ಯಾವುದೇ ರೀತಿ ಸಹಾಯ ಮಾಡುವುದಿಲ್ಲ. ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗುವವರೆಗೆ ಅವರು ಯಾವುದೇ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ಹೇಳಿದ್ದಾರೆ.
ಆಡಿಯೋದಲ್ಲಿ ಏನಿತ್ತು?
ವೈರಲ್ ಆಗಿದ್ದ ಆಡಿಯೋದಲ್ಲಿ ದರ್ಶನ್ ಈಗಾಗಲೇ ಸತ್ತೇ ಹೋದ, ಸಿನಿಮಾ ಮಾಡಲ್ಲ, ಶಿವರಾಜ್‌ಕುಮಾರ್ ಇನ್ನೊಂದು ಆರು ವರ್ಷ ಅಷ್ಟೇ, ಧ್ರುವ ಸರ್ಜಾ ಕೂಡ ಇನ್ನು ಕೆಲವು ವರ್ಷ. ಈ ಮೂವರಿಗೆ ಕಾಂಪಿಟೇಷನ್ ಕೊಡಲು ಬಂದಿರೋ ಗಂಡುಗಲಿ ನಾನುʼ ಎಂದು ಅವಹೇಳನಕಾರಿ ಮಾತುಗಳನ್ನಾಡಿರುವುದು ಬೆಳಕಿಗೆ ಬಂದಿದೆ. ಇದು ಮನು ಹೇಳಿರುವ ಮಾತುಗಳು ಎಂಬ ಆರೋಪ ಕೇಳಿಬಂದಿದ್ದು, ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ.












Click it and Unblock the Notifications