Video Viral: ಮ್ಯಾನ್‌ ಹೋಲ್‌ಗಿಳಿದ ಗೋಲ್ಡನ್‌ ಸ್ಟಾರ್ ಗಣೇಶ್, ರಮೇಶ್ ಅರವಿಂದ್‌, ವಿಡಿಯೋ ಭಾರೀ ವೈರಲ್‌

ಬೆಂಗಳೂರು, ಡಿಸೆಂಬರ್, 05: ನಟ ರಮೇಶ್‌ ಅರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್‌ ಇರಿಬ್ಬರೂ ಮ್ಯಾನ್‌ ಹೋಲ್‌ಗೆ ಇಳಿದಿದ್ದಾರೆ. ಈ ವೇಳೆ ಅವರ ಸುತ್ತಲೂ ಜನ ನೆರೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗುತ್ತಿದೆ. ಇದನ್ನು ನಟ ದರ್ಶನ್‌ ರಮೇಶ್‌ ಅರವಿಂದ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳ ಶೂಟಿಂಗ್‌ ವೇಳೆ ನಡೆದ ಕೆಲವು ಸೀನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿರುವ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ನಟ ರಮೇಶ್ ಅವರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಮ್ಯಾನ್‌ ಹೋಲ್‌ಗೆ ಇಳಿದಿರುವ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

Actor Golden Star Ganesh and Ramesh Aravind Fall into Manhole video viral

ವಿಖ್ಯಾತ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಯುವರ್ಸ್‌ ಸಿನ್ಸಿಯರ್ಲಿ ರಾಮ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಮೇಶ್‌ ಅರವಿಂದ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಇಬ್ಬರು ಜೊತೆಗೆ ನಟಿಸುತ್ತಿದ್ದಾರೆ. ಹೀಗೆ ಒಂದು ಸೀನ್‌ ಶೂಟಿಂಗ್‌ ವೇಳೆ ಇವರಿಬ್ಬರನ್ನು ಮ್ಯಾನ್‌ ಹೋಲ್‌ಗೆ ಇಳಿಸಲಾಗಿದೆ. ಆದರೆ ಭಯ ಪಡುವಂತಹ ವಿಚಾರವೇನಲ್ಲ. ಇನ್ನೂ ಈ ವಿಡಿಯೋಗೆ ಇದೀಗ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮುಂಗಾರು ಮಳೆ ಸಿನಿಮಾದಲ್ಲಿ ಪೂಜಾ ಗಾಂಧಿ ಅವರ ಕೈ ಗಡಿಯಾರ ಮ್ಯಾನ್‌ ಹೋಲ್‌ ಬಿದ್ದಿರುತ್ತದೆ. ಆಗ ನಟ ಗೋಲ್ಡನ್‌ ಸ್ಟಾರ್‌ ಮ್ಯಾನ್‌ ಹೋಲ್‌ಗೆ ಇಳಿದು ಆ ವಾಚ್‌ ಹೊರತೆಗೆಯುತ್ತಾರೆ. ಇದೀಗ ನಡೆದಿರುವ ಮತ್ತೊಂದು ಸಿನಿಮಾ ಶೂಟಿಂಗ್‌ ವೇಳೆ ಇದೇ ಸೀನ್‌ ಕಣ್ಣ ಮುಂದೆ ಬಂದತಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಯುವರ್ಸ್‌ ಸಿನ್ಸಿಯರ್ಲಿ ರಾಮ್ ಸಿನಿಮಾನ ಶೂಟಿಂಗ್‌ಗಾಗಿ ಮ್ಯಾನ್‌ ಹೋಲ್‌ಗಿಳಿದ ನಟ ಅರವಿಂದ್‌ ಬ್ಲೇಸರ್‌ನಲ್ಲಿದ್ದು, ನಟ ಗೋಲ್ಡನ್‌ ಸ್ಟಾರ್ ಗಣೇಶ್‌ ಆಫ್‌ ಶರ್ಟ್‌ ಹಾಕಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು ಅಲ್ಲೇನು ಮಾಡುತ್ತಿದ್ದೀರಿ ಇಬ್ಬರು ಎಂದು ಕೇಳುವ ಮೂಲಕ ತಮಾಷೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+