ವಿಜಯಲಕ್ಷ್ಮಿ ದುಬಾರಿ ನೆಕ್ಲೇಸ್ ಕಳೆದುಕೊಂಡಾಗ ನಟ ದರ್ಶನ್ ಏನು ಮಾಡಿದ್ರು?
ನಟ ದರ್ಶನ್ ತೂಗುದೀಪ ಅವರು ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಹೊರರಾಜ್ಯದಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ತೆರಳಿದ್ದರು. ಈ ಹಿಂದೆ ವಿದೇಶದಲ್ಲಿ ಶೂಟಿಂಗ್ ನಡೆದ ವೇಳೆಯೂ ವಿಜಯಲಕ್ಷ್ಮಿ ಅವರು ದರ್ಶನ್ ಜೊತೆ ತೆರಳುತ್ತಿದ್ದರು. ಪೊರ್ಕಿ ಸಿನಿಮಾದ ಶೂಟಿಂಗ್‌ಗಾಗಿ ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಘಟನೆಯೊಂದನ್ನು ಹಿರಿಯ ಸಿನಿಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಬಹಿರಂಗಪಡಿಸಿದ್ದಾರೆ.
ಕನ್ನಡದ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಅವರು, ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಆ ಘಟನೆಯನ್ನು ನೆನೆದಿದ್ದಾರೆ. ದರ್ಶನ್ ಅವರ ಕಾಲ್‌ಶೀಟ್ ಸಿಗೋದೇ ಕಷ್ಟ ಎನ್ನುವ ಸನ್ನಿವೇಶದಲ್ಲಿ ದರ್ಶನ್ ಅವರು ನನಗೆ ಪೊರ್ಕಿ ಸಿನಿಮಾಗೆ ಕಾಲ್‌ಶೀಟ್ ಕೊಟ್ಟಿದ್ರು. ಈ ಸಿನಿಮಾದ ಎರಡು ಸಾಂಗ್ ಶೂಟಿಂಗ್‌ಗಾಗಿ ನಾವೆಲ್ಲ ಸ್ವಿಜರ್‌ಲ್ಯಾಂಡ್‌ಗೆ ತೆರಳಿದೆವು. ಅದರಂತೆ ಅವರು ಎರಡು ತಿಂಗಳಲ್ಲೇ ಶೂಟಿಂಗ್ ಮುಗಿಸಿಕೊಟ್ಟರು ಎಂದು ಅವರು ನೆನೆದಿದ್ದಾರೆ.

ಇನ್ನು ಶೂಟಿಂಗ್‌ಗಾಗಿ ನಾವೆಲ್ಲ ಸ್ವಿಜರ್‌ಲ್ಯಾಂಡ್‌ಗೆ ತೆರಳಿದಾಗ ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಕೂಡ ಬಂದಿದ್ದರು. ಈ ವೇಳೆ ಅವರು ವಿದೇಶದಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ವಿಜಯಲಕ್ಷ್ಮಿ ಅವರು ಹೋಟೆಲ್‌ನಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿ ಸುಮಾರು ಮೂರು ಲಕ್ಷ ಬೆಲೆ ಬಾಳುವ ಆಭರಣವೊಂದನ್ನು ಇಟ್ಟಿದ್ದರು. ಆದರೆ ಆ ಚಿನ್ನದ ಒಡವೆ ಅಲ್ಲಿ ಕಳ್ಳತನವಾಗಿತ್ತು. ಬೇರೆ ದೇಶದ ಪ್ರವಾಸಿಗನೊಬ್ಬ ಈ ಆಭರಣ ಕದ್ದು ಪರಾರಿಯಾಗಿದ್ದ. ಕೊನೆಗೂ ಆ ಒಡವೇ ಸಿಗಲೇ ಇಲ್ಲ ಎಂದು ಗಣೇಶ್ ಕಾಸರಗೋಡು ವಿವರಿಸಿದ್ದಾರೆ.
ಇನ್ನು ವಿಜಯಲಕ್ಷ್ಮಿ ಅವರ ಒಡವೆ ಕಳವಾದಾಗ ನಾವೇ ಅದಕ್ಕೆ ಹಣ ಕೊಡುತ್ತೇವೆ ಎಂದು ಹೇಳಿದೆವು. ಯಾಕೆಂದರೆ ನಮ್ಮ ಸಿನಿಮಾ ಶೂಟಿಂಗ್‌ಗೆ ಬಂದಾಗ ಈ ಘಟನೆ ನಡೆದಿದ್ದರಿಂದ ಆ ಹಣ ನಾವೇ ಕೊಡಲು ಮುಂದಾದೆವು. ಆದರೆ ನಟ ದರ್ಶನ್ ಅವರು ಇದಕ್ಕೆ ಒಪ್ಪಲೇ ಇಲ್ಲ. ಬದಲಿಗೆ ಆ ಕಳವಾದ ಬ್ಯಾಗ್ ಸಿಕ್ಕರೆ ನಮ್ಮ ಅದೃಷ್ಟ ಎಂದು ತಿಳಿಯೋಣ, ಇಲ್ಲದಿದ್ರೆ ಅದು ನಮ್ಮದಲ್ಲ ಅಂತ ಸುಮ್ಮನಾಗೋಣ ಎಂದು ಹೇಳಿಬಿಟ್ಟರು. ಸಿನಿಮಾ ನಿರ್ಮಾಪಕರ ಬಳಿ ದರ್ಶನ್ ಕೊನೆಗೂ ಹಣ ತೆಗೆದುಕೊಳ್ಳಲೇ ಇಲ್ಲ ಎಂದು ಹೇಳಿದ್ದಾರೆ.

ದರ್ಶನ್ ಅವರನ್ನು ಹೊಗಳಿಕೊಂಡು ಅಥವಾ ತೆಗಳಿಕೊಂಡು ನನಗೆ ಏನೂ ಆಗಬೇಕಿಲ್ಲ. ಆದರೆ ನಾನು ಕಂಡ ದರ್ಶನ್ ಏನು ಎಂಬುದು ಇಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ. ಈ ಕಾಲದಲ್ಲಿ ಯಾರೂ ಒಂದು ಪೈಸೆ ಬಿಚ್ಚೋದಿಲ್ಲ. ಹಾಗಿರುವಾಗ ಅವರು ಕಲಾವಿದರ ಬದುಕಿಗೆ ಆಸರೆಯಾಗಿದ್ದರು. ದರ್ಶನ್ ಅವರಿಗೆ ಈಗಾಗಲೇ ಅವರದ್ದೇ ಆದ ಸಮಸ್ಯೆಗಳಿತ್ತು. ಅಂತಹ ಸಂದರ್ಭದಲ್ಲೂ ಅವರು ಬೇರೆ ಕಲಾವಿದರ ಬದುಕಿಗೆ ಬೆಳಕಾದರು. ಅದು ದರ್ಶನ್ ಅವರ ಹೃದಯವಂತಿಕೆ ಎಂದು ಹೊಗಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ಹಲವು ತಿಂಗಳ ಬಳಿಕ ದರ್ಶನ್ ಅವರು ಇತ್ತೀಚೆಗೆ ಸಿನಿಮಾ ಶೂಟಿಂಗ್‌ಗೆ ಮರಳಿದ್ದಾರೆ. ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ಕಳೆದ ವಾರ ಅವರು ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆಯೂ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್ ಕೂಡ ಅವರೊಂದಿಗೆ ತೆರಳಿದ್ದರು.












Click it and Unblock the Notifications