ಆಗಸ್ಟ್ 30ಕ್ಕೆ ಜೈಲಲ್ಲಿರುವ ನಟ ದರ್ಶನ್ ಸಿನಿಮಾ ರಿರೀಲಿಸ್
ಬೆಂಗಳೂರು, ಆಗಸ್ಟ್ 16: ನಟ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಜೈಲಿನಲ್ಲಿದ್ದಾರೆ. ಇದೇ ವೇಳೆ ಸುಮಾರು 20 ವರ್ಷದ ಹಿಂದೆ ಬಿಡುಗಡೆ ಆದ ಸಿನಿಮಾವನ್ನು ಮರು ಬಿಡುಗಡೆ ಆಗಲಿದೆ. ಸದ್ಯ ಇದು ಡಿ.ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದ್ದು, ಸಿನಿಮಾ ಸ್ವಾಗತಕ್ಕಾಗಿ ಭರ್ಜರಿ ಸಿದ್ದತೆ ಆರಂಭಿಸಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಅಭಿಮಾನಿಗಳು ನಮ್ಮ ಡಿ.ಬಾಸ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅವರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ. ಅದೇ ರೀತಿ 'ಕ್ರಾಂತಿ' ಬಿಡುಗಡೆ ವೇಳೆ ಇಡಿ ಸಿನಿಮಾವನ್ನು ಅಭಿಮಾನಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್ ಮಾಡಿದ್ದರು.

ಇದೀಗ ಅಂತದ್ದೇ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಕುರಿತು 'ಡಿ ಕಂಪನಿ ಫ್ಯಾನ್ ಅಸೋಸಿಯೇಷನ್ ಆರ್ ಅಫಿಸಿಯಲ್' ಫೇಸ್ ಬುಕ್ ಪೇಜಿನಲ್ಲಿ ಸಿನಿಮಾ ರಿರಿಲೀಸ್ ಬಗ್ಗೆ ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಈ ಪೇಜಿನಲ್ಲಿ ದರ್ಶನ್‌ರ 'ಕರಿಯಾ' ಸಿನಿಮಾದ ರಿರಿಲೀಸ್ ದಿನಾಂಕ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗಿದೆ. ಜೊತೆಗೆ ''ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 700ಕ್ಕು ಹೆಚ್ಚು ದಿನಗಳು ಪ್ರದರ್ಶನ ಕಂಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಸಿನಿಮಾ ಇದೇ ಆಗಸ್ಟ್ 30ರಂದು ರಾಜ್ಯದಾದ್ಯಂತ ಮರುಬಿಡುಗಡೆಯಾಗುತ್ತಿದೆ'' ಎಂದು ಬರೆದುಕೊಳ್ಳಲಾಗಿದೆ.
ನಟ ನಿರ್ದೇಶಕ ಪ್ರೇಮ್ ನಿರ್ದೇಶನದ ಸಿನಿಮಾ ಇದಾಗಿದ್ದು, ನಟ ದರ್ಶನ್ ಕೆರಿಯರ್‌ಗೆ ಭರ್ಜರಿ ಬ್ರೇಕ್ ನೀಡಿದ್ದ ಸಿನಿಮಾ. ಅಂಡರ್‌ವರ್ಲ್ಡ್ ಮತ್ತು ಪ್ರೀತಿಯ ಎಳೆಯ ಇರುವ ಈ ಸಿನಿಮಾ ಅಂದು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಹೆಸರು ಮಾಡಿತ್ತು.
ಸದ್ಯ ನಟ ದರ್ಶನ್ ಜೈಲಿನಲ್ಲಿದ್ದಾರೆ. ಬುಧವಾರ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹದಿನೇಳು ಮಂದಿ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತು ಎರಡು ವಾರ (14 ದಿನ) ವಿಸ್ತರಣೆ ಆಗಿದೆ. ತಮ್ಮ ನಟನಿಗೆ ಇವತ್ತು ಇಲ್ಲವೇ ನಾಳೆ ಬೇಲ್ ಸಿಗಲಿದೇ ಎಂದು ಕಾಯುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಆಗಿದೆ.
ಇತ್ತೀಚೆಗೆ ರಿರೀಲಿಸ್ ಆದ ಕನ್ನಡ ಸಿನಿಮಾಗಳು
ಈ ಮಧ್ಯೆ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಸಿನಿಮಾ ತೆರೆ ಕಾಣುತ್ತಿಲ್ಲ ಎಂಬ ಕಾರಣದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 'ಜಾಕಿ, ಅಂಜನಿಪುತ್ರ ಹಾಗೂ ಪವರ್' ಸಿನಿಮಾ, ನಟ ಉಪೇಂದ್ರ ಅವರ 'ಎ' ಸಿನಿಮಾ ಹಾಗೂ ಇತ್ತೀಚೆಗೆ ದರ್ಶನ್ ಅವರ 'ರಾಬರ್ಟ್' ಸಿನಿಮಾ ಸಹ ರಿರಿಲೀಸ್ ಮಾಡಲಾಗಿತ್ತು.
ಇದರ ಬೆನ್ನಲ್ಲೆ ನಟ ದರ್ಶನ್ ಮತ್ತೊಂದು ಸಿನಿಮಾ 'ಕರಿಯಾ' ಮರು ಬಿಡುಗಡೆಗೆ ವಿತರಕರು ನಿರ್ಧರಿಸಿದ್ದಾರೆ. ನಟ ದರ್ಶನ್ ಜೈಲಿನಲ್ಲಿರುವಾಗ ಸಿನಿಮಾ ಮರು ಬಿಡುಗಡೆ ಆದರೆ ವೀಕ್ಷಕರು ಬರುತ್ತಾರಾ? ಹೇಗೆ ಎಂಬ ಕುತೂಹಲ ಇದೆ. ಈ 'ಕರಿಯಾ' ಸಿನಿಮಾ 2003ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಮತ್ತೆ ರಿರೀಲಿಸ್ ಆಗುತ್ತಿದೆ. ಡಿ ಬಾಸ್ ಅಭಿಮಾನಿಗಳ ಪಾಲಿಗೆ ಆಗಸ್ಟ್ 30 ಹಬ್ಬ ಎನ್ನಬಹುದು.












Click it and Unblock the Notifications