Actor Darshan Bail: ಅಪ್ಪನ ಜೊತೆಗಿನ ಫೋಟೋ ಹಾಕಿ ಖುಷಿ ವ್ಯಕ್ತಪಡಿಸಿದ ದರ್ಶನ್ ತೂಗುದೀಪ್ ಪುತ್ರ ವಿನೀಶ್!
Actor Darshan Bail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು (ಡಿಸೆಂಬರ್ 13) ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದರು. ಇದೀಗ ಪುತ್ರ ವಿನೀಶ್ ಕೂಡ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಬೆನ್ನು ನೋವು ಹಿನ್ನೆಲೆ ಹೈಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಸರ್ಜರಿಗೆಂದು ಹೊರಗಡೆ ಬಂದಿದ್ದರು. ಇದೀಗ ಇಂದು ಕೊನೆಗೂ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಜ್ಯಾಂದ್ಯಂತ ಅಭಿಮಾನಿ ಸಂಭ್ರಾಮಾಚರಣೆ ಮಾಡಲು ಶುರು ಮಾಡಿದ್ದಾರೆ. ಮತ್ತೊಂದೆಡೆ ಕೆಲವು ಸ್ಟಾರ್‌ಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ನಟ ದರ್ಶನ್ ದೀಪಾವಳಿ ಹಬ್ಬದ ಸಮಯದಲ್ಲೇ ಬೆನ್ನು ನೋವು ಹಿನ್ನೆಲೆ ಸರ್ಜರಿಗೆಂದು ಬಳ್ಳಾರಿ ಜೈಲಿನಿಂದ ಹೊರಬಂದಿದ್ದರು. ಅದರಲ್ಲೂ ವಿಶೇಷವಾಗಿ ಮಗ ವಿನೀಶ್ ಅವರ ಹುಟ್ಟುಹಬ್ಬದಂದೇ ನಟ ದರ್ಶನ್ ಬಿಡುಗಡೆಯಾಗಿ ಪತ್ನಿ ಜೊತೆ ಮನೆಗೆ ಆಗಮಿಸಿದ್ದರು.
ಈ ವೇಳೆ ಅಭಿಮಾನಿಗಳು ನಿವಾಸದ ಬಳಿ ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸವನ್ನೇ ಪಟ್ಟರೂ ನಿಯಂತ್ರಣ ಮಾಡಲು ಸಾಧ್ಯ ಆಗಲಿಲ್ಲ. ಬಳಿಕ ಮನೆಯಿಂದ ಹೊರಡೆ ಬಂದತಹ ನಟ ದರ್ಶನ್ ಮಗ ವಿನೀಶ್ ಅವರು, ಅಭಿಮಾನಿಗಳಿಗೆ ಕೈ ಮುಗಿದು, "ದಯವಿಟ್ಟು ಎಲ್ಲರೂ ಹೋಗಿ, ಕೋರ್ಟ್‌ನಿಂದ ಆದೇಶವಿದೆ, ನಾವೇನು ಮಾತನಾಡುವಂತಿಲ್ಲ. ದಯವಿಟ್ಟು ಎಲ್ಲರೂ ಹೋಗಿ ಅಣ್ಣ, ಯಾರೂ ಗಲಾಟೆ ಮಾಡಬೇಡಿ. ನಾವೆಲ್ಲಾರೂ ಚೆನ್ನಾಗಿದ್ದೀವಿ," ಎಂದು ಕೈಮುಗಿದು ಕೇಳಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.












Click it and Unblock the Notifications