Actor Darshan: ಜೈಲಿನಿಂದ ಬಿಡುಗಡೆಯಾದ ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ಗುಡ್ ನ್ಯೂಸ್
Actor Darshan Good News: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7ಮಂದಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರ. ಇದರ ಬೆನ್ನೆಲ್ಲೇ ನಟ ದರ್ಶನ್‌ಗೆ ಮತ್ತೊಂದು ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಹಾಗಾದರೆ ಆ ಶುಭಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲಿನಿಂದ ಬಿಡುಗಡೆಯಾಗಿದೆ. ಇದೀಗ ಜಾಮೀನಿನ ಮೇಲೆ 7 ಮಂದಿ ಆರೋಪಿಗಳಿಗನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಈ ನಡುವೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಟ ದರ್ಶನ್ ದಾಸ ನಿವಾಸದಲ್ಲಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ದರ್ಶ್‌ನೆಗೆ ಇದೀಗ ಮೈಸೂರಿಗೆ ಹೋಗಲು ಅನುಮತಿ ದೊರೆತಿದ್ದು, ಜೊತೆಗೆ ಚಿತ್ರದುರ್ಗದ ಇಬ್ಬರು ಆರೋಪಿಗಳಿಗೂ ತಮ್ಮ ಊರಿಗೆ ತೆರಳಲು ಅನುಮತಿ ಸಿಕ್ಕಿದೆ ಎಂದು ತಿಳಿದುಬಂದಿದೆ.

ಬಳ್ಳಾರಿ ಜೈಲಿನಲ್ಲಿದ್ದಾಗಲೇ ಬೆನ್ನು ನೋವು ಹಿನ್ನೆಲೆ ನಟ ದರ್ಶನ್ ಚಿಕಿತ್ಸೆಗೆಂದು ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಬಂದು ಆಸ್ಪತ್ರೆ ಸೇರಿದ್ದರು. ಇದೀಗ ಜಾಮೀನು ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಹೊರಬಂದ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿಗೆ ದೊರೆತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ನಟ ದರ್ಶನ್ ಎಲ್ಲಿಗೆಲ್ಲ ತೆರಳಬಹುದು ಎನ್ನುವ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಟ ದರ್ಶನ್ ಮೈಸೂರಿಗೆ ತೆರಳಲು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ಗೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ತಾಯಿಗೆ ಕ್ಯಾನ್ಸರ್ ಕಾಯಿಲೆಯಿದ್ದು, ಅವರನ್ನ ನೋಡಬೇಕು ಹಾಗೂ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಲಹೆ ಪಡೀಬೇಕು. ಜೊತೆಗೆ ಫಾರ್ಮ್ ಹೌಸ್‌ನ ಪ್ರಾಣಿಗಳನ್ನು ನೋಡಲು ಹೋಗಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ್ದರು.
ಇನ್ನು ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಡಿಸೆಂಬರ್ 20ರಿಂದ ಜನವರಿ 5ರ ವರೆಗೆ ಮೈಸೂರಿಗೆ ತೆರಳಲು ಅನುಮತಿ ನೀಡದೆ. ಒಟ್ಟು 4 ವಾರ ಅನುಮತಿ ಕೋರಿದ್ದ ನಟ ದರ್ಶನ್‌ಗೆ 2 ವಾರ ಮಾತ್ರ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದಿದ್ದ ಜಗದೀಶ್ ಹಾಗೂ ಅನುಕುಮಾರ್ ಇದೀಗ ತವರೂರಾದ ಚಿತ್ರದುರ್ಗಕ್ಕೆ ತೆರಳಿದ್ದಾರೆ. ಶಿವಮೊಗ್ಗ ಜೈಲಿಂದ ಬಿಡುಗಡೆಯಾದ ಇವರು ಜಗದೀಶ್ ಚಿತ್ರದುರ್ಗದ ಅಗಸನಕಲ್ಲು ಭಾಗದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾನೆ. ಇನ್ನು ಮಗ ಬಿಡುಗಡೆ ಹಿನ್ನೆಲೆ ತಾಯಿ ಸಂತಸಗೊಂಡಿದ್ದಾರೆ. ದರ್ಶನ್ & ಗ್ಯಾಂಗ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಭೀಕರವಾಗಿ ಹಲ್ಲೆಗೈದು ಹತ್ಯೆ ಮಾಡಿತ್ತು ಎನ್ನುವುದು ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣದ ನಡೆಯುತ್ತಿದ್ದಂತೆ ಪವಿತ್ರಾಗೌಡ, ನಟ ದರ್ಶನ್ & ಗ್ಯಾಂಗ್ ಜೈಲು ಸೇರಿತ್ತು.












Click it and Unblock the Notifications