ಸಿನಿಮಾ ಟ್ರೆಂಡಿಂಗ್.. ಮದುವೆ ಪೆಂಡಿಂಗ್: ಮದುವೆ ಬಗ್ಗೆ ಮೌನ ಮುರಿದ ಡಾಲಿ ಧನಂಜಯ್
ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯ ಕೋಟಿ ಚಿತ್ರ ಜೂನ್ 14ರಂದು ಬಿಡುಗಡೆಯಾಗಲಿದೆ. ಹಲವು ದಿನಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾವೊಂದು ತೆರೆ ಕಾಣುತ್ತಿದ್ದು, ಸಿನಿ ಪ್ರಿಯರು ಕಾತುರರಾಗಿದ್ದಾರೆ. ಈಗಾಗಲೇ ಕೋಟಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಡಾಲಿ ಧನಂಜಯ್ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ.
ಕೋಟಿ ಟ್ರೇಲರ್ ಸಖತ್ ವೈರಲ್ ಆಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನು ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಈ ವೇಳೆ ಡಾಲಿ ಧನಂಜಯ್ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಡಾಲಿ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಕೋಟಿ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಧನಂಜಯ್ 'ವರ್ಷಗಳು ಹೋಗುತ್ತಾ ಇರುತ್ತದೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗುವುದು ಗೊತ್ತಾಗಲ್ಲ, ಸತ್ತು ಹೋಗುವುದೂ ಗೊತ್ತಾಗಲ್ಲ. ಒಂದು ಸಿನಿಮಾ ಮಾಡುವುದರೊಳಗೆ ಎರಡು ವರ್ಷ ಕಳೆದು ಹೋಗಿರುತ್ತದೆ. ತಿರುಗಿ ನೋಡಿದಾಗ ಇಷ್ಟೋಂದು ಆಗೋಯ್ತಾ ಅನಿಸುತ್ತದೆ. ಇದು ಯಾವಾಗಲೂ ಅನಿಸುತ್ತದೆ.
ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಮದುವೆ ಯಾವಾಗ ಅಂತ ಕೇಳುವ ಹಾಗೆ ಆಗಿದೆ. ನಮಗೆ ಗೊತ್ತಾಗಿಲ್ಲ.. ನಮಗಿನ್ನು 27 ವರ್ಷ ಆದರೆ ನೋಡುವವರಿಗೆ ಇಷ್ಟು ವರ್ಷ ಆಯ್ತು ಅನಿಸುತ್ತದೆ. ಏನು ಮಾಡೋಕೆ ಆಗಲ್ಲ' ಎಂದರು.

ಮಾಡೋ ಸಿನಿಮಾಗಳೆಲ್ಲಾ ಟ್ರೆಂಡಿಂಗ್ ಮದುವೆ ಮಾತ್ರ ಪೆಡ್ಡಿಂಗ್ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಾಲಿ ಧನಂಜಯ್ 'ಮದುವೆ ಬಗ್ಗೆ ಎಲ್ಲಾ ವೇದಿಕೆಯಲ್ಲೂ ಕೇಳುತ್ತಾರೆ. ಅದೇ ಹೇಳಿದನ್ನಲ್ಲಾ ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಕೇಳುತ್ತಾರೆ. ಪ್ರಮಾಣ ಮಾಡಿದ್ದೀನಿ. ಕೋಟಿ ಚೆನ್ನಾಗಿ ಹಿಟ್ ಆಗಲಿ. ಪಕ್ಕಾ ಮದುವೆ ಆಗುತ್ತೇನೆ' ಎಂದಿದ್ದಾರೆ.
ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿಬಿಡುತ್ತಾರೆ. ಇನ್ನೊಂದು ನಂದು ತಾರಮ್ಮ ಹಾಗೂ ರಂಗಾಯಣ ರಘು ಅವರದು ಹ್ಯಾಟ್ರಿಕ್ ಕಾಂಬಿನೇಶನ್. ಬಡವ ರಾಸ್ಕಲ್ ಸೂಪರ್ ಹಿಟ್, ಟಗರು ಪಲ್ಯ ನಾನು ಬರೀ ನಿರ್ಮಾಪಕ ಆದರೆ ಕಾಂಬಿನೇಶನ್ ಸೂಪರ್ ಹಿಟ್, ಕೋಟಿಲೂ ಅದು ರಿಪೀಟ್ ಆಗುತ್ತದೆ. ಕೋಟಿ ಸಿನಿಮಾ ಕೂಡ ಹಿಟ್ ಆಗುತ್ತದೆ. ಯಾಕೆಂದರೆ ಈ ಸಿನಿಮಾ ತುಂಬ ಚೆನ್ನಾಗಿದೆ' ಎಂದಿದ್ದಾರೆ.












Click it and Unblock the Notifications