Year Ender: ಚಂದನವನದಲ್ಲಿ ಈ ವರ್ಷ ಬಿಡುಗಡೆಯಾಗಿದ್ದು 201 ಗೆಲುವು ಕಂಡಿದ್ದು ಮೂರು ಮತ್ತೊಂದು!

2024 ಮುಗಿಯುತ್ತಾ ಬಂದಿದ್ದು 2025ರ ಹೊಸ ವರ್ಷವನ್ನು ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಕನ್ನಡ ಸಿನಿಮಾ ಪ್ರೇಮಿಗಳಿಗೆ 2024 ಖುಷಿ ಕೊಟ್ಟಿಲ್ಲ, ಈ ವರ್ಷ ಯಾವ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿಲ್ಲ. ಡಿಸೆಂಬರ್ 2024ರವರೆಗೆ ಈ ವರ್ಷ ಬಿಡುಗಡೆಯಾದ ಕನ್ನಡ ಸಿನಿಮಾಗಳ ಸಂಖ್ಯೆ 201. ಇದರಲ್ಲಿ ಗೆದ್ದ ಸಿನಿಮಾ ಎಷ್ಟು ಮಾಹಿತಿ ಇಲ್ಲಿದೆ ನೋಡಿ.

ಜನವರಿ 5, 2024 ರಂದು ಒಂದೇ ದಿನ ಆದರ್ಶ ರೈತ, ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ ಮತ್ತು ಒಂಟಿ ಬಂಟಿ ಲವ್‌ಸ್ಟೋರಿ ಸಿನಿಮಾ ಬಿಡುಗಡೆಯಾಗುವ ಮೂಲಕ ವರ್ಷದ ಮೊದಲ ವಾರ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡವು.

2024 kannada super hit movies list

2024ರ ಮೊದಲ ಹಿಟ್ ಸಿನಿಮಾ ಎಂದರೆ 'ಉಪಾಧ್ಯಕ್ಷ'. ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಬಂಡವಾಳ ಹಾಕಿದ್ದ ಉಮಾಪತಿ ಗೌಡ ತಕ್ಕ ಮಟ್ಟಿಗೆ ಲಾಭ ಮಾಡಿಕೊಂಡರು. ಕೇಸ್ ಆಫ್ ಕೊಂಡಾಣ, ಬ್ಯಾಚಲರ್ ಪಾರ್ಟಿ ನಿರೀಕ್ಷೆ ಮೂಡಿಸಿದ್ದರೂ ಕಲೆಕ್ಷನ್ ವಿಚಾರದಲ್ಲಿ ಸೋತವು.

ಫೆಬ್ರವರಿಯಲ್ಲಿ ಬಿಡುಗಡೆಯಾದ 'ಒಂದು ಸರಳ ಪ್ರೇಮಕಥೆ' ಚಿತ್ರಪ್ರೇಮಿಗಳ ಮನಗೆದ್ದಿತು. ವಿನಯ್‌ ರಾಜ್‌ಕುಮಾರ್‍‌ ನಟಿಸಿದ್ದ ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾ ಕೌಟುಂಬಿಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. 'ಜೂನಿ' ಸಿನಿಮಾ ಬಗ್ಗೆ ಉತ್ತಮ ವಿಮರ್ಶೆಗಳು ಬಂದರು ಥಿಯೇಟರ್ ನಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಫೆಬ್ರವರಿ 16ರಂದು ಬಿಡುಗಡೆಯಾದ ಶಾಖಾಹಾರಿ ಸಿನಿಮಾ ನಿರ್ಮಾಪಕರ ಕೈಹಿಡಿಯಿತು.

ಮಾರ್ಚ್ 7ರಂದು ಬಿಡುಗಡೆಯಾದ ಬ್ಲಿಂಕ್ ಸಿನಿಮಾ ತನ್ನ ವಿಭಿನ್ನ ಕಥೆ, ನಿರೂಪಣಾ ಶೈಲಿಯಿಂದ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದರು, ಸಿನಿಮಾಗೆ ಸಿಗಬೇಕಾದ ದೊಡ್ಡಮಟ್ಟದ ಗೆಲುವು ಸಿಗಲಿಲ್ಲ. ಶಿವರಾಜ್‌ಕುಮಾರ್, ಪ್ರಭುದೇವ ಅಭಿನಯದ ಕರಟಕ ದಮನಕ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು.

ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಅಭಿನಯದ ಯುವ ಸಿನಿಮಾ ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾಯಿತು. ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕರೂ ದೊಡ್ಡ ಗೆಲುವು ಸಿಗಲಿಲ್ಲ. ಅವತಾರ ಪುರುಷ 2, ಚೆಫ್ ಚಿದಂಬರ, ಕೋಟಿ ಸಿನಿಮಾ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು.

ಮೊದಲ ಆರು ತಿಂಗಳಿನಲ್ಲಿ ಸೊರಗಿದ್ದ ಸಿನಿಮಾಗೆ ಗೆಲುವಿನ ಟಾನಿಕ್ ಕೊಟ್ಟಿದ್ದು ಆಗಸ್ಟ್ 9ರಂದು ಬಿಡುಗಡೆಯಾದ ಭೀಮ ಸಿನಿಮಾ. ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾ ಸೂಪರ್ ಹಿಟ್‌ ಆಯಿತು. ಮಾಸ್ ಪ್ರೇಕ್ಷಕರು ಮತ್ತೆ ಸಿನಿಮಾ ಮಂದಿರಕ್ಕೆ ಕರೆತರುವಲ್ಲಿ ಭೀಮ ಯಶಸ್ವಿಯಾಗಿದ್ದ. ಆಗಸ್ಟ್ 16ರಂದು ಬಿಡುಗಡೆಯಾದ ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಸಿನಿಮಾ ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿತು.

ಇಬ್ಬನಿ ತಬ್ಬಿದ ಇಳೆಯಲಿ, ಲಾಫಿಂಗ್ ಬುದ್ಧ, ಪೌಡರ್, ಗೌರಿ, ಪೆಪೆ, ಕಾಲಾಪತ್ಥರ್, ಮರ್ಫಿ ಬಿಡುಗಡೆಗೆ ಮುನ್ನ ನಿರೀಕ್ಷೆ ಮೂಡಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಮಾರ್ಟಿನ್‌ ಈ ವರ್ಷ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಹೀನಾಯ ಸೋಲು ಕಂಡಿತು.

ಅಕ್ಟೋಬರ್ 31ರಂದು ಬಿಡುಗಡೆಯಾದ ಬಘೀರ ಸಿನಿಮಾ ಕೂಡ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಉಗ್ರಂ, ಮಫ್ತಿ ಬಳಿಕ ಶ್ರೀಮುರಳಿ ಮತ್ತೆ ಗೆಲುವಿನ ಹಳಿಗೆ ಮರಳಿದರು. ನವೆಂಬರ್ 15ರಂದು ಬಿಡುಗಡೆಯಾದ ಭೈರತಿ ರಣಗಲ್ ಕೂಡ ಸೂಪರ್ ಹಿಟ್ ಆಗಿದ್ದು ಇನ್ನೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಭೈರತಿ ರಣಗಲ್, ಕೃಷ್ಣಂ ಪ್ರಣಯ ಸಖಿ, ಭೀಮ, ಉಪಾಧ್ಯಕ್ಷ, ಬಘೀರ ಸಿನಿಮಾಗಳು ಮಾತ್ರ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿವೆ. ಶಾಖಾಹಾರಿ, ಒಂದು ಸರಳ ಪ್ರೇಮಕತೆ, ಬ್ಲಿಂಕ್ ಸಿನಿಮಾ ಸಾಧಾರಣ ಯಶಸ್ಸು ಕಂಡಿವೆ. ಉಳಿದ ಸಿನಿಮಾಗಳು ಹಾಗೆ ಬಂದು ಹೀಗೆ ಹೋಗಿವೆ.

ಡಿಸೆಂಬರ್ ತಿಂಗಳ 20ರಂದು ಯುಐ ಮತ್ತು 25ರಂದು ಮ್ಯಾಕ್ಸ್ ಬಿಡುಗಡೆಗೆ ಸಜ್ಜಾಗಿದ್ದು ಎರಡೂ ಸಿನಿಮಾ ಹಿಟ್‌ ಆದರೆ ಮಾತ್ರ ಈ ವರ್ಷ ಸ್ಯಾಂಡಲ್‌ವುಡ್‌ ತಕ್ಕಮಟ್ಟಿಗೆ ಪ್ರದರ್ಶನ ನೀಡಿದಂತಾಗುತ್ತದೆ. 2025ರಲ್ಲಿ ಕಾಂತಾರ ಅಧ್ಯಾಯ 1 ಮತ್ತು ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಸ್ಯಾಂಡಲ್‌ವುಡ್‌ ಮತ್ತೆ ಗೆಲುವಿನ ಹಳಿಗೆ ಮರಳುತ್ತದೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+