ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯೇಂದ್ರಗೆ ಟಿಕೆಟ್ ಕೈತಪ್ಪಲು ರಾಹುಲ್ ಗಾಂಧಿ ಕಾರಣ!

|
Google Oneindia Kannada News

Recommended Video

ಬಿ ಎಸ್ ವೈ ಮಗನಿಗೆ ಟಿಕೆಟ್ ಕೈ ತಪ್ಪಲು ಕಾಂಗ್ರೆಸ್ ಉಪಾಧ್ಯಕ್ಷರು ಕಾರಣವಂತೆ | Oneindia Kannada

ಬೆಂಗಳೂರು, ಮೇ 2: ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಇನ್ನೇನು ಟಿಕೆಟ್ ಕೈಸೇರಿತು ಎಂಬ ನಿರೀಕ್ಷೆಯಲ್ಲಿ ಮೊದಲೇ ನಾಮಪತ್ರ ಸಲ್ಲಿಸಿದ್ದ ಬಿ.ಎಸ್, ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ತೀವ್ರ ನಿರಾಸೆ ಅನುಭವಿಸಿದ್ದರು.

ವಿಜಯೇಂದ್ರ ವರುಣಾದಿಂದ ಸ್ಪರ್ಧಿಸುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ, ವಿಜಯೇಂದ್ರ ಬೆಂಬಲಿಸಿ ಪ್ರತಿಭಟನೆಗಳು ನಡೆದಿದ್ದವು. ಬಿಜೆಪಿ ಕಾರ್ಯಕರ್ತರು ನೋಟಾ ಅಭಿಯಾನವನ್ನೂ ಆರಂಭಿಸಿದ್ದರು. ವಿಜಯೇಂದ್ರಗೆ ಟಿಕೆಟ್ ನೀಡದಂತೆ ಕೊನೆಯ ಹಂತದಲ್ಲಿ ಬದಲಾವಣೆಗಳಾಗಲು ಅನೇಕ ಕಾರಣಗಳನ್ನು ವಿಶ್ಲೇಷಿಸಲಾಗಿತ್ತು.

ಆ ಒಂದು ಕರೆಯಿಂದಾಗಿ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಕೈ ತಪ್ಪಿತು ಟಿಕೆಟ್‌!ಆ ಒಂದು ಕರೆಯಿಂದಾಗಿ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಕೈ ತಪ್ಪಿತು ಟಿಕೆಟ್‌!

ವಿಜಯೇಂದ್ರಗೆ ಟಿಕೆಟ್ ನೀಡದೆ ಇರುವುದು ತಮ್ಮದೇ ನಿರ್ಧಾರ ಎಂದು ಯಡಿಯೂರಪ್ಪ ಹೇಳಿದ್ದರು. ಟಿಕೆಟ್ ಕೈತಪ್ಪಲು ಆರ್‌ಎಸ್‌ಎಸ್‌ ವರದಿಯೂ ಕಾರಣ ಎನ್ನಲಾಗಿತ್ತು. ಆದರೆ, ದೆಹಲಿಯ ಮತ್ತೊಂದು ಮೂಲಗಳ ಪ್ರಕಾರ ವಿಜಯೇಂದ್ರಗೆ ಟಿಕೆಟ್ ತಪ್ಪಲು ಕಾರಣ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ!

yeddyurappas son refused given ticket as modi targets rahul

ಮಂಗಳವಾರ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭಾಷಣದಲ್ಲಿಯೇ ವಿಜಯೇಂದ್ರಗೆ ಟಿಕೆಟ್ ಕೈಪ್ಪಲು ರಾಹುಲ್ ಗಾಂಧಿ ಹೇಗೆ ಕಾರಣ ಎಂಬುದರ ಸುಳಿವು ಸಿಕ್ಕಿದೆ.

ಮಂಗಳವಾರ ಮೂರು ಪ್ರಚಾರ ಸಮಾವೇಶಗಳನ್ನು ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಕುರಿತು ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿ ಅವರನ್ನು ನೇರವಾಗಿ ಟೀಕಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಹಾಗೂ ಅವರ ಮಗ ಯತೀಂದ್ರ ಅವರಿಗೂ ಟಿಕೆಟ್ ನೀಡಿರುವ ಬಗ್ಗೆ ಲೇವಡಿ ಮಾಡಿದ್ದರು. ಇವೆಲ್ಲದರ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ಟಿಕೆಟ್ ವಂಚನೆಯ ನಿರ್ಧಾರ ಇದೆ ಎನ್ನಲಾಗಿದೆ.

ವಿಜಯೇಂದ್ರ ಟಿಕೆಟ್ ತಪ್ಪಿಸಿದ್ದು ನಾನೇ: ಅಮಿತ್ ಶಾವಿಜಯೇಂದ್ರ ಟಿಕೆಟ್ ತಪ್ಪಿಸಿದ್ದು ನಾನೇ: ಅಮಿತ್ ಶಾ

ಪ್ರಮುಖ ಅಸ್ತ್ರವೇ ವಂಶಾಡಳಿತ
ಪ್ರಧಾನಿ ಮೋದಿ ಅವರ ಚುನಾವಣಾ ಭಾಷಣದಲ್ಲಿನ ಕಾಂಗ್ರೆಸ್ ವಿರುದ್ಧದ ವಾಗ್ದಾಳಿಗೆ ಅದರ ವಂಶಾಡಳಿತವೇ ಪ್ರಮುಖ ಅಸ್ತ್ರವಾಗಿದೆ. ಮೊದಲ ದಿನವೇ ಈ ಅಸ್ತ್ರ ಪ್ರಯೋಗಿಸಿರುವ ಮೋದಿ, ಮುಂದೆಯೂ ಅದನ್ನು ಪ್ರಯೋಗಿಸಲಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್ ವಿರುದ್ಧದ ಪ್ರಚಾರಕ್ಕೆ ಅದರಲ್ಲಿನ ವಂಶಾಡಳಿತದ ಅಂಶವನ್ನೇ ಮುಖ್ಯವನ್ನಾಗಿರಿಸಿಕೊಳ್ಳಲು ಮೋದಿ ಅವರು ಬಯಸಿದ್ದಾರೆ. ಈ ಆರೋಪ ಮತದಾರರಲ್ಲಿ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದು ಇದರ ಉದ್ದೇಶ. ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸುವ ಲೆಕ್ಕಾಚಾರದ ರಿಸ್ಕ್‌ಅನ್ನು ಮೋದಿ ಅವರ ಆಪ್ತ, ಅಮಿತ್ ಶಾ ಹೊತ್ತಿದ್ದರು ಎಂದು ಮೂಲಗಳು ವಿವರಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರನ್ನು ವರುಣಾ ಕ್ಷೇತ್ರದ ಅಭ್ಯರ್ಥಿ ಎಂದು ಕಾಂಗ್ರೆಸ್ ಆಯ್ಕೆ ಮಾಡಿದ್ದಾಗ, ಅವರ ಎದುರಾಳಿಯಾಗಿ ವಿಜಯೇಂದ್ರ ಪ್ರಚಾರ ಕಾರ್ಯ ಆರಂಭಿಸಿದ್ದರು. ಅಲ್ಲಿ ವಿಜಯೇಂದ್ರ ಅವರೇ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾಗಿತ್ತು.

ಕೈಕೊಟ್ಟ ಲೆಕ್ಕಾಚಾರ

ಆದರೆ, ಕೊನೆ ಕ್ಷಣದಲ್ಲಿ ವಿಜಯೇಂದ್ರ ವರುಣಾದಿಂದ ಮಾತ್ರವಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದೇ ಇಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದರು. ಇದು ತಮ್ಮದೇ ನಿರ್ಧಾರ. ಅಪ್ಪ-ಮಗ ಇಬ್ಬರೂ ಸ್ಪರ್ಧಿಸುವುದು ಬೇಡ ಎಂದು ಪಕ್ಷ ತೀರ್ಮಾನಿಸಿದೆ ಎಂದು ಹೇಳಿಕೆ ನೀಡಿದ್ದರು.

ಆದರೆ, ಇದರ ಬೆನ್ನಲ್ಲೇ ಗದ್ದಲ ಏರ್ಪಟ್ಟಿತ್ತು. ಪತ್ರಿಕಾಗೋಷ್ಠಿಯಲ್ಲಿಯೇ ವಿಜಯೇಂದ್ರ ಬೆಂಬಲಿಗರು ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು. ತಮ್ಮ ನಿರ್ಧಾರ ಕಾರ್ಯಕರ್ತರನ್ನು ಕೆರಳಿಸಲಿದೆ ಎಂಬುದರ ಬಗ್ಗೆ ಮೋದಿ ಅಥವಾ ಅಮಿತ್‌ ಶಾ ಅವರಿಗೆ ಅರಿವಿರಲಿಲ್ಲ.

ವಿಜಯೇಂದ್ರ ಅವರು ವರುಣಾದಲ್ಲಿ ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಆಪ್ತರ ಒಲವು ಗಳಿಸಿದ್ದಾರೆ. ಆದರೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವುದು 'ಕಾಂಗ್ರೆಸ್‌ನ ಅತಿ ದೊಡ್ಡ ವೈಫಲ್ಯ'ವಾದ ವಂಶಾಡಳಿತದ ವಿರುದ್ಧದ ತಮ್ಮ ಸಮರಕ್ಕೆ ಅಡ್ಡಿಯಾಗಲಿದೆ ಎಂಬ ಸಮೀಕ್ಷೆಯ ವರದಿಗಳು ಮೋದಿ ಅವರಿಗೆ ವಿವರಿಸಿದ್ದವು.

ರಾಹುಲ್ ಗಾಂಧಿ ಅವರಲ್ಲದೆ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಮತ್ತು ವರುಣಾದಲ್ಲಿ ಸ್ಪರ್ಧಿಸುತ್ತಿರುವ ಅವರ ಮಗನನ್ನು ಗುರಿಯಾಗಿಸಿಕೊಳ್ಳುವುದು ಮೋದಿ ಉದ್ದೇಶವಾಗಿತ್ತು. ಈಗ ವರುಣಾದಲ್ಲಿ ಅಸಮಾಧಾನ ಭುಗಿಲೆದ್ದಿದ್ದರೂ ಅದರಿಂದ ಪಕ್ಷಕ್ಕೆ ಉಂಟಾಗಿರುವ ಹಾನಿ ಅಲ್ಪಪ್ರಮಾಣದ್ದು ಎಂದು ಮೂಲಗಳು ಹೇಳಿವೆ.

English summary
Prime minister Narendra Modi wanted to target Congress dynasic ruling during his election campaign, so that he and Amith Shah decided to refuse ticket to yeddyurappa's son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X