• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಡುಗು ಮಿಂಚುಗಳ ನಡುವೆ ಮೋದಿ ಮಾತಿನ ಕಾಮನಬಿಲ್ಲು!

By ಸಿಂಧುಶ್ರೀ ಮಹೇಶ್, ಬೆಂಗಳೂರು
|

ಈಗೀಗ 'ಕರ್ನಾಟಕ ಕಿ ಬಾತ್' ಅಂದ್ರೇನೇ ಚುನಾವಣೆ ವಿಷಯ. ಕರ್ನಾಟಕದ ಜನತೆಗೆ ದಿನದಿನಕ್ಕೂ ಬ್ರೇಕಿಂಗ್ ನ್ಯೂಸ್ಗಳು, ಹೊಸ ಹೊಸ ತಿರುವುಗಳು. ಈ ಎಲೆಕ್ಷನ್ ನಲ್ಲಿ ಯಾವ ಪಕ್ಷದ ಸೆಲೆಕ್ಷನ್ ಆಗತ್ತೆ ಅನ್ನೋ ಕುತೂಹಲ ಎಲ್ಲರನ್ನು ಸುದ್ದಿ, ಚರ್ಚೆ, ಅಭಿಪ್ರಾಯ, ವಾದ-ವಿವಾದಗಳ ಆಹ್ವಾನಿಸುತ್ತಿದೆ.

ಮಳೆ ಬರುವುದು ಸಾಮಾನ್ಯ. ಗುಡುಗು ಮಿಂಚುಗಳೊಂದಿಗೆ ಬರುವುದೂ ಸಾಮಾನ್ಯ. ಕಾಮನಬಿಲ್ಲಿನೊಂದಿಗೆ ಬಂದರೆ ಅದರ ವೈಶಿಷ್ಟ್ಯ, ಸೊಬಗೇ ಬೇರೆ. ಹಾಗೆಯೇ ಬಿಜೆಪಿ ಚುನಾವಣಾ ಪ್ರಚಾರವನ್ನು ಯಾರೆಲ್ಲಾ ಹೇಗೆಲ್ಲಾ ಮಾಡಿದ್ದರೂ ರಂಗೇರಿಸಲು ಮೈದಾನಕ್ಕಿಳಿದ ಸಿಂಹರಾಜನದೇ ಈಗ ಎಲ್ಲೆಡೆ ಆರ್ಭಟ. ಮಳೆ ಜಿನುಗುತಿಗೆ ಕಾಮನಬಿಲ್ಲು ಹೆದೆಯೇರುತ್ತಿದೆ.

ಕುದಿಯುತ್ತಿರುವ ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ ಮೋದಿ

ಹೌದು ಸ್ವಾಮಿ ಅದು ನಮ್ಮ ಮೋದಿನೇ. ಅದು ಹೇಗೆ ಅಂತೀರಾ? ಮೋದಿ ತುಳಿದು ಬಂದ ಹಾದಿಯ ಗಮ್ಮತ್ತೇ ಅಂತಹುದು. ಇವರ ಕರ್ನಾಟಕ ಚುನಾವಣಾ ಪ್ರವಾಸ ಚಾಮರಾಜ ಜಿಲ್ಲೆ, ಸಂತೇಮರಹಳ್ಳಿ, ಉಡುಪಿ, ಚಿಕ್ಕೋಡಿ ಮುಂತಾದ ಕಡೆಗಳಲ್ಲಿ ಸಫಲತೆ ಕಂಡು ಮತದಾರರನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಗ್ಯಾರಂಟಿ.

ಮೋದಿ ಅವರ ಮಾತಿನ ಧಾಟಿಗೆ, ಪ್ರಶ್ನೆಗಳ ಹೊಡೆತಕ್ಕೆ, ಉತ್ತರಗಳ ಪಟಾಕಿಗೆ, ಕಾರ್ಯಾಚರಣೆಗಳ ಫಲಿತಾಂಶಕ್ಕೆ, ಜನಸೇವೆಗೆ, ದೇಶ ಅಭಿವೃದ್ಧಿಯ ಯಶಸ್ಸು ಕಂಡಿರುವುದಕ್ಕೆ.. ಮತದಾರರನ್ನು ಬಿಜೆಪಿಯತ್ತ ಆಕರ್ಷಿಸುವುದು ಸಹಜ. ಮೋದಿಯವರು ನಮ್ಮ ದೇಶದ ಭವಿಷ್ಯವನ್ನು ಬರೆಯುತ್ತಿರುವ ಶೈಲಿ ಬಿಜೆಪಿಯ ಹಣೆಬರಹವನ್ನು ಬರೆಯುವಲ್ಲಿ ಯಶಸ್ಸು ಕಾಣುವುದರಲ್ಲಿ ಎರಡು ಮಾತಿಲ್ಲ. ಬನ್ನಿ, ಇದರ ಕುರುಹುಗಳ ಬಗ್ಗೆ ಸೀಳು ನೋಟ ಹರಿಸೋಣ.

ಎಲ್ಲಾ ಕ್ಷೇತ್ರಗಳಡಿ ಮಾಡಿರುವ ಯೋಜನೆಗಳು

ಎಲ್ಲಾ ಕ್ಷೇತ್ರಗಳಡಿ ಮಾಡಿರುವ ಯೋಜನೆಗಳು

ಮಕ್ಕಳು, ಮಹಿಳೆಯರು, ವೃದ್ಧರು, ರೈತರಾದಿಯಾಗಿ ಜನ ಇವರ ಫಿದಾ ಆಗಿರೋದು ಸುಮ್ಮನೆಯೇನಲ್ಲ. ಇವರ ರಾಜತಾಂತ್ರಿಕತೆಯ ಸಾಕ್ಷಿಗಳಿವು. ಇವರ ಮಾತೃತ್ವ ವಂಧಜನಾ ಯೋಜನೆ, ಕಪ್ಪು ಹಣ ನಿಯಂತ್ರಣ, ಜಿ ಎಸ್ ಟಿ, ಮೇಕ್ ಇನ್ ಇಂಡಿಯಾ ಅಭಿಯಾನ, ಉಜ್ವಲ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಜನಧನ ಯೋಜನೆ, ಗ್ರಾಮ ಸಡಕ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ, ಉಡಾನ್ ಯೋಜನೆ, ವೀರ ಯೋಧರ ಸೇನೆಗೆ ತುಂಬಿದ ಆತ್ಮವಿಶ್ವಾಸ ಹೀಗೆ ಹೆಸರಿಸುತ್ತಾ ಹೋದರೆ ಒಂದಾ? ಎರಡಾ? ಹೀಗೆ ಜನಾನುಕೂಲಕ್ಕೆ ಯೋಜನೆಗಳನ್ನು ಜಾರಿಗೆ ತರುತ್ತಿರುವ ಪ್ರಧಾನಿಯ ಪಕ್ಷದ ಪರ ನಿಲ್ಲದವರು ಯಾರು?

'ನಮ್ಮ ಕರ್ನಾಟಕಕ್ಕೆ ನಮ್ಮ ವಚನ': ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ

ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ

ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ

ಈವರೆಗೆ ಭ್ರಷ್ಟಾಚಾರ ರಹಿತ ಸರಕಾರ ನಡೆಸಿದ್ದಾರೆ. ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಈ ಅಂಶ ಎಲ್ಲರ ಮನಸೂರೆಗೊಳ್ಳದೆ ಬಿಡಲ್ಲ. ಜನಗಳಿಗೆ ನಮ್ಮ ದುಡ್ಡನ್ನು ತಿನ್ನುವ ನಾಯಕರೊಂದಿಗೆ ಎಂದಿಗೂ ವಿರೋಧವೆ. ಈ ನಿಟ್ಟಿನಲ್ಲಿ ಜನತೆಗೆ ಪ್ರಾಮಾಣಿಕ ನಾಯಕರಾದ, ಸಕಾರಾತ್ಮಕ ಯೋಜನೆಗಳ ಪೂರಕವಾಗಿರುವ ಮೋದಿಯ ಪ್ರಚಾರವೆಂದರೆ ಬಹಳ ಹಿತ, ಹಾಗೆಯೇ ಮತ.

ಮೋದಿಯವರ ಹೆಜ್ಜೆಯಲ್ಲೇ ಸಾಗುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರನ್ನು ಕೂಡ ಜನ ಈ ಕಾರಣಕ್ಕೆ ಪರ ವಹಿಸುತ್ತಾರೆ. ಅದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಅಪ್ರಬುದ್ಧತೆಯ ಬಗ್ಗೆ ಜನಕ್ಕೆ ಬೇಸತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಎರಡು ಪಕ್ಷಗಳ ವ್ಯತ್ಯಾಸವನ್ನು ಹಲವಾರು ಸಲ ಸಾರ್ವಜನಿಕರಿಗೆ ಎತ್ತಿ ತೋರಿಸಿ, ಸ್ಪಷ್ಟತೆಯ ಚಿತ್ರ ನೀಡಿದ್ದಇರುತ್ತದೆಯೇ?

ರಾಜ್ಯದ ನಾಯಕರಿಗೆ ಪರಿಣಾಮಕಾರಿ ಸಲಹೆ

ರಾಜ್ಯದ ನಾಯಕರಿಗೆ ಪರಿಣಾಮಕಾರಿ ಸಲಹೆ

'ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಎಂಬ ಪರಿಪಕ್ವತೆಯ ತತ್ವವನ್ನು ಸಾರಿದ ಮೋದಿಯವರು ತಮ್ಮ ಪ್ರೌಢ ಹಾಗೂ ಬುದ್ಧಿವಂತಿಕೆಯಿಂದ ನಮ್ಮ ರಾಜ್ಯದ ಬಿಜೆಪಿ ನಾಯಕರಿಗೆ ಗೆಲ್ಲಲು ಬೇಕಾದ ಕಿವಿಮಾತುಗಳು, ಅನುಸರಿಸಬೇಕಾದ ಕಾರ್ಯತಂತ್ರಗಳ ಪಕ್ಷ ಸಂಘಟನೆ ಮುಂತಾದ ವಿಚಾರಗಳ ಬಗ್ಗೆ ಪರಿಣಾಮಕಾರಿ ಸಲಹೆಗಳನ್ನು ನೀಡಿದ್ದಾರೆ. ಮೇ 1ರಿಂದ 8ರ ಒಳಗೆ 15 ಸಭೆಗಳಲ್ಲಿ ಭಾಷಣ ಮಾಡಲು ಸಜ್ಜಾಗಿರುವ ಮೋದಿಯವರು ಬಿಜೆಪಿಗೆ ಗೆಲುವಿನ ಹರ್ಷ ಈ ವರ್ಷ ತರದಿರಲು ಹೇಗೆ ಸಾಧ್ಯ?

ಜನ್ ಕೀ ಬಾತ್ ಕರ್ನಾಟಕ ಸಮೀಕ್ಷೆ: ಸರಳ ಬಹುಮತದತ್ತ ಬಿಜೆಪಿ ದಾಪುಗಾಲು

ಮೋದಿ ಮಾತಿನ ಮೋಡಿಗೆ ತಲೆದೂಗಿದ ಉಡುಪಿ

ಮೋದಿ ಮಾತಿನ ಮೋಡಿಗೆ ತಲೆದೂಗಿದ ಉಡುಪಿ

ಉಡುಪಿಯ ಪ್ರಚಾರದಲ್ಲಿ ಇವರ ಮಾತುಗಳಿಗೆ ಜನ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ನಡೆದಿರುವ ಅಮಾಯಕರ ಹತ್ಯೆ, ಲೋಕಾಯುಕ್ತರ ಹತ್ಯೆ ಹೇಗಾಯ್ತು? ಇಂತಹ ಹಿಂಸಾಭರಿತ ಸರ್ಕಾರ ಯಾಕೆ? ಎಂದು ಕೇಳಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆದಾಗ ವಿಧಾನಸೌಧದಿಂದ ಮಣ್ಣಿನ ಮಗ ದೇವೆಗೌಡರ ಫೋಟೋ ತೆಗೆದು ಅಗೌರವ ಸೂಚಿಸಿ ತಮ್ಮ ಸಂಸ್ಕಾರ ಮರೆತಿದ್ದರು, ಆದರೆ ಮೋದಿ ಅವರು ಇವರನ್ನು ಮೆಚ್ಚಿ ಮಾತನಾಡಿ ಜನರಿಗೆ ಹತ್ತಿರವಾಗಿದ್ದಾರೆ. ಶಿಕ್ಷಣದಲ್ಲಿ ಮೇಲುಗೈ ಸಾಧಿಸಿರುವ ಉಡುಪಿಯ ಮಕ್ಕಳಿಗೆ ಮುಂದುವರೆಯಲು ಯಾವ ಕ್ರಮವನ್ನೂ ಕೈಗೊಳ್ಳದ ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಕ್ತ ಸರ್ಕಾರವೇ ಗಾಂಧೀಜಿಯ ಕನಸಾಗಿತ್ತು, ಇದಕ್ಕೆ ಜನ ಬೆಂಬಲ ದೊರೆತರೆ ಗಾಂಧೀಜಿ ಆಶೀರ್ವಾದಕ್ಕೆ ನಾವೆಲ್ಲರೂ ಪಾತ್ರರಾಗಬಹುದು ಎಂದರು.

ಮೋದಿಯವರು ಜೆಡಿಎಸ್ಸನ್ನು ವಾಚಾಮಗೋಚರವಾಗಿ ತೆಗಳಿದ್ದೇಕೆ?

ಹುಲಿಗೆ ಇಲಿಯ ಮೇಲೆ ತಾತ್ಸಾರ ಸಹಜ

ಹುಲಿಗೆ ಇಲಿಯ ಮೇಲೆ ತಾತ್ಸಾರ ಸಹಜ

ಇವರ ಅರ್ಥಭರಿತ ಮಾತುಗಳಿಗೆ ಜನ ತಲೆದೂಗಿದ್ದಾರೆ. ನಮೋ ನಡೆಸಿರುವ ರ್ಯಾಲಿಗಳು ಬಿಜೆಪಿಯ ಜನಪ್ರಿಯತೆ ಹೆಚ್ಚಿಸಿದೆ. ಇಂತಹ ಹೆಗ್ಗಳಿಕೆಗೆ ಪಾತ್ರರಾದ ಮೋದಿಯವರಿಗೆ ತಮ್ಮ ಸಾಮರ್ಥ್ಯದ ಮೇಲೆ ಹೆಮ್ಮೆ ಇಲ್ಲದೆ ಇರುತ್ತದೆಯೇ? ಹುಲಿಗೆ ಇಲಿಯ ಮೇಲೆ ತಾತ್ಸಾರ ಸಹಜ. ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಮೋದಿ ಅವರು ರಾಹುಲ್ ಗಾಂಧಿಗೆ ಸವಾಲೊಡ್ಡಿದ್ದಾರೆ "ಸಿದ್ದರಾಮಯ್ಯ ಸರ್ಕಾರದ ಸಾಧನೆ ಬಗ್ಗೆ 15 ನಿಮಿಷ ಯಾವುದೇ ಚೀಟಿ ಇಟ್ಟುಕೊಳ್ಳದೆ ತನಗಿಷ್ಟ ಬಂದ ಭಾಷೆಯಲ್ಲಿ ಮಾತನಾಡಲಿ ನೋಡೋಣ" ಎಂದು ರಾಹುಲ್ ಗಾಂಧಿ ಈ ಸವಾಲನ್ನು ಸ್ವೀಕರಿಸುತ್ತಾರೆಯೆ? ಸ್ವೀಕರಿಸಲಿ ಎಂದು ಆಶಿಸೋಣ.

ತಾಕತ್ ಇದ್ದರೆ 15 ನಿಮಿಷ ಚೀಟಿಯಿಲ್ಲದೆ ಮಾತಾಡಲಿ : ರಾಹುಲ್ಗೆ ಮೋದಿ ಸವಾಲು

ಪೈಸೆಗೆ ಪೈಸೆ ಲೆಕ್ಕ ಕೊಡುವ ಚಾಲೆಂಜ್

ಪೈಸೆಗೆ ಪೈಸೆ ಲೆಕ್ಕ ಕೊಡುವ ಚಾಲೆಂಜ್

ಚಿಕ್ಕೋಡಿಯಲ್ಲಿ ಮಂಗಳವಾರ ಮೋದಿಯವರು ಬಿಜೆಪಿ ಸರ್ಕಾರ ಗೆಲ್ಲಿಸಿದರೆ ಪೈಸೆ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಚಾಲೆಂಜ್ ಮಾಡಿದ್ದಾರೆ. ಈ ರಾಜಾರೋಷ ಪ್ರಾಮಾಣಿಕರಿಗಲ್ಲದೆ, ನ್ಯಾಯವಂತರಿಗಲ್ಲದ ಇನ್ಯಾರಿಗೆ ಬರುತ್ತೆ ಹೇಳಿ? ಚುನಾವಣಾ ಅಧಿಕಾರಿಗಳ ದಾಳಿಯಲ್ಲಿ ಕುಕ್ಕರ್ ಗಳು ಸಿಕ್ಕಿವೆ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಭ್ರಷ್ಟಾಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್ ತುಂಬಾ ಇಂತಹ ಜನಗಳೇ. ಇಂತಹ ಪಕ್ಷಕ್ಕೆ ನಿಮ್ಮ ಅಮೂಲ್ಯ ಮತ ಹಾಕಬೇಡಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿರುವ ಕಪ್ಪು ಹಣದ ವಿರುದ್ಧ ತಿರುಗಿ ಬಿದ್ದಿರುವ ನಮ್ಮಂಥವರಿಗೆ ಮತ ಚಲಾಯಿಸಿ ಪ್ರಾಮಾಣಿಕತೆಗೆ ನ್ಯಾಯ ಒದಗಿಸಿ ಎಂದಾಡಿರುವ ಮಾತುಗಳು ಜನರಲ್ಲಿ ಬಿಜೆಪಿ ಕಡೆ ಒಲವು ತೋರಿಸಲು ಎಡೆಮಾಡಿಕೊಟ್ಟಿದೆ.

ದೇಶದ ರೈತರ ಮನ ಗೆದ್ದಿದೆ ಮೋದಿ ಸರಕಾರ

ದೇಶದ ರೈತರ ಮನ ಗೆದ್ದಿದೆ ಮೋದಿ ಸರಕಾರ

ನಮ್ಮ ದೇಶದ ಆಸ್ತಿ ಎಂದರೆ ರೈತ. ಇವರಿಗಾಗಿ ಮೋದಿ ಕಲ್ಪಿಸಿರುವ ಫಸಲ್ ಭೀಮಾ ಯೋಜನೆ ರೈತರ ಮನ ಗೆದ್ದಿದೆ. ರೈತ ಖುಷಿಯಾಗಿದ್ದರೆ ಜನತೆ ಖುಷ್. ಅವರೇ ನಮ್ಮ ಬೆನ್ನೆಲುಬು ಅಲ್ಲವೇ? ಮೋದಿ ಅವರ ಈ ಯೋಜನೆ ಕರ್ನಾಟಕದ ಜನತೆಗೆ ಮುಟ್ಟುತ್ತಿಲ್ಲವೇನೋ? ಹೌದು, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಇದು ರೈತರಿಗೆ ಮುಟ್ಟುತ್ತಿಲ್ಲ. ಈ ಮಾತನ್ನು ಯಾರು ಸಹಿಸಲ್ಲ. ರೈತ, ಸೈನಿಕ, ಗರ್ಭಿಣಿ, ಹೆಣ್ಣು ಮಕ್ಕಳಿಗಾಗಿ ಶ್ರಮಿಸುವ ಮೋದಿ ಜನಕ್ಕೆ ಪ್ರಿಯವಾಗದೆ ಇರುತ್ತಾರೆಯೇ? ಬಿಜೆಪಿಗೆ ಬೆಂಬಲಿಸದೇ ಇರುತ್ತಾರೆಯೇ?

ಸೈನಿಕರ ವಿರುದ್ಧ ಮಾತಾಡಿದರೆ ಜನ ಸಿಡಿದೇಳದಿರುವರೆ

ಸೈನಿಕರ ವಿರುದ್ಧ ಮಾತಾಡಿದರೆ ಜನ ಸಿಡಿದೇಳದಿರುವರೆ

ಕಲ್ಬುರ್ಗಿಯಲ್ಲಿ ನರೇಂದ್ರ ಮೋದಿ ಅವರು ಹೇಳಿದಂತೆ ನಮ್ಮನ್ನೆಲ್ಲಾ ರಕ್ಷಿಸುತ್ತಿರುವ ಸೈನಿಕರನ್ನು ಗೌರವಿಸದ ಕಾಂಗ್ರೆಸ್ ನಮ್ಮ ವೀರಯೋಧರಿಗೆ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸಾಕ್ಷಿ ಕೇಳಿ ಅವಮಾನ ಮಾಡಿದೆ. ಸೈನಿಕರ ವಿರೋಧ ಮಾತನಾಡಿದರೆ ನಮ್ಮ ಜನ ಸಿಡಿದೇಳುವುದು ಖಂಡಿತ. ಕಾಂಗ್ರೆಸ್ ನ ಈ ಕೃತ್ಯವನ್ನು ಕೂಡ ಜನರು ಅರಗಿಸಿಕೊಳ್ಳಲಾರರು. ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಮಾಡಿರುವ ಅನ್ಯಾಯಗಳನ್ನು ಎತ್ತಿ ಆಡಿ ಮತಗಿಟ್ಟಿಸಿಕೊಳ್ಳುವ ವಿವೇಕ, ಸಮಯಪ್ರಜ್ಞೆ ಮೋದಿಗೆ ಹೇಳಿಕೊಡಬೇಕಾ?

ಪ್ರಧಾನಿ ಮೋದಿ-ಕಾಂಗ್ರೆಸ್ ಇಬ್ಬರಿಂದಲೂ ತಪ್ಪು ಮಾಹಿತಿ

ಮೋದಿ ಮಾತಿಗೆ ರಾಜ್ಯದ ಜನತೆ ತಲೆಬಾಗುವುದೆ?

ಮೋದಿ ಮಾತಿಗೆ ರಾಜ್ಯದ ಜನತೆ ತಲೆಬಾಗುವುದೆ?

ಕಾಂಗ್ರೆಸ್ ಸರ್ಕಾರ ಮೂಲಭೂತ ಅಗತ್ಯಗಳಾದ ನೀರು, ಸೂರು, ವಿದ್ಯುತ್ ಕೂಡ ಪೂರೈಸಿಲ್ಲ. ಕಾನೂನು ಬಾಹಿರ ಗಣಿಗಾರಿಕೆಗೆ ಮುಂದಾಗುತ್ತಿದೆ ಎಂದಿದ್ದಾರೆ ನರೇಂದ್ರ ಮೋದಿ. ಸಾರ್ವಜನಿಕ ಸ್ಥಳಗಳಲ್ಲಿ ಮೈಮರೆತು ನಿದ್ದೆ ಮಾಡುತ್ತಿರುವ ಸಿದ್ದರಾಮಯ್ಯನಂತಹವರಿಗೆ ಮತ ಚಲಾಯಿಸದೇ ಎಚ್ಚೆತ್ತುಕೊಂಡು ಪ್ರಗತಿಪರ ದೇಶದತ್ತ ಕಾರ್ಯ ಪರರಾಗಿರುವ ಬಿಜೆಪಿಯನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ ನರೇಂದ್ರ ಮೋದಿಯವರು. ಈ ಮಾತಿಗೆ ರಾಜ್ಯದ ಜನತೆ ತಲೆಬಾಗುವುದೆ?

?rel=0&wmode=transparent" frameborder="0">

ಸರಿಸಾಟಿಯಿಲ್ಲದ ಮನ್ ಕಿ ಬಾತ್

ಇಂತಹ ಪ್ರಬುದ್ಧ ನಾಯಕ ನಮ್ಮ ದೇಶದ ಪ್ರತಿಷ್ಠೆಯನ್ನು ವಿದೇಶಗಳಲ್ಲಿ ಮಿನುಗಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಾರೆ. ಅಪಾರ ಯೋಜನೆಗಳನ್ನು ಜಾರಿಗೆ ತಂದಿರುವ ಇಂತಹ ಅಪ್ರತಿಮರಾದ, ಆಳ್ವಿಕೆಯ ಮುಂಚೂಣಿಯಲ್ಲಿರುವ, ಸರಿಸಾಟಿಯಿಲ್ಲದ ನಾಯಕನ 'ಮನ್ ಕಿ ಬಾತ್' ಜನಕ್ಕೆ ಕೇಳಿಸದೇ ಇರಲು ಸಾಧ್ಯವೇ? ಇವರ ಭಾಷಣ ಕೇಳಲು ಕಿಕ್ಕಿರಿದು ಬರುವ ಸಾವಿರಾರು ಜನ ಇವರ ಮಾತಿಗೆ ಬೆಲೆಕೊಟ್ಟು ಬಿಜೆಪಿಗೆ ಮತ ಚಲಾಯಿಸಿ ರಾಜ್ಯದ ಭವಿಷ್ಯ ಪ್ರಜ್ವಲಿಸಲು ಮುಂದಾಗದೇ ಇರುತ್ತಾರೆಯೆ? ಇಂತಹವರು 22 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದಲ್ಲಿ 'ಅಬ್ ಕಿ ಬಾರ್ ಯಡಿಯೂರಪ್ಪ ಸರ್ಕಾರ' ನಿಜವಾಗದೇ ಇರುತ್ತದೆಯೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Will the fate of BJP change after campaigning from Modi in Karnataka? Sindhu Shree Mahesh has analysed the achievements of clean and corruption free Narendra Modi government. Narendra Modi's speeches are like rainbow amid rain and thunder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more