ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಸಂದರ್ಶನ

|
Google Oneindia Kannada News

Recommended Video

ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಸಂದರ್ಶನ | Oneindia Kannada

ಶಿವಮೊಗ್ಗ, ಮೇ 03 : 'ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿರುವ ಒಬ್ಬ ಪಕ್ಷೇತರ ಅಭ್ಯರ್ಥಿಯೂ ಸಹ ನನ್ನ ಎದುರಾಳಿ. ಆದರೆ, ನಮ್ಮ ಪಕ್ಷಕ್ಕೆ ಜನರು ಬೆಂಬಲ ನೀಡುತ್ತಿದ್ದಾರೆ' ಎಂದು ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಹೇಳಿದರು.

ಶಿವಮೊಗ್ಗ ನಗರ ಕ್ಷೇತ್ರದ ಹಾಲಿ ಶಾಸಕರು ಕೆ.ಬಿ.ಪ್ರಸನ್ನ ಕುಮಾರ್. 2018ರ ವಿಧಾನಸಭೆ ಚುನಾವಣೆಗೆ ಅವರು ಅಭ್ಯರ್ಥಿ. ಕ್ಷೇತ್ರದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ನಡುವೆಯೇ ಒನ್ ಇಂಡಿಯಾ ಕನ್ನಡಕ್ಕೆ ಅವರು ಸಂದರ್ಶನ ನೀಡಿದರು.

ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ

ಶಿವಮೊಗ್ಗ ನಗರ ಕ್ಷೇತ್ರದ ಚುನಾವಣೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಕೆ.ಬಿ.ಪ್ರಸನ್ನ ಕುಮಾರ್ ಅವರ ಎದರಾಳಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಜೆಡಿಎಸ್‌ನಿಂದ ನಿರಂಜನ್ ಕುಮಾರ್ ಅವರು ಕಣದಲ್ಲಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ ನೋಡಿ...

Shimoga Congress candidate KB Prasanna Kumar interview

ಪ್ರಚಾರದಲ್ಲಿ ಬ್ಯುಸಿಯಾಗಿದ್ದೀರಿ, ಜನರ ಪ್ರತಿಕ್ರಿಯೆ ಹೇಗಿದೆ?

ಕ್ಷೇತ್ರದ ಮನೆ-ಮನೆಗೆ ತೆರಳಿ ಪ್ರಚಾರವನ್ನು ನಡೆಸುತ್ತಿದ್ದೇವೆ. ಅಭೂತಪೂರ್ವವಾದ ಬೆಂಬಲ ಸಿಗುತ್ತಿದೆ. ಈಗ ತಾಯಂದಿರೂ ಹೇಳಿದರು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಮತ್ತೊಮ್ಮೆ ನೀವೇ ಆಯ್ಕೆಯಾಗುತ್ತೀರಿ ಎಂದು.

ಶಿವಮೊಗ್ಗ ನಗರದ ಸರ್ವಾಂಗೀಣ ಅಭಿವೃದ್ಧಿಯನ್ನು ಜನರು ನೋಡಿದ್ದಾರೆ. ರಾಜ್ಯ ಸರ್ಕಾರದಿಂದ ಕ್ಷೇತ್ರಕ್ಕೆ ಬಂದ ಅನುದಾವನ್ನು ನೋಡಿದ್ದಾರೆ. ಕ್ಷೇತ್ರದ ತುಂಬಾ ಕಾಂಗ್ರೆಸ್ ಪರವಾದ ಅಲೆ ಇದೆ.

ಒನ್ ಇಂಡಿಯಾ ಸಮೀಕ್ಷೆ : ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಗೆಲುವುಒನ್ ಇಂಡಿಯಾ ಸಮೀಕ್ಷೆ : ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಗೆಲುವು

ಕ್ಷೇತ್ರದ ಅಭಿವೃದ್ಧಿಗೆ ಸವಾಲಾಗಿರುವ ವಿಷಯ ಯಾವುದು?

ಆ ತರಹದ ಯಾವುದೇ ಸಮಸ್ಯೆ ಈಗ ಇಲ್ಲ. ಕ್ಷೇತ್ರ ಶಾಂತಿಯುವತವಾಗಿದೆ. ಕಳೆದ 20 ವರ್ಷಗಳಿಂದ ಹಿಂದು ಮುಸ್ಲಿಂ ಗಲಾಟೆ ಮಾಡಿಸಿ ನಗರವನ್ನು ಅತಿಸೂಕ್ಷ್ಮ ಪ್ರದೇಶ ಎಂದು ಬಿಜೆಪಿಯವರು ಮಾಡಿದ್ದರು. ಈಗ ಅವುಗಳನ್ನು ಸರಿ ಮಾಡಿದ್ದೇವೆ.

ನಗರದ ಸರ್ವಾಂಗೀಣ ಅಭಿವೃದ್ದಿಯಾಗಬೇಕು. ಯುವಕ ಮಿತ್ರರಿಗೆ ಇಲ್ಲಿಯೇ ಉದ್ಯೋಗ ಸಿಗುವಂತಾಗಬೇಕು. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತೇನೆ.

ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?

ಕ್ಷೇತ್ರದಲ್ಲಿ ನಿಮ್ಮ ಎದುರಾಳಿ ಯಾರು?

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿರುವ ಒಬ್ಬ ಪಕ್ಷೇತರ ಅಭ್ಯರ್ಥಿ ಸಹ ನನ್ನ ಎದುರಾಳಿ. ಆದರೆ, ಕ್ಷೇತ್ರದಲ್ಲಿ ಜನರಿಂದ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ.

ಕಾಂಗ್ರೆಸ್ ಪಕ್ಷವನ್ನು ಜನರು ಏಕೆ ಬೆಂಬಲಿಸಬೇಕು?

ಐದು ವರ್ಷಗಳ ನಮ್ಮ ನಡತೆ, ಸರ್ಕಾರದಿಂದ ಬಂದ ಅನುದಾನಗಳು, ಸರ್ಕಾರದಿಂದ ನಡೆದ ಜನಪರ ಕೆಲಸಗಳು ನಮಗೆ ಶ್ರೀರಕ್ಷೆ. ಇದನ್ನು ನೋಡಿ ಜನರು ನಮಗೆ ಬೆಂಬಲ ನೀಡುತ್ತಿದ್ದಾರೆ.

English summary
K.B.Prasanna Kumar interview : K.B.Prasanna Kumar Shimoga assembly constituency sitting MLA and Congress candidate for Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X