ಕನ್ನಡಾಭಿಮಾನದ ಪ್ರಜ್ಞೆಯಿದೆ, ಸಂಕುಚಿತತೆಯಲ್ಲ: ಜಿವಿಎಲ್ ನರಸಿಂಹ ರಾವ್

Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ ದಟ್ಟವಾದ ಕನ್ನಡಾಭಿಮಾನದ ಪ್ರಜ್ಞೆ ಎಲ್ಲೆಡೆ ಇದೆ. ಅದರ ಜತೆಯಲ್ಲೇ ರಾಷ್ಟ್ರೀಯವಾದದ ಬೇಗೆಯನ್ನೂ ರಾಜ್ಯದಲ್ಲಿ ಕಾಣಬಹುದು. ಅಭಿಮಾನ ಇದೆ ಆದರೆ, ಸಂಕುಚಿತತೆಯಲ್ಲ.

ಇದು ಬಿಜೆಪಿ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹ ರಾವ್ ಅವರ ಅಭಿಪ್ರಾಯ.

ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟ, ಅಂತಿಮಗೊಳ್ಳದ ಅಭ್ಯರ್ಥಿಗಳ ಪಟ್ಟಿ

ಒನ್‌ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ರಾವ್, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪ-ಮೋದಿ ಜೋಡಿ ಬಿಜೆಪಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

GVL Narasimha Rao

ಕನ್ನಡ ಅಭಿಮಾನದ ವಿಚಾರದಲ್ಲಿ ಕಾಂಗ್ರೆಸ್ ಪ್ರಭಾವ ಬೀರಿದೆ. ನಿಮ್ಮ ಪ್ರತಿಕ್ರಿಯೆ ಏನು?
ಕರ್ನಾಟಕದಲ್ಲಿ ಕನ್ನಡಾಭಿಮಾನದ ಪ್ರಜ್ಞೆ ಸಾಕಷ್ಟು ಬಲವಾಗಿ ಅಸ್ತಿತ್ವದಲ್ಲಿದೆ. ಆದರೆ, ಅದರ ಜತೆಗೇ ರಾಜ್ಯದಲ್ಲಿ ರಾಷ್ಟ್ರೀಯವಾದದ ನೆರಳೂ ಇದೆ. ಅಭಿಮಾನವಿದೆ, ಆದರೆ ಈ ವಿಚಾರದಲ್ಲಿ ಸಂಕುಚಿತತೆ ಇಲ್ಲ.

ಅದನ್ನು ಜನರು ಹೇಗೆ ನೋಡುತ್ತಿದ್ದಾರೆ ಎಂದೆನಿಸುತ್ತಿದೆ?
'ನನ್ನ ಪ್ರಕಾರ ಜನರು ಅದೊಂದು ರಾಜಕೀಯ ಗಿಮಿಕ್ ಎಂಬುದಾಗಿ ನೋಡುತ್ತಿದ್ದಾರೆ. ವಿವಾದಗಳ ವಿಚಾರಗಳಿಗೆ ಜನರು ಗಂಭೀರವಾಗಿ ಸ್ಪಂದಿಸುತ್ತಾರೆ. ಆದರೆ, ಇವುಗಳು ಯಾವುದೇ ರಾಜಕೀಯ ಪಕ್ಷದೊಂದಿಗೂ ತಳಕು ಹಾಕಿಕೊಳ್ಳಬಾರದು.

ಆದರೆ ಕಾಂಗ್ರೆಸ್ ತನ್ನನ್ನು ಕನ್ನಡಾಭಿಮಾನದ ಪ್ರತಿನಿಧಿಯಂತೆ ಬಿಂಬಿಸಿಕೊಳ್ಳುತ್ತಿದೆಯಲ್ಲ?
ಕಾಂಗ್ರೆಸ್ ಈ ವಿಚಾರದಲ್ಲಿ ನಾಟಕ ಮಾಡುತ್ತಿದೆ. ಅದು ಕನ್ನಡವನ್ನು ಪ್ರತಿನಿಧಿಸುವ ಯಾವ ಕೆಲಸವನ್ನೂ ಮಾಡಿಲ್ಲ. ಇದು ಕಾಂಗ್ರೆಸ್‌ ಮಾಡುತ್ತಿರುವ ರಾಜಕೀಯ ಗಿಮಿಕ್ ಅಷ್ಟೇ. ಕಾಂಗ್ರೆಸ್‌ಗೆ ಅಂತಹ ಯಾವುದೇ ಅಭಿಮಾನವಿಲ್ಲ.

ಇದು ಕನ್ನಡಾಭಿಮಾನ ಮತ್ತು ರಾಷ್ಟ್ರೀಯತೆ ನಡುವಣ ತಿಕ್ಕಾಟವೇ?
ನಾನು ಮೊದಲೇ ಹೇಳಿದಂತೆ ಕನ್ನಡಾಭಿಮಾನದ ಪ್ರಜ್ಞೆ ಸಾಕಷ್ಟು ಬಲವಾಗಿದೆ. 1990ರ ಕಾಲಘಟ್ಟದಲ್ಲಿ ಹಿಂದಿ ಭಾಷಿಕರ ನಾಡಿನಲ್ಲಿ ಬಿಜೆಪಿ ಬೆಳೆದಿದ್ದನ್ನು ನೀವು ನೆನಪಿಸಿಕೊಳ್ಳಬಹುದು. ಮುಂದೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿಕೊಂಡಿತು. ಬಿಜೆಪಿಯನ್ನು ರಾಷ್ಟೀಯವಾದಿ ಪಕ್ಷ ಎಂದೇ ಕರ್ನಾಟಕ ಯಾವಾಗಲೂ ಪರಿಗಣಿಸುತ್ತಾ ಬಂದಿದೆ. ಕರ್ನಾಟಕ ದಕ್ಷಿಣ ಭಾರತದ ಇತರೆ ರಾಜ್ಯಗಳಂತಲ್ಲ. ವಾಸ್ತವವಾಗಿ ಇಲ್ಲಿನ ಜನರು ಬಿಜೆಪಿಯ ರಾಷ್ಟ್ರೀಯ ಚಳವಳಿಗೆ ಸ್ಪಂದಿಸಿದ್ದಾರೆ.

'ಎಲ್ಲಾದರೂ ಸೋಲುವ ಸಿದ್ದರಾಮಯ್ಯ ಎರಡೇನು 3 ಕ್ಷೇತ್ರದಲ್ಲಿ ನಿಲ್ಲಲಿ'

ಕರ್ನಾಟಕದಲ್ಲಿ ನಿಮ್ಮ ನಿರೀಕ್ಷೆಗಳೇನು?
2008ರಲ್ಲಿ ಯಡಿಯೂರಪ್ಪ ಅವರ ಪ್ರಭಾವಳಿಯಿಂದ ನಾವು 110 ಸೀಟುಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆವು. ಈ ಬಾರಿ ನಮಗೆ ಯಡಿಯೂರಪ್ಪ-ಮೋದಿ ಪ್ರಭಾವಳಿಯ ಬಲವಿದೆ. ಇದು ಬಿಜೆಪಿಯ ಅವಕಾಶಗಳನ್ನು ದುಪ್ಪಟ್ಟು ಮಾಡಿದೆ. ಪ್ರಚಾರ ಆರಂಭವಾದ ಗಳಿಗೆಯನ್ನು ನೋಡಿದರೆ ಇದು ನಿಮಗೇ ಅರಿವಾಗುತ್ತದೆ. ನಾವು ಒಟ್ಟು ಸೀಟುಗಳಲ್ಲಿ ಅರ್ಧದಷ್ಟು ಭಾಗವನ್ನು ಸಲೀಸಾಗಿ ಕ್ರಮಿಸಲಿದ್ದೇವೆ.

ಅತಂತ್ರ ವಿಧಾನಸಭೆಯಾಗಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಸಹಮತವಿದೆಯೇ?
ಅತಂತ್ರ ಫಲಿತಾಂಶ ಬರಲಿದೆ ಎಂದು ನಾನು ಹೇಳುವುದಿಲ್ಲ. ಈ ಮೂರು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಜನರು ಪ್ರಮುಖ ಪಕ್ಷಗಳಿಗೆ ಸ್ಪಷ್ಟ ಬಹುಮತ ನೀಡುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಉದಾಹರಣೆಗಳನ್ನು ಇಲ್ಲಿ ನೀಡಲು ಬಯಸುತ್ತೇನೆ. ಬೃಹತ್ ಬಹುಮತವೇ ಸಾಮಾನ್ಯವಾಗಿರುವಾಗ ಅತಂತ್ರ ವಿಧಾನಸಭೆ ತೀರಾ ವಿರಳ ಪ್ರಕರಣ.

ನಾವು ಕೇಳಿದಂತೆ ಸಿದ್ದರಾಮಯ್ಯ ಸೀಟು ಉಳಿಸಿಕೊಳ್ಳಲು ಬಯಸುತ್ತಿದ್ದಾರೆ. ನಿಮ್ಮ ಅಭಿಪ್ರಾಯ?
ಹಾಲಿ ಮುಖ್ಯಮಂತ್ರಿ ದಿಗಿಲುಗೊಂಡಿದ್ದಾರೆ. ಇದೇ ಎಲ್ಲವನ್ನೂ ಹೇಳುತ್ತದೆ. ಸಾಮಾನ್ಯವಾಗಿ ನಾಯಕನೊಬ್ಬ ಆತಂಕಕ್ಕೆ ಒಳಗಾಗಿದ್ದರೆ ಸಮರದಲ್ಲಿ ಸೋತಿದ್ದಾನೆ ಎಂದು ಪರಿಗಣಿಸಬಹುದು. ಇಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಕುರ್ಚಿಯ ಬಗ್ಗೆ ಭಯಗೊಂಡಿದ್ದಾರೆ ಮತ್ತು ಅದು ಸುರಕ್ಷಿತವಲ್ಲ ಎಂಬ ಭಾವನೆ ಅವರಲ್ಲಿ ಇದೆ ಎಂದರೆ, ಕಾಂಗ್ರೆಸ್‌ನ ಆಟ ಮುಗಿಯುತ್ತಿದೆ ಎಂದರ್ಥ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is a strong sense of Kannada pride that very much exists in Karnataka, but there is also a nationalistic fervor in the state. There is pride but not parochialism says Bjps Rajya Sabha MP GVL Narasimha Rao.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ