ಹಣಕಾಸು ಖಾತೆ ಜೆಡಿಎಸ್ ತೆಕ್ಕೆಗೆ: ಕಾಂಗ್ರೆಸ್ ನಿಂದ ಒಪ್ಪಿಗೆ
ಬೆಂಗಳೂರು, ಮೇ 29: ಹಣಕಾಸು ಖಾತೆ ಯಾರಿಗೆ? ಸದ್ಯಕ್ಕೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಹುಚರ್ಚಿತ ಪ್ರಶ್ನೆ ಎಂದರೆ ಇದೇ.
ಹಣಕಾಸು ಇಲಾಖೆಯನ್ನು ಜೆಡಿಎಸ್ ಇಟ್ಟುಕೊಳ್ಳುತ್ತದೆಯಾ ಅಥವಾ ಕಾಂಗ್ರೆಸ್ ಈ ಇಲಾಖೆ ತನಗೇ ಬೇಕು ಎಂದು ಪಟ್ಟು ಹಿಡಿಯುತ್ತದಾ?
ಕೆಲವು ಮೂಲಗಳ ಪ್ರಕಾರ ಹಣಕಾಸು ಇಲಾಖೆಯನ್ನು ಜೆಡಿಎಸ್ ಪಕ್ಷದ ಶಾಸಕರಿಗೇ ಅಥವಾ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ಇಟ್ಟುಕೊಳ್ಳುವುದಕ್ಕೆ ಕಾಂಗ್ರೆಸ್ ವರಿಷ್ಠ ಗುಲಾಂ ನಬಿ ಆಜಾದ್ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಕಸ್ಮಾತ್ ಜೆಡಿಎಸ್ ಗೆ ಹಣಕಾಸು ಇಲಾಖೆ ಸಿಕ್ಕಿದ್ದೇ ಆದಲ್ಲಿ ಹಣಕಾಸು ಸಚಿವರಾಗುವಷ್ಟು ಅನುಭವ ಯಾರಿಗಿದೆ? ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ಈ ಖಾತೆಯನ್ನು ಇಟ್ಟುಕೊಳ್ಳುಳುತ್ತಾರಾ ಎಂಬುದು ಈಗಿರುವ ಕುತೂಹಲ.
ಕರ್ನಾಟಕ ವಿಧಾನಸಭೆ ಚುನಾವಣೆಯ ನಂತರ ನಡೆದ ರಾಜಕೀಯ ವಿದ್ಯಮಾನಗಳು ಇಡೀ ರಾಷ್ಟ್ರದ ಚಿತ್ತವನ್ನು ರಾಜ್ಯದತ್ತ ತಿರುಗಿಸಿದೆ. ಸಚಿವ ಸಂಪುಟ ರಚನೆಯ ಕಾವು ಮುಗಿಲುಮುಟ್ಟಿರುವ ಹೊತ್ತಲ್ಲಿ, 'ನಾವು ಕಾಂಗ್ರೆಸ್ ಬಳಿ ಸಿಎಂ ಪಟ್ಟ ಕೇಳಿರಲಿಲ್ಲ' ಎಂಬ ಹೊಸ ಬಾಂಬ್ ಅನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಬೇರೆ ಹೇಳಿದ್ದಾರೆ. ಈ ಎಲ್ಲ ಪ್ರಹಸನದಿಂದಾಗಿ ರಾಜ್ಯ ರಾಜಕಾರಣ ಸಾಕಷ್ಟು ಕುತೂಹಲ ಸೃಷ್ಟಿಸಿದೆ.












Click it and Unblock the Notifications