ಚುನಾವಣಾ ಪರ್ವದಲ್ಲಿ ಪಕ್ಷದ ಬಗ್ಗೆ ತಿಳಿಯಿರಿ: ಬಿಜೆಪಿ
ಕರ್ನಾಟಕ ವಿಧಾನಸಭೆ ಚುನಾವಣೆ ಪರ್ವ ಆರಂಭಗೊಂಡಿದೆ. ಕರ್ನಾಟಕದ ಪ್ರಮುಖ ಪಕ್ಷವೆನಿಸಿರುವ ಭಾರತೀಯ ಜನತಾ ಪಕ್ಷ ಹಾಗೂ ಪಕ್ಷದ ಪ್ರಮುಖರ ಬಗ್ಗೆ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರಿಂದ ಸ್ಥಾಪಿತವಾದ ಭಾರತೀಯ ಜನ ಸಂಘ 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡಿತು. 1980ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ.
1994-2004 ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರಾಗಿ ಪಕ್ಷವನ್ನು ಬೆಳೆಸಿದವರು. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿಯ ನೇತಾರರಾಗಿದ್ದಾರೆ.

ಧ್ಯೇಯ: ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ, ಏಕಾತ್ಮ ಮಾನವತಾವಾದ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ. ಹಿಂದುತ್ವ ಎಂಬುದು ಒಂದು ಮತವನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ರಾಷ್ಟ್ರೀಯತೆಯನ್ನು ಎಂಬುವುದನ್ನು ಗಮನಿಸಬೇಕು.
ಪಕ್ಷದ ಪ್ರಮುಖರು: ಅಮಿತ್ ಶಾ ರಾಷ್ಟ್ರಾಧ್ಯಕ್ಷರು, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಅನಂತಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕೆಎಸ್ ಈಶ್ವರಪ್ಪ, ಆರ್ ಅಶೋಕ ಪ್ರಮುಖರು.ಪಕ್ಷ
ಸ್ಥಾಪನೆ: 1980
ಪಕ್ಷದ ಚಿನ್ಹೆ: ಕಮಲ
ವಿಳಾಸ: ಜಗನ್ನಾಥ ಭವನ
#48, ದೇಗುಲ ರಸ್ತೆ,
11ನೇ ಅಡ್ಡರಸ್ತೆ ಮಲ್ಲೇಶ್ವರಂ,
ಬೆಂಗಳೂರು- 560 003
ದೂರವಾಣಿ: 080-22041976, 23569999
ಫ್ಯಾಕ್ಸ್ : 080-23460398
ಇಮೇಲ್ : [email protected]
* ಟ್ವಿಟರ್ ನಲ್ಲಿ ಹಿಂಬಾಲಿಸಿ
ಉಪಾಧ್ಯಕ್ಷರು:
* ಇ.ಅಶ್ವತ್ಥನಾರಾಯಣ, ಬೆಂಗಳೂರು
* ನಳಿನ್ ಕುಮಾರ್ ಕಟೀಲ್,ಮಂಗಳೂರು
* ಎಂ.ಬಿ. ಭಾನುಪ್ರಕಾಶ್, ಶಿವಮೊಗ್ಗ

* ನಿರ್ಮಲ್ ಕುಮಾರ್ ಸುರಾನ, ಬೆಂಗಳೂರು
* ಮಂಗಳಾದೇವಿ ಎಸ್. ಬಿರಾದರ್, ಬಿಜಾಪುರ
ಪ್ರಧಾನ ಕಾರ್ಯದರ್ಶಿಗಳು :
* ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ
* ಶೋಭಾ ಕರಂದ್ಲಾಜೆ, ಸಂಸದರು
* ಸಿ. ಟಿ. ರವಿ, ಚಿಕ್ಕಮಗಳೂರು
* ಅರವಿಂದ ಲಿಂಬಾವಳಿ, ಶಾಸಕರು
ಸಂಘಟನಾ ಪ್ರಧಾನ ಕಾರ್ಯದರ್ಶಿ : ಬಿ ಪಿ ಅರುಣಕುಮಾರ
ರಾಜ್ಯ ಉಸ್ತುವಾರಿ : ಮುರಳೀಧರ್ ರಾವ್.
ಕಾರ್ಯದರ್ಶಿಗಳು:
* ಸಂಗಣ್ಣ ಕರಡಿ, ಸಂಸದರು
* ಸುರೇಶ ಚನ್ನಬಸಪ್ಪ ಅಂಗಡಿ, ಸಂಸದರು
* ಮುನಿರಾಜು ಗೌಡ.. ಇನ್ನಿತರರು
ವಕ್ತಾರರು: ಎಸ್ ಸುರೇಶ ಕುಮಾರ, ಗೋ. ಮಧುಸೂದನ್
ಪಕ್ಷದ ರಾಜ್ಯ ಕಾರ್ಯದರ್ಶಿಗಳು, ಖಜಾಂಜಿ, ಕಾರ್ಯಾಲಯ ಕಾರ್ಯದರ್ಶಿ, ಕಾರ್ಯಕಾರಿಣಿ ಸದಸ್ಯರು ಸೇರಿದಂತೆ ಉಳಿದ ಪಟ್ಟಿ ಇಲ್ಲಿದೆ ನೋಡಿ[...]












Click it and Unblock the Notifications