ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ ಫೋರ್ ಸಮೀಕ್ಷೆ: ಎಲ್ಲ ವಯೋಮಾನದವರಿಗೂ ಕಾಂಗ್ರೆಸ್ ಅಚ್ಚುಮೆಚ್ಚಂತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಗತಾನೆ ಮತದಾನ ಮಾಡಲು ಆರಂಭಿಸಿರುವ ಯುವಜನರಿಂದ ವೃದ್ಧರವರೆಗೂ ಎಲ್ಲರೂ ಕಾಂಗ್ರೆಸ್ ಪಕ್ಷವನ್ನೇ ಹೆಚ್ಚಾಗು ಇಷ್ಟಪಡುತ್ತಾರೆ ಎಂದು ಸಿ ಫೋರ್ ಬಿಡುಗಡೆ ಮಾಡಿರುವ ಸಮೀಕ್ಷೆಯ ವರದಿ ತಿಳಿಸಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ವಿವಿಧ ವಯೋಮಾನದ ಜನರು ಬಿಜೆಪಿ ಮತ್ತು ಜೆಡಿಎಸ್‌ಗಿಂತ ಕಾಂಗ್ರೆಸ್ ಹೆಚ್ಚು ಅಚ್ಚುಮೆಚ್ಚು ಎಂದು ಹೇಳಿದ್ದಾರೆ. ಮತದಾರರನ್ನು ವಯೋಮಿತಿ ಆಧಾರದಲ್ಲಿ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕೂ ವಿವಿಧ ವರ್ಗದ ವಯೋಮಾನಕ್ಕೆ ಸೇರಿದ ಹೆಚ್ಚಿನ ಮತದಾರರು ಕಾಂಗ್ರೆಸ್‌ಗೆ ಮತ ಚಲಾಯಿಸಲು ಆಸಕ್ತಿ ವಹಿಸಿದ್ದಾರೆ.

ಸಿ-ಫೋರ್ 3ನೇ ಸಮೀಕ್ಷೆ: ಕಾಂಗ್ರೆಸ್ ಗೆ ಭರ್ಜರಿ ಜಯ, ಬಿಜೆಪಿಗೆ ಭಾರೀ ನಿರಾಸೆಸಿ-ಫೋರ್ 3ನೇ ಸಮೀಕ್ಷೆ: ಕಾಂಗ್ರೆಸ್ ಗೆ ಭರ್ಜರಿ ಜಯ, ಬಿಜೆಪಿಗೆ ಭಾರೀ ನಿರಾಸೆ

ಎಲ್ಲ ವಯೋಮಾನದ ಮತದಾರರ ಬಯಕೆಯೂ ಬಹುತೇಕ ಒಂದೇ ಪ್ರಮಾಣದಲ್ಲಿರುವುದು ವಿಶೇಷ. 50 ವರ್ಷಕ್ಕೂ ಅಧಿಕ ವಯಸ್ಸಾದ ಮತದಾರರಲ್ಲಿ ಹೆಚ್ಚಿನವರು ಕೈ ಗುರುತಿನೆಡೆಗೆ ವ್ಯಾಮೋಹ ಹೊಂದಿದ್ದಾರೆ. ಅವರಲ್ಲಿ ಬಿಜೆಪಿ ಕುರಿತು ಹೆಚ್ಚಿನ ಒಲವಿಲ್ಲ. ಜೆಡಿಎಸ್ ಕಡೆಗೆ ಸಾಧಾರಣ ಮಟ್ಟದ ಆಸಕ್ತಿ ಇದೆ.

karnataka elections 2018 c fore survey agewise analysis

ಬಿಜೆಪಿಗೆ ಮತಚಲಾಯಿಸಲು ಬಯಸುವವರ ಪೈಕಿ 18-25 ವಯೋಮಿತಿಯವರು ಹೆಚ್ಚಾಗಿದ್ದಾರೆ. ಆದರೆ, ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಈ ವಯೋಮಾನದ ಯುವಜನರೂ ಕಾಂಗ್ರೆಸ್ ಕಡೆ ಪ್ರೀತಿ ಹೊಂದಿದ್ದಾರೆ ಎನ್ನುತ್ತದೆ ಸಮೀಕ್ಷೆ.

ಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವುಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವು

ಮತದಾರರು ಬಹುಪಾಲು ಮತವನ್ನು ಕಾಂಗ್ರೆಸ್ ಮತ್ತು ಬಿಜೆಪಿಗೆ ವಿನಿಯೋಗಿಸಲು ಮುಂದಾಗಿದ್ದಾರೆ. ಜೆಡಿಎಸ್‌ ಕುರಿತು 36ಕ್ಕಿಂತ ಅಧಿಕ ವಯೋಮಾನದ ಜನರು ತಕ್ಕಮಟ್ಟಿನ ಪ್ರೀತಿ ಹೊಂದಿದ್ದಾರೆ.

English summary
C-fore conducted the pre-poll survey in Karnataka between April 20th and 30th, 2018. Here is the agewise survey report of Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X