ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲಿಯಂತಿದ್ದ ಸಿದ್ದರಾಮಯ್ಯ ಕುರಿಯಂತಾಗಿದ್ದೇಕೆ? ಛೇ, ಹೀಗಾಗಬಾರದಿತ್ತು!

By Harshitha
|
Google Oneindia Kannada News

''ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 120ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವುದರಲ್ಲಿ ಸಂದೇಹವೇ ಇಲ್ಲ'' ಎಂದು ಸಿದ್ದರಾಮಯ್ಯ ವಿಶ್ವಾಸದಿಂದ ಆಗಾಗ ಹೇಳುತ್ತಲೇ ಇದ್ದರು.

ಆದ್ರೆ, ಸಿದ್ದರಾಮಯ್ಯನವರ ಲೆಕ್ಕಾಚಾರ ಇಂದು ತಲೆ ಕೆಳಗಾಗಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಊಹಿಸದ ಜನಾದೇಶ ಇವತ್ತು ಹೊರಬಿದ್ದಿದೆ.

ಆಜಾದ್ ತಂತ್ರ : ಕುಮಾರಸ್ವಾಮಿ ಸಿಎಂ, ಕೈ -ತೆನೆ ಮೈತ್ರಿಆಜಾದ್ ತಂತ್ರ : ಕುಮಾರಸ್ವಾಮಿ ಸಿಎಂ, ಕೈ -ತೆನೆ ಮೈತ್ರಿ

ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಪ್ರಕಟವಾಗಿಲ್ಲ. ಆದ್ರೆ, ಸದ್ಯ ಲೀಡಿಂಗ್ ನಲ್ಲಿರುವ ಟ್ರೆಂಡ್ ನೋಡಿದರೆ... ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಆದ್ರೆ, ಬಹುಮತ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿಲ್ಲ. ಹೀಗಾಗಿ, ಅದರ ಲಾಭ ಪಡೆಯಲು ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ.

ಕಾಂಗ್ರೆಸ್‌ ಜೊತೆ ಮೈತ್ರಿಗೆ ಜೆಡಿಎಸ್‌ ಒಪ್ಪಿಗೆ,ಬಿಎಸ್‌ವೈ ಕನಸು ಭಗ್ನಕಾಂಗ್ರೆಸ್‌ ಜೊತೆ ಮೈತ್ರಿಗೆ ಜೆಡಿಎಸ್‌ ಒಪ್ಪಿಗೆ,ಬಿಎಸ್‌ವೈ ಕನಸು ಭಗ್ನ

ಇಷ್ಟು ದಿನ ಸಿಎಂ ಆಗಿ ಬೀಗುತ್ತಿದ್ದ ಸಿದ್ದರಾಮಯ್ಯ ಈಗ ಅಕ್ಷರಶಃ 'ಕೈ'ಗೊಂಬೆಯಾಗಿ ಡಾ.ಜಿ.ಪರಮೇಶ್ವರ ಹಿಂದೆ ಕೈಕಟ್ಟಿ ನಿಲ್ಲುವಂತಾಗಿದೆ. ಹುಲಿಯಂತಿದ್ದ ಸಿದ್ದರಾಮಯ್ಯ ಈಗ ಕುರಿಯಂತಾಗಿದ್ದಾರೆ. ಮುಂದೆ ಓದಿರಿ...

ಜೆಡಿಎಸ್ ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್

ಜೆಡಿಎಸ್ ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿರುವ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲು ಕಾಂಗ್ರೆಸ್ ತಯಾರಿಲ್ಲ. ಇದೇ ಕಾರಣಕ್ಕೆ, ಸರ್ಕಾರ ರಚಿಸಲು ಜೆಡಿಎಸ್ ಗೆ ಕಾಂಗ್ರೆಸ್ ಪಕ್ಷ ಬಹಿರಂಗವಾಗಿ ಬೆಂಬಲ ಘೋಷಿಸಿದೆ.

ಕೈ ಕಟ್ಟಿ ಹಿಂದೆ ನಿಂತಿದ್ದ ಸಿದ್ದರಾಮಯ್ಯ

ಕೈ ಕಟ್ಟಿ ಹಿಂದೆ ನಿಂತಿದ್ದ ಸಿದ್ದರಾಮಯ್ಯ

ಫಲಿತಾಂಶದ ಟ್ರೆಂಡ್ ಗೊತ್ತಾಗುತ್ತಿದ್ದಂತೆಯೇ, ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಇವತ್ತು ಮಧ್ಯಾಹ್ನ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಪಕ್ಷದ ನಾಯಕತ್ವ ವಹಿಸಿ ಮಾಧ್ಯಮಗಳ ಮುಂದೆ ಮೊದಲು ಮಾತಿಗಿಳಿದವರು ಡಾ.ಜಿ.ಪರಮೇಶ್ವರ.! ''ಜೆಡಿಎಸ್ ಗೆ ಸರ್ಕಾರ ರಚಿಸಲು ನಾವು ಬೆಂಬಲ ಕೊಡುತ್ತೇವೆ'' ಎಂದು ಡಾ.ಜಿ.ಪರಮೇಶ್ವರ ಕ್ಯಾಮರಾ ಮುಂದೆ ಹೇಳ್ತಿದ್ರೆ, ಅವರ ಹಿಂದೆ ಸಿದ್ದರಾಮಯ್ಯ ಕೈ ಕಟ್ಟಿ ನಿಂತಿದ್ರು.

{ಫೋಟೋ ಕೃಪೆ: ಎ.ಎನ್.ಐ}

ಸಿದ್ದರಾಮಯ್ಯ 'ಕೈ'ಗೊಂಬೆ

ಸಿದ್ದರಾಮಯ್ಯ 'ಕೈ'ಗೊಂಬೆ

ಇಷ್ಟು ದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಅಬ್ಬರ ಈಗ ಏಕ್ದಂ ತಣ್ಣಗಾಗಿದೆ. ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದರಲ್ಲಿ ಸೋತು, ಮತ್ತೊಂದರಲ್ಲಿ ಪ್ರಯಾಸದ ಗೆಲುವು ಕಂಡಿರುವ ಸಿದ್ದರಾಮಯ್ಯ ಈಗ 'ಕೈ'ಗೊಂಬೆ ಆಗಿದ್ದಾರೆ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಸಿಎಂ ಆಗಿದ್ದಾಗ ಜೆಡಿಎಸ್ ಪಕ್ಷ, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರನ್ನ ಲೇವಡಿ ಮಾಡಿದ್ದ ಸಿದ್ದರಾಮಯ್ಯ ಇದೀಗ ಬೇರೆ ವಿಧಿ ಇಲ್ಲದೇ ಅವರ ಮನೆ ಬಾಗಿಲು ತಟ್ಟುವಂತಾಗಿದೆ. ಗಾಳಿ ಬಂದ ಕಡೆ ತೂರಿಕೋ ಅಂತಾರಲ್ಲ, ಬಹುಶಃ ಅದು ಇದಕ್ಕೆ ಇರಬೇಕು.! ಆದರೂ, ಸಿದ್ದರಾಮಯ್ಯ ಪರಿಸ್ಥಿತಿ ಹೀಗಾಗಬಾರದಿತ್ತು.!

English summary
Karnataka Election Results 2018: Siddaramaiah was seen folding his arms behind Dr.G.Parameshwara during the press meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X