ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶ : ಚಿಕ್ಕಮಗಳೂರಲ್ಲಿ ಐದರಲ್ಲಿ ನಾಲ್ಕು ಬಿಜೆಪಿ ಪಾಲು

By Mahesh
|
Google Oneindia Kannada News

ಬೆಂಗಳೂರು, ಮೇ 15: ಮಲೆನಾಡು, ಅರೆ ಮಲೆನಾಡು, ಹಾಗೂ ಬಯಲು ಸೀಮೆಗಳನ್ನೊಳಗೊಂಡ ವೈವಿಧ್ಯಮಯ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಭರ್ಜರಿ ಪ್ರದರ್ಶನ ನೀಡಿದೆ. ಐದಕ್ಕೆ ಐದು ಸ್ಥಾನವನ್ನು ಗೆಲ್ಲುವ ನಿರೀಕ್ಷೆ ಮೂಡಿತ್ತು. ಆದರೆ, ತೀವ್ರ ಪೈಪೋಟಿ ನಡುವೆ ಹಾಲಿ ಶಾಸಕ ಜೀವರಾಜ್ ಅವರು ಸೋಲು ಕಂಡಿದ್ದಾರೆ.

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ.

ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮತ ಒಲಿಸಿಕೊಂಡರೆ ಬಿಜೆಪಿ ಪಾರುಪತ್ಯಕ್ಕೆ ಅಂತ್ಯ ಆಡಬಹುದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರ ಹಾಕಿತ್ತು. ಆದರೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಾಡಿದ ಮೋಡಿಗೆ ಪ್ರತಿಪಕ್ಷಗಳು ಬೆಚ್ಚಿವೆ.

Karnataka election results 2018 : Chikmagalur District Winners Losers

ಶೃಂಗೇರಿ ಕ್ಷೇತ್ರದಲ್ಲಿ ಕಾಂಗೆಸ್ಸಿನ ಟಿಡಿ ರಾಜೇಗೌಡ ಹಾಗೂ ಬಿಜೆಪಿಯ ಡಿಎನ್ ಜೀವರಾಜ್ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

ಚಿಕ್ಕಮಗಳೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:[ಅಂಕಿ ಅಂಶ ಅಪ್ಡೇಟ್ ಆಗಲಿದೆ]

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಶೃಂಗೇರಿ ಟಿ.ಡಿ ರಾಜೇಗೌಡ
48013 ಕಾಂಗ್ರೆಸ್
ಡಿ.ಎನ್ ಜೀವರಾಜ್
ಬಿಜೆಪಿ
47755
ಮೂಡಿಗೆರೆ
ಎಂಪಿ ಕುಮಾರಸ್ವಾಮಿ
58783
ಬಿಜೆಪಿ ಮೋಟಮ್ಮ
ಕಾಂಗ್ರೆಸ್
46271
ಚಿಕ್ಕಮಗಳೂರು
ಸಿ.ಟಿ ರವಿ 65773 ಬಿಜೆಪಿ ಬಿ.ಎಲ್ ಶಂಕರ್
ಕಾಂಗ್ರೆಸ್ 42335
ತರೀಕೆರೆ
ಡಿ.ಎಸ್ ಸುರೇಶ್ 43562 ಬಿಜೆಪಿ ಜಿ.ಎಚ್ ಶ್ರೀನಿವಾಸ
ಪಕ್ಷೇತರ 31409
ಕಡೂರು
ಬೆಳ್ಳಿ ಪ್ರಕಾಶ್ 61264 ಜೆಡಿಎಸ್ ವೈಎಸ್ ವಿ ದತ್ತಾ
ಕಾಂಗ್ರೆಸ್ 46272
English summary
Karnataka Assembly elections 2018 : Here is Chikmagalur district results. Get complete information about winners and losers with their constituencies and party. BJP secured 4 out of 5 constituencies losing Sringeri to Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X