ನಂಜನಗೂಡು : ಮತವಿಭಜನೆ ನಡುವೆ ಗೆದ್ದವನೇ ಜಾಣ

ರಾಜಕೀಯ ಮಹತ್ವ : ಶ್ರೀಕಂಠೇಶ್ವರ ದೇಗುಲವಿರುದ ಈ ಕ್ಷೇತ್ರ ಸಮುದಾಯಗಳ ಘರ್ಷಣೆಯ ಕಾರಣಕ್ಕೆ ನಾಡಿನ ಗಮನ ಸೆಳೆದಿತ್ತು. ಈ ಹಿಂದೆ ಬೆಂಕಿ ಮಹದೇವು ಪ್ರತಿನಿಧಿಸುತ್ತಿದ್ದರು. 2008ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾಗಿದೆ.
ಪ್ರಮುಖ ಸ್ಪರ್ಧಿಗಳು : ಶ್ರೀನಿವಾಸ್ ಪ್ರಸಾದ್ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿಯ ಪರಾಜಿತ ಅಭ್ಯರ್ಥಿ ಎಸ್. ಮಹದೇವಯ್ಯ ಈ ಬಾರಿ ಕೆಜೆಪಿ ಅಭ್ಯರ್ಥಿ. ಬಿಜೆಪಿಯಿಂದ ಕೃಷ್ಣ ಶಿವರಾಂ ಹೆಸರು ಕೇಳಿ ಬರುತ್ತಿದೆ.
ಗೆಲುವಿನ ಅಂಶಗಳು : ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಶ್ರೀನಿವಾಸ್ ಪ್ರಸಾದ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಎಸ್. ಮಹದೇವಯ್ಯ ಈಗ ಕೆಜೆಪಿಗೆ ಜಿಗಿದಿರುವುದರಿಂದ ಆ ಪಕ್ಷಕ್ಕೆ ಬಲ ಸಿಕ್ಕಂತಾಗಿದೆ. ಪ್ರಸಾದ್ ಕ್ಷೇತ್ರದಲ್ಲಿ ಸಕ್ರಿಯಾಗಿ ಓಡಾಡದೇ ಇರೋದು ಅವರಿಗೆ ಮೈನಸ್ ಆದ್ರೂ ಸಹಿತ ಎಲ್ಲೂ ಹೆಸರು ಕೆಡಿಸಿಕೊಂಡಿಲ್ಲ. ಅಲ್ಲದೆ, ಇಲ್ಲೂ ಸಿದ್ದರಾಮಯ್ಯ ವರ್ಚಸ್ಸು ಇದೆ. ಹೀಗಾಗಿ, ಕ್ಷೇತ್ರ ಕಾಂಗ್ರೆಸ್ ಕೈ ತಪ್ಪುವುದು ಕಷ್ಟ. ಒಂದು ವೇಳೆ ಬಿಜೆಪಿಯಿಂದ ಎ.ಆರ್. ಕೃಷ್ಣಮೂರ್ತಿ ಸ್ಪರ್ಧಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೇರ ಹಣಾಹಣಿಯಾಗಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ : ನಂಜನಗೂಡು ಪುರಸಭೆಯ ಒಟ್ಟು 27 ವಾರ್ಡ್‍ಗಳಲ್ಲಿ ಕಾಂಗ್ರೆಸ್ 10, ಜೆಡಿಎಸ್ 9, ಬಿಜೆಪಿ 3, ಕೆಜೆಪಿ 4 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದು ಅತಂತ್ರವಾಗಿದೆ.
ಮತದಾರರ ವಿವರ
ಪುರುಷ ಮತದಾರರು - 89,624
ಮಹಿಳಾ ಮತದಾರರು - 85,228
ಒಟ್ಟು ಮತದಾರರು - 1,74,852
ಹಾಲಿ ಶಾಸಕ ವಿ. ಶ್ರೀನಿವಾಸ್‍ಪ್ರಸಾದ್ (ಕಾಂಗ್ರೆಸ್)
ಸೋತ ಅಭ್ಯರ್ಥಿ ಎಸ್. ಮಹದೇವಯ್ಯ (ಬಿಜೆಪಿ)
ಗೆಲುವಿನ ಅಂತರ 708 ಮತಗಳು
ಜಾತಿವಾರು ಮತದಾರರು : ಲಿಂಗಾಯಿತರು - 32 ಸಾವಿರ, ಎಸ್ಸಿ - 29 ಸಾವಿರ, ಎಸ್.ಟಿ - 27 ಸಾವಿರ, ಉಪ್ಪಾರರು - 15,800, ಕುರುಬರು - 14 ಸಾವಿರ, ಒಕ್ಕಲಿಗರು - 17 ಸಾವಿರ, ಮುಸ್ಲಿಂ - 10,052, ಇತರೆ - 30 ಸಾವಿರ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications