• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಪ್ಪಳ ಜಿಲ್ಲಾ ಚುನಾವಣಾ ವಿಶ್ಲೇಷಣೆ:ಗೆಲ್ಲುವ ಪಾಂಡವರಾರು?

|

ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹಳಷ್ಟು ಇತಿಹಾಸ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು ಕಾಣ ಸಿಗುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲಿ ಪ್ರಮುಖವಾಗಿ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ, ಕಲ್ಲಿನ ಮೇಲೆ ಕೆತ್ತನೆಯ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ.

(ಚಿತ್ರದಲ್ಲಿ: ಆನೆಗೊಂದಿ ಸೇತುವೆ)

ಶ್ರೀ ವಿಜಯ ರಚಿಸಿರುವ ಕವಿರಾಜ ಮಾರ್ಗದಲ್ಲಿ ಬರುವಂತೆ, ಪುರಾಣ ಕಾಲದಿಂದಲೂ ಅರ್ಜುನ ಶಿವನಿಂದ ಪಾಶುಪತಾಸ್ತ್ರ ಪಡೆದಿರುವ ಮತ್ತು ತಪಸ್ಸನ್ನು ಮಾಡಿರುವ "ಇಂದ್ರಕೀಲ ಪರ್ವತ' ಇಲ್ಲಿಯೇ ಇರುವದು. ಅರ್ಜುನನು ಮಳಲು ಲಿಂಗವನ್ನು ಪೂಜಿಸಲು ಈಶ್ವರನು ಪ್ರತ್ಯಕ್ಷನಾದನು. ಇದೇ ಇಂದು ಮಳೆ ಮಲ್ಲೇಶ್ವರ ಎಂದು ಪ್ರಸಿದ್ದಿಯಾಗಿದೆ. ಪಾಂಡವರು ಕೂಡಾ ಇಲ್ಲಿ ಬಿಡಾರ ಮಾಡಿದ್ದರು. ಇದನ್ನು "ಪಾಂಡವರ ವಠಾರ' ವೆಂದು ಇಂದಿಗೂ ಇದನ್ನು ಕರೆಯಲಾಗುತ್ತದೆ.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆ ಎಲ್ಲಾ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಜಿಲ್ಲೆಯ ವ್ಯಾಪ್ತಿಗೆ ಬರುವ ತಾಲೂಕುಗಳು: ಕೊಪ್ಪಳ, ಗಂಗಾವತಿ, ಯಲ್ಬುರ್ಗಾ, ಕುಷ್ಟಗಿ

2008ರಲ್ಲಿ ಗೆದ್ದವರ ಪಟ್ಟಿ | 2013 ಫಲಿತಾಂಶ: ಗೆದ್ದವರು, ಸೋತವರ ವಿವರ

ಕುಷ್ಟಗಿ : ಅಮರೇ ಗೌಡ ಬಯ್ಯಾಪುರ, ಕಾಂಗ್ರೆಸ್, ಗೆದ್ದ ಮತದ ಅಂತರ 1,770.

ಕನಕಗಿರಿ : ಶಿವರಾಜ್ ತಂಗಡಗಿ, ಪಕ್ಷೇತರ, ಗೆದ್ದ ಮತದ ಅಂತರ 2,183.

ಗಂಗಾವತಿ : ಪರಣ್ಣ ಈಶ್ವರಪ್ಪ ಮನವಳಿ, ಬಿಜೆಪಿ, ಗೆದ್ದ ಮತದ ಅಂತರ 2,885.

ಯಲ್ಬುರ್ಗಾ : ಈಶಣ್ಣ ಗುಲಗುಣ್ಣವರ್, ಬಿಜೆಪಿ, ಗೆದ್ದ ಮತದ ಅಂತರ 29,781.

ಕೊಪ್ಪಳ : ಕರಡಿ ಸಂಗಣ್ಣ, ಬಿಜೆಪಿ, ಗೆದ್ದ ಮತದ ಅಂತರ 10,345.

2013 ಕರ್ನಾಟಕ ವಿಧಾನಸಭೆ ಚುನಾವಣೆ ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳು:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಕೆಜೆಪಿ ಬಿಎಸ್ಆರ್ / ಸಿಪಿ / ಪಕ್ಷೇತರರು /ಇತರರು
60 ಕುಷ್ಟಗಿ ಅಮರೇಗೌಡ ಬಯ್ಯಾಪುರ
ದೊಡ್ದನಗೌಡ ಕೆ ಶರಣಪ್ಪ ಫಕೀರಪ್ಪ ರಾಜಶೇಖರ ಗೌಡ (BSR) ಒಟ್ಟು 14 ಮಂದಿ ಕಣದಲ್ಲಿ 61 ಕನಕಗಿರಿ ಮೀಸಲು ಶಿವರಾಜ್ ತಂಗಡಗಿ ರಾಮಾ ನಾಯ್ಕ್ ಪ್ರಕಾಶ್ ರಾಥೋಡ್ ಬಸವರಾಜ್ ದಡೇಸೂಗೂರು ಮುಕುಂದರಾವ್ ಭವಾನಿಮಠ (BSR) ಒಟ್ಟು 15 ಮಂದಿ ಕಣದಲ್ಲಿ. 62 ಗಂಗಾವತಿ ಶ್ರೀನಾಥ್ ಎಚ್ ಆರ್ ಪರಣ್ಣ ಮುನವಳ್ಳಿ ಇಕ್ಬಾಲ್ ಅನ್ಸಾರಿ ಬಸವರಾಜ್ ಪಾಟೀಲ್ ಅನ್ವರಿ ಪಂಪನಗೌಡ ಪಟೇಲ್ (BSR) ಸೇರಿ ಒಟ್ಟು ಒಂಬತ್ತು ಮಂದಿ ಕಣದಲ್ಲಿ. 63 ಯಲಬುರ್ಗಾ ಬಸವರಾಜ ರಾಯರೆಡ್ಡಿ ಹಾಲಪ್ಪ ಬಸಪ್ಪ ಆಚಾರ್ ಜಿ ಟಿ ಪಂಪಾಪತಿ ಸಿ ಎಚ್ ಪೋಲಿಸ್ ಪಾಟೀಲ್ ನವೀನ್ ಗುಳಗುಣ್ಣವರ್ (BSR) ಸೇರಿ ಒಟ್ಟು 12 ಮಂದಿ ಕಣದಲ್ಲಿ. 64 ಕೊಪ್ಪಳ ರಾಘವೇಂದ್ರ ಹಿಟ್ನಾಳ್ ಸಂಗಣ್ಣ ಕರಡಿ ಪ್ರದೀಪ್ ಗೌಡ ಕೆ ಎಂ ಸಯ್ಯದ್ ನೆಕ್ಕಂಟಿ ನಾಗರಾಜ್ (BSR) ಸೇರಿ ಒಟ್ಟು ಎಂಟು ಮಂದಿ ಕಣದಲ್ಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Koppal district candidates final list. Districts has five constituencies, in the last election BJP won three, Congress and Independent candidates has won one seat each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more