ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಎಷ್ಟು ಮಹಿಳೆಯರು ಎಂಎಲ್ಎ ಆಗ್ತಾರೋ?

|
Google Oneindia Kannada News

ಬೆಂಗಳೂರು, ಏ 25: ಇತರ ಪಕ್ಷಗಳಿಗಿಂತ ಈ ಬಾರಿ ಗೆಲ್ಲುವ ಕುದುರೆ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ಪಕ್ಷದ ಟಿಕೆಟಿಗೆ ಇತರ ಪಕ್ಷಗಳ ಟಿಕೆಟಿಗಿಂತ ತುಸು ಬೇಡಿಕೆ ಹೆಚ್ಚಾಗಿಯೇ ಇತ್ತು, ಎಐಸಿಸಿ ಕಚೇರಿಯಲ್ಲಿ ಭಾರೀ ಲಾಬಿಗಳೇ ನಡೆದವು. ಮಹಿಳೆಯರು ತಾವೇನೂ ಕಮ್ಮಿಯಿಲ್ಲವೆಂದು ಮೂಡಿಗೆರೆಯ ಮೋಟಮ್ಮ ನೇತೃತ್ವದಲ್ಲಿ ಧರಣಿಯೂ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರಪ್ಪ ಬಿಸಿಲು ಲೆಕ್ಕಿಸದೇ ಧರಣಿ ಕೂತಿದ್ದ ಮಹಿಳೆಯರಿಗೆ ಅದೇನೋ ಭರವಸೆ ಕೂಡಾ ಕೊಟ್ಟರು.

ಆದರೆ ಚುನಾವಣಾ ಸ್ಕ್ರೀನಿಂಗ್ ಕಮಿಟಿ ಇದ್ಯಾವುದಕ್ಕೂ ಜಪ್ಪಯ್ಯ ಅನ್ನದೇ ತನ್ನ ಪಾಡಿಗೆ ಪಟ್ಟಿ ಬಿಡುಗಡೆ ಮಾಡಿತು. ದುರಂತವೆಂದರೆ ಹಿರಿಯ ಕಾಂಗ್ರೆಸ್ ನಾಯಕಿ ಮೋಟಮ್ಮಗೆ ಅತ್ತ ಮೂಲ ಮೂಡಿಗೆರೆ ಕ್ಷೇತ್ರದ ಟಿಕೆಟ್ಟೂ ಸಿಗಲಿಲ್ಲ ಇತ್ತ ಬಯಸಿದ್ದ ಸಕಲೇಶಪುರ ಕ್ಷೇತ್ರದ ಟಿಕೆಟೂ ಸಿಗಲಿಲ್ಲ. ಅದ್ಯಾಕೋ ಈ ಬಾರಿ ಸೋನಿಯಾ ಮೇಡಂ ಮಹಿಳೆಯರಿಗೆ ಹಿಂಗ್ ಮಾಡ್ಬಿಟ್ರು ಎಂದು ತಮ್ಮ ತಮ್ಮಲೇ ಮಾತಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸಾದರು.

ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಇತರ ಪಕ್ಷಗಳೂ ಹಿಂದೆ ಬಿದ್ದವು, ಯಾವ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಇದ್ದಿದ್ದರಲ್ಲಿ ವಾಸಿಯೆಂದರೆ ಕಾಂಗ್ರೆಸ್ ಪಕ್ಷವೇ. ಆದರೆ ಈ ಬಾರಿ ಪಕ್ಷೇತರರಾಗಿ ಕಣದಲ್ಲಿರುವ ಮಹಿಳೆಯರು 170. ಒಟ್ಟು 224 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ನೀಡಿದ ಟಿಕೆಟಿನ ಶೇಕಡಾವಾರು ಲೆಕ್ಕ ಹಾಕುವುದಾದರೆ ಶೇ.5ಕ್ಕಿಂತ ಕಮ್ಮಿ.

1962ರಲ್ಲಿ 18 ಶಾಸಕಿಯರನ್ನು ಹೊಂದಿದ್ದ ಕರ್ನಾಟಕ ವಿಧಾನಸಭೆಯಲ್ಲಿ 2008ರಲ್ಲಿ ಬರೀ ಮೂರಕ್ಕೆ ಕುಸಿಯಿತು. ಶೋಭಾ ಕರಂದ್ಲಾಜೆ, ಸೀಮಾ ಅಶೋಕ್ ಮಸೂತಿ ಮತ್ತು ಮಲ್ಲಿಕಾ ಪ್ರಸಾದ್ ಮಾತ್ರ ಆಯ್ಕೆಯಾದರು. ತದನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಕಲ್ಪನಾ ಸಿದ್ದರಾಜು ಅಯ್ಯೆಯಾಗಿದ್ದರು.

ಪ್ರಮುಖ ಐದು ಪಕ್ಷಗಳು ಕಣಕ್ಕಿಳಿಸಿರುವ ಮಹಿಳಾ ಅಭ್ಯರ್ಥಿಗಳ ಪಟ್ಟಿ ಸ್ಲೈಡಿನಲ್ಲಿ ನೋಡಿ..

 ಬಿಜೆಪಿ - 07 (ಕಣದಲ್ಲಿರುವ ಅಭ್ಯರ್ಥಿಗಳು)

ಬಿಜೆಪಿ - 07 (ಕಣದಲ್ಲಿರುವ ಅಭ್ಯರ್ಥಿಗಳು)

ನಿಪ್ಪಾಣಿ
ಶಶಿಕಲಾ ಜೊಲ್ಲೆ

ಮಾನ್ವಿ
ಅಯ್ಯಮ್ಮ ನಾಯಕ್

ಧಾರವಾಡ
ಸೀಮಾ ಅಶೋಕ್ ಮಸೂತಿ

ಸಾಗರ
ಶರಾವತಿ ಸಿ ರಾವ್

ಮಧುಗಿರಿ
ಸುಮಿತ್ರಾ ದೇವಿ

ಕೆಜಿಎಫ್
ರಾಮಕ್ಕ

ಮದ್ದೂರು
ಬಿ ಎಂ ವನಜಾಕ್ಷಿ

ಕಾಂಗ್ರೆಸ್ - 11 (ಕಣದಲ್ಲಿರುವ ಅಭ್ಯರ್ಥಿಗಳು)

ಕಾಂಗ್ರೆಸ್ - 11 (ಕಣದಲ್ಲಿರುವ ಅಭ್ಯರ್ಥಿಗಳು)

ಬೆಳಗಾವಿ ಗ್ರಾಮಾಂತರ
ಲಕ್ಷ್ಮಿ ರವೀಂದ್ರ ಹೆಬ್ಳಾಳ್ಕರ್

ತೇರದಾಳ
ಉಮಾಶ್ರೀ

ಬೀದರ್ ದಕ್ಷಿಣ
ಮೀನಾಕ್ಷಿಬಾಯಿ

ಕುಮುಟಾ
ಶಾರದ ಮೋಹನ್ ಶೆಟ್ಟಿ

ತುರುವೇಕೆರೆ
ಗೀತಾ ರಾಜಣ್ಣ

ಚಿಂತಾಮಣಿ
ವಾಣಿ ಕೃಷ್ಣಾರೆಡ್ಡಿ

ರಾಜಾಜಿನಗರ
ಮಂಜುಳಾ ನಾಯ್ಡು

ಬೆಂಗಳೂರು ದಕ್ಷಿಣ
ತೇಜಸ್ವಿನಿ ರಮೇಶ್

ಹೊಳೆನರಸೀಪುರ
ಅನುಪಮ ಎಸ್ ಜಿ

ಪುತ್ತೂರು
ಶಕುಂತಲಾ ಶೆಟ್ಟಿ

BSR - 07 (ಕಣದಲ್ಲಿರುವ ಅಭ್ಯರ್ಥಿಗಳು)

BSR - 07 (ಕಣದಲ್ಲಿರುವ ಅಭ್ಯರ್ಥಿಗಳು)

ರಾಯಚೂರು ನಗರ
ಪೂಜಗಾಂಧಿ

ಶಿರಹಟ್ಟಿ

ಜಯಶ್ರೀ ಹಳ್ಳೆಪ್ಪನವರ್

ಕಾರವಾರ
ಮಂಜುಳಾ ನಾಯಕ

ವಿಜಯನಗರ (Hospet)
ರಾಣಿ ಸಂಯುಕ್ತ

ಮಾಲೂರು
ಜಯಮ್ಮ ಜಯರಾಂ

ಹೊಳೆನರಸೀಪುರ
ಶೋಭ ಪ್ರಕಾಶ್

ಚಾಮರಾಜ
ಎನ್ ಭಾರತಿ

ಕೆಜೆಪಿ - 09 (ಕಣದಲ್ಲಿರುವ ಅಭ್ಯರ್ಥಿಗಳು)

ಕೆಜೆಪಿ - 09 (ಕಣದಲ್ಲಿರುವ ಅಭ್ಯರ್ಥಿಗಳು)

ಕುಮುಟಾ
ಗಾಯತ್ರಿ ಗೌಡ

ಶಿರಹಟ್ಟಿ
ಶೋಭಾ ಕೃಷ್ಣಪ್ಪ ಲಮಾಣಿ

ಪುಲಿಕೇಶಿ ನಗರ
ಸುಶೀಲಾ ದೇವರಾಜ್

ರಾಜಾಜಿನಗರ
ಶೋಭಾ ಕರಂದ್ಲಾಜೆ

ಚಾಮರಾಜಪೇಟೆ
ಶಹತಾಜ್ ಖಾನುಂ

ಚಿಕ್ಕಪೇಟೆ
ಖಮರ್ ತಾಜ್

ಹೊಳೆನರಸೀಪುರ
ಎಚ್ ಎಲ್ ಯಮುನಾ

ಸುಳ್ಯ
ಚಂದ್ರಾವತಿ

ಜೆಡಿಎಸ್ - 08 (ಕಣದಲ್ಲಿರುವ ಅಭ್ಯರ್ಥಿಗಳು)

ಜೆಡಿಎಸ್ - 08 (ಕಣದಲ್ಲಿರುವ ಅಭ್ಯರ್ಥಿಗಳು)

ಶಿಗ್ಗಾಂವ್
ಡಾ. ಸುಮಂಗಲ ಕಡಪ ಮೈಸೂರು

ಹೊಸದುರ್ಗ
ಸುಧಾಭಾಯಿ

ಶಿವಮೊಗ್ಗ (ಗ್ರಾಮಾಂತರ)
ಶಾರದಾ ಪೂರ್ಯಾ ನಾಯ್ಕ

ಬೈಂದೂರು
ಸುರಯ್ಯಾ ಬಾನು

ಮಲ್ಲೇಶ್ವರಂ
ಶ್ವೇತಾ ಎಸ್

ಸಿ ವಿ ರಾಮನ್ ನಗರ
ಹೇಮಲತಾ ಸುರೇಶ್ ರಾಜ್

ಚನ್ನಪಟ್ಟಣ
ಅನಿತಾ ಕುಮಾರಸ್ವಾಮಿ

ಹನೂರು
ಪರಿಮಳ ನಾಗಪ್ಪ

English summary
A total of 176 women candidates representing various Political Parties and Independent aspirants stake their claim for MLA power in Karnataka Assembly Elections 2013
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X