ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಜಿಲ್ಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು

|
Google Oneindia Kannada News

Gadag
ಗದಗ, ಏ. 23 : ಗದಗ ಜಿಲ್ಲೆಯನ್ನು ಹಾಲಿ ಬಿಜೆಪಿ ಶಾಸಕರ ಜಿಲ್ಲೆ ಎಂದರೂ ತಪ್ಪಿಲ್ಲ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಕಮಲ ಕಳೆದ ಚುನಾವಣೆಯಲ್ಲಿ ಅರಳಿ ನಿಂತಿದೆ. ಈ ಚುನಾವಣೆಯಲ್ಲಿ ಬೇರೆ ಪಕ್ಷಗಳು ಗದಗ ಜಿಲ್ಲೆಯನ್ನು ತಮ್ಮ ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ.

ಚುನಾವಣೆಯ ಸಂದರ್ಭದಲ್ಲಿ ಗನ್ ಮ್ಯಾನ್ ನಿಂದ ಆಕಸ್ಮಿಕವಾಗಿ ಗುಂಡೇಟು ತಿಂದು ಆಸ್ಪತ್ರೆ ಸೇರಿರುವ ಸಿ.ಸಿ.ಪಾಟೀಲ್, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ್, ಬಿಜೆಪಿ ಶಾಸಕರಾದ ರಾಮಣ್ಣ ಲಾಮಣಿ, ಶ್ರೀ ಶೈಲಪ್ಪ ಬಿದರೂರು, ಸಚಿವ ಕಳಕಪ್ಪ ಬಂಡಿ ಕ್ಷೇತ್ರದ ಪ್ರಮುಖ ಹುರಿಯಾಳುಗಳು.

ಕೆಜೆಪಿ ಸೇರುವ ಶಾಸಕರ ಪಟ್ಟಿಯಲ್ಲಿದ್ದ ಸಿ.ಸಿ.ಪಾಟೀಲ್. ರಾಮಣ್ಣ ಲಾವಣಿ, ಶ್ರೀ ಶೈಲಪ್ಪ ಬಿದರೂರು ಕೊನೆಗೆ ಬಿಜೆಪಿಯಲ್ಲೇ ಉಳಿದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿಎಂ ಜಗದೀಶ್ ಶೆಟ್ಟರ್ ಅವರ ಜಿಲ್ಲೆಯ ಪಕ್ಕದ ಜಿಲ್ಲೆಯಲ್ಲಿ ಕಮಲ ಅರಳಿಸಲು ಶೆಟ್ಟರ್ ಮತ್ತು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಪಣ ತೊಟ್ಟಿದ್ದಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಈ ಬಾರಿಯ ಚುನಾವಣೆ ಗೆದ್ದು, ಕಳೆದ ಬಾರಿಯ ಸೋಲಿನ ಕಹಿ ಮರೆತು ವಿಧಾಸಭೆ ಮಟ್ಟಿಲು ಹತ್ತಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ತಂತ್ರ ಹಣೆಯುತ್ತಿದ್ದಾರೆ. ಮುದ್ರಣಾಲಯಗಳ ನಾಡಿನಲ್ಲಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಕೆಳಗಿನಂತಿದೆ.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ ಸಿಪಿ/ಪಕ್ಷೇತರರು/ಇತರೆ
65
ಶಿರಹಟ್ಟಿ ರಾಮಣ್ಣ ಲಾಮಣಿ ದೊಡ್ಡಮನಿ ಆರ್.ಸಿದ್ದಲಿಂಗಪ್ಪ ಗುರಪ್ಪ ವಡ್ಡರ್ ಶೋಭಾ ಕೃಷ್ಣಪ್ಪ ಲಾವಣಿ
ಜಯಶ್ರೀ ಹಳ್ಳೆಪ್ಪನವರ್ (ಬಿಎಸ್ಆರ್ ಕಾಂಗ್ರೆಸ್)
66
ಗದಗ
ಶ್ರೀ ಶೈಲಪ್ಪ ಬಿದರೂರು ಎಚ್.ಕೆ.ಪಾಟೀಲ್ ಆಂದಾನಯ್ಯ ಕುರ್ತಕೋಟಿ ಮಠ
ಎಸ್.ಬಿ.ಸಂಕಣ್ಣನವರ ಅನಿಲ್ ಮೆಣಸಿನಕಾಯಿ (ಬಿಎಸ್ಆರ್ ಕಾಂಗ್ರೆಸ್)
67 ರೋಣ ಕಳಕಪ್ಪ ಬಂಡಿ ಗುರುಪಾದ ಎಸ್.ಪಾಟೀಲ್ ಹೇಮಗಿರೀಶ್ ಹಾವಿನಾಳ ಶರಣ ಬಸಪ್ಪ ಮೆಣಸಿನಕಾಯಿ ಅಶೋಕ್ ಬೇವಿನಕಟ್ಟಿ (ಬಿಎಸ್ಆರ್ ಕಾಂಗ್ರೆಸ್)
68 ನರಗುಂದ ಸಿ.ಸಿ.ಪಾಟೀಲ್ ಬಸವರೆಡ್ಡಿ ಯಾವಗಲ್ ಪ್ರಕಾಶ್ ಲಿಂಗಪ್ಪ ಕರಿ ಕೆ.ಎಸ್.ಪರ್ವತ ಗೌಡ ಎಸ್.ಎಚ್.ಶಿವನಗೌಡರ್ (ಬಿಎಸ್ಆರ್ ಕಾಂಗ್ರೆಸ್)
English summary
Karnataka assembly election 2013. Gadag districts candidates final list. Gadag district has Four constituencies. Gadag, Shirahatti, Ron, Naragund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X