ಸಿಪಿಐ(ಎಂ)ನಿಂದ ಲೋಕಸತ್ತಾಗೆ ಬೆಂಬಲ

ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಅಧೋಗತಿಗೆ ಇಳಿಸಿದೆ. ಒಳಜಗಳದಿಂದಾಗಿ ರಾಜ್ಯದ ಸಮಾನ್ಯ ಜನರ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಗಮನ ಹರಿಸಿಲ್ಲ. ಅಧಿಕಾರ ಲಾಲಸೆಯಲ್ಲಿ ತುಂಬಿ ಹೋಗಿರುವ ಬಿಜೆಪಿ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯಬೇಕು ಎಂದರು.
ರಾಜ್ಯದಲ್ಲಿ ಅದಿರು ಕೊಳ್ಳೆ ಹೊಡೆಯುತ್ತಿರುವ ರಾಜ್ಯ ಸರ್ಕಾರದ ಬಗ್ಗೆ ಪ್ರಶ್ನಿಸಬೇಕಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ನೈತಿಕತೆಯನ್ನು ಕಳೆದುಕೊಂಡಿದೆ. ಹೀಗಾಗಿ ಬಿಜೆಪಿಗೆ ಕಾಂಗ್ರೆಸ್ ಪಕ್ಷವೂ ಪರ್ಯಾಯವಲ್ಲ. ಇದರ ಜೊತೆಗೆ ಜೆಡಿಎಸ್ ಕೂಡಾ ಅಧಿಕಾರ ಲಾಲಸೆಯಿಂದ ಹೊರತಾಗಿಲ್ಲ ಎಂದು ನಾಗರಾಜ್ ಹೇಳಿದರು.
ಅಭ್ಯರ್ಥಿಗಳ ಪಟ್ಟಿ ಹೀಗಿದೆ:
* ಬಾಗೇಪಲ್ಲಿ - ಜಿ.ವಿ.ಶಿವರಾಮರೆಡ್ಡಿ (ಮಾಜಿ ಶಾಸಕರು)
* ಗೌರಿಬಿದನೂರು - ಸಿ.ಎಸ್.ಅಶ್ವತ್ಥಪ್ಪ
* ಚಿಂತಾಮಣಿ - ಸಿ.ಗೋಪಿನಾಥ್
* ಕೆ.ಜಿ.ಎಫ್ - ಸಿ.ತಂಗರಾಜ್
* ದೊಡ್ಡಬಳ್ಳಾಪುರ - ಆರ್.ಚಂದ್ರತೇಜಸ್ವಿ
* ಕೆ.ಆರ್.ಪುರಂ - ಗೌರಮ್ಮ
* ಆನೇಕಲ್ - ಡಿ.ಮಾದೇಶ
* ಮಳವಳ್ಳಿ - ಕೆ.ಬಸವರಾಜ್
* ಮಂಗಳೂರು ದಕ್ಷಿಣ - ವಂಸತ ಆಚಾರಿ
* ಮಂಗಳೂರು - ಕೃಷ್ಣಪ್ಪ ಸಾಲಿಯಾನ
* ಬೆಳ್ತಂಗಡಿ - ಬಿ.ಎಂ.ಭಟ್
* ಬೈಂದೂರು - ಕೆ.ಶಂಕರ
* ಗುಲ್ಬರ್ಗಾ ಗ್ರಾಮೀಣ - ಮಾರುತಿ ಮಾನ್ಪಡೆ
* ಕಂಪ್ಲಿ - ಶಿವಶಂಕರ
* ಹೊಸಪೇಟೆ - ಆರ್.ಭಾಸ್ಕರರೆಡ್ಡಿ
* ಕನಕಗಿರಿ - ಎ.ಹುಲುಗಪ್ಪ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications