ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

ತೀವ್ರ ಪೈಪೋಟಿ ಎದುರಾಗಿರುವ ಕ್ಷೇತ್ರಗಳನ್ನು ಹೊರತು ಪಡಿಸಿ 38 ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಭಾನುವಾರ ಘೋಷಿಸಲಾಗಿದೆ. ರಾಜ್ಯ ಜನರ ತೀವ್ರ ಕುತೂಹಲ ಕೆರಳಿಸಿದ್ದ ಕೇಂದ್ರ ಸಚಿವ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರ ಅಂತಿಮಗೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆಗೆ ಚಿತ್ತಾಪುರ ಕ್ಷೇತ್ರದಿಂದ ಮತ್ತು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಗೆ ಜೇವರ್ಗಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂತಿದೆ
ಮಸ್ಕಿ - ಪ್ರತಾಪ್ ಗೌಡ ಪಾಟೀಲ್
ಹುಕ್ಕೇರಿ - ರವಿ ಬಸವರಾಜ್ ಕರಳೆ
ಜೇವರ್ಗಿ - ಅಜಯ್ ಸಿಂಗ್
ಚಿತ್ತಾಪುರ - ಪ್ರಿಯಾಂಕ ಖರ್ಗೆ
ಕಲಘಟಗಿ - ಸಂತೋಷ್ ಲಾಡ್
ತುರುವೇಕೆರೆ - ಗೀತಾ ರಾಜಣ್ಣ
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
ಪದ್ಮನಾಭನಗರ - ಚೇತನ್ ಗೌಡ ಎಸ್.ಎಲ್
ಚಾಮರಾಜಪೇಟೆ -ಜಿ.ಎ.ಬಾವಾ
ಜಯನಗರ - ಎಂ.ಸಿ.ವೇಣುಗೋಪಾಲ್
ದೊಡ್ಡಬಳ್ಳಾಪುರ - ಟಿ.ವೆಂಕಟರಾಮಯ್ಯ
ಮಾನ್ವಿ - ಜಿ. ಹಂಪಯ್ಯ ನಾಯ್ಕ
ಗಂಗಾವತಿ - ಎಚ್.ಆರ್. ಶ್ರೀನಾಥ್
ಮಂಗಳೂರು ಉತ್ತರ - ಬಿ.ಎ.ಮೋಯಿದ್ದೀನ್ ಬಾವಾ
ಬೆಂಗಳೂರು ದಕ್ಷಿಣ - ತೇಜಸ್ವಿನಿ ಗೌಡ
ಶ್ರವಣಬೆಳಗೊಳ - ಸಿ.ಎಸ್.ಪುಟ್ಟೇಗೌಡ
ಬಳ್ಳಾರಿ ನಗರ - ಅನಿಲ್ ಲಾಡ್
ಶ್ರೀರಂಗಪಟ್ಟಣ - ಎ.ಎಸ್.ರವೀಂದ್ರ
ಮಳವಳ್ಳಿ - ಪಿ.ಎಂ.ನರೇಂದ್ರ ಸ್ವಾಮಿ
ದೇವನಹಳ್ಳಿ - ವೆಂಕಟಸ್ವಾಮಿ
ಮಹದೇವಪುರ - ಎ.ಸಿ.ಶ್ರೀನಿವಾಸ್
ಹಾನಗಲ್ - ಮನೋಹರ್ ತಹಸೀಲ್ದಾರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ - ಎಸ್.ಆರ್.ಮೋರೆ
ಶಿರಸಿ - ದೀಪಕ್ ರಾಮದಾಸ್
ಹಿರಿಯೂರು -ಡಿ.ಸುಧಾಕರ್
ಕೆಜಿಎಫ್ - ವಿ. ಶಂಕರ್
ಮಲ್ಲೇಶ್ವರಂ - ಬಿ.ಕೆ.ಶಿವರಾಂ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ - ಡಾ.ಮಹೇಶ್ ನಲ್ವಾಡ್
ಸಿ.ವಿ.ರಾಮನ್ ನಗರ - ಪಿ.ರಮೇಶ್
ಖಾನಾಪುರ - ರಫೀಕ್ ಕೆ.ಖಾನಾಪುರೆ
ಮುಳುಬಾಗಿಲು - ಅರಮೇಶ್
ಕೆ.ಆರ್.ಪುರಂ - ಬಸವರಾಜ್ ಬೈರತಿ
ಕಾರವಾರ -ರಮಾನಂದ ನಾಯಕ್
ರಾಯಚೂರು ಗ್ರಾಮೀಣ - ರಾಜಾ ರಾಯಪ್ಪ ನಾಯಕ
ಚಿಕ್ಕನಾಯಕನಹಳ್ಳಿ - ಎಸ್.ಎನ್. ಸತೀಶ್ ತರೀಕೆರೆ - ಜಿ.ಎಚ್.ಶ್ರೀನಿವಾಸ್
ಔರಾದ್ - ವಿಜಯ ಗಾಯಕ್ವಾಡ್
ಬಿಜಾಪುರ ನಗರ - ಮುಕ್ಬಲ್ ಭಗವಾನ್ [ಕಾಂಗ್ರೆಸ್ ಮೊದಲನೇ ಪಟ್ಟಿ]
ಕಾಂಗ್ರೆಸ್ ಮೊದಲ ಪಟ್ಟಿಯ ಬದಲಾವಣೆಗಳು : ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಲಿಂಗಸಗೂರು ಕ್ಷೇತ್ರದಲ್ಲಿ ಮೊದಲು ಪಮ್ಮಯ್ಯ ಮುರಾರಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರ ಬದಲಿಗೆ ದುರ್ಗಪ್ಪ ಹುಲಿಗೆರೆ ಅವರಿಗೆ ಟಿಕೆಟ್ ನೀಡಲಾಗಿದೆ.ಹಾಗೆಯೇ ಬದಾಮಿ ಕ್ಷೇತ್ರದಲ್ಲಿ ಮೊದಲು ದೇವರಾಜ್ ಎಚ್.ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿತ್ತು.ಅವರ ಬದಲಿಗೆ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ.
ಅಭ್ಯರ್ಥಿಗಳ ಘೋಷಣೆಯಾಗದ ಕ್ಷೇತ್ರಗಳು : ಒಂಭತ್ತು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ. ಭದ್ರಾವತಿ, ಮಾಲೂರು, ಚಿಕ್ಕಬಳ್ಳಾಪುರ, ದಾವಣಗೆರೆ ಉತ್ತರ, ಬೆಳಗಾವಿ ದಕ್ಷಿಣ, ಕಾಪು, ಪುತ್ತೂರು, ಹೆಬ್ಬಾಳ, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಇನ್ನೂ ಬಾಕಿ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications