ಮಂಗಳಮುಖಿಗೆ ಗಾಂಧಿನಗರ ಅಸೆಂಬ್ಲಿ ಟಿಕೆಟ್

BSP, SDPI release first list
ಬೆಂಗಳೂರು, ಏ.7: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಎಸ್ಪಿಯ 93 ಮತ್ತು ಎಸ್‌ಡಿಪಿಐಯ 17 ಅಭ್ಯರ್ಥಿಗಳ ಮೊದಲನೆ ಹಂತದ ಪಟ್ಟಿಯನ್ನು ಶನಿವಾರ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಬಿಡುಗಡೆ ಮಾಡಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಮಂಗಳಮುಖಿಯೊಬ್ಬರು ಗೆದ್ದಿರುವ ಸುದ್ದಿಯ ಬೆನ್ನಲ್ಲೇ ಅಸೆಂಬ್ಲಿ ಚುನಾವಣಾ ಕಣಕ್ಕೆ ಮತ್ತೊಬ್ಬ ಮಂಗಳಮುಖಿ ಇಳಿದಿದ್ದಾರೆ.

ರಾಜ್ಯದಲ್ಲಿ ಇದೆ ಪ್ರಥಮಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮಂಗಳಮುಖಿ ಸೌಮ್ಯ ಅವರು ಗಾಂಧಿನಗರ ಕ್ಷೇತ್ರದಿಂದ ಬಿಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ವಿಶೇಷ. ದಾವಣಗೆರೆ ಉತ್ತರ ಕ್ಷೇತ್ರದಿಂದ ಅಲೆಮಾರಿ ಜನಾಂಗವಾದ ಗೊಸಂಗಿ ಸಮುದಾಯಕ್ಕೆ ಸೇರಿದ ಮಮತಾ ಅವರನ್ನು ಬಿಎಸ್ಪಿ ಕಣಕ್ಕಿಳಿಸಿದೆ.

ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಬಿಎಸ್ಪಿ ಮತ್ತು ಎಸ್‌ಡಿಪಿಐ ಪರ್ಯಾಯ ರಾಜಕೀಯ ಪಕ್ಷಗಳಾಗಲಿವೆ. ಮೈತ್ರಿಕೂಟದ ಪಾಲುದಾರರಾದ ಎಸ್‌ಡಿಪಿಐಗೆ 25 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಉಳಿದ 199 ಸ್ಥಾನಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕಿಳಿಸಲಾಗುವುದು. ಪಕ್ಷದ ಎರಡನೆ ಹಂತದ ಪಟ್ಟಿಯನ್ನು ಮೂರು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಬಿಎಸ್ಪಿ ಅಭ್ಯರ್ಥಿಗಳ ಪಟ್ಟಿ:
* ಮಧುಗಿರಿ: ಕೋರಮಂಗಲ ಮುನಿಯಪ್ಪ,
* ಕೊರಟಗೆರೆ : ಬುಲ್ಲಾಸುಬ್ಬರಾವ್,
* ಪಾವಗಡ-ಬಿ.ಟಿ.ರಾಮ ಸುಬ್ಬಯ್ಯ,
* ತುಮಕೂರು ಗ್ರಾಮಾಂತರ- ಎನ್.ಗಂಗಯ್ಯ,
* ಕುಣಿಗಲ್-ರಮೇಶ್‌ಬಾಬು,
* ಶ್ರೀನಿವಾಸಪುರ- ಕೆ.ಪಿ. ನಾಗರಾಜ,
* ಚಿಕ್ಕಬಳ್ಳಾಪುರ-ಸೋಮಶೇಖರ,
* ಮಾಲೂರು- ರವಿ ಕುಮಾರ್,
* ದಾಸರಹಳ್ಳಿ-ಆರ್.ಗಂಗಾಧರ್,
* ಮಹಾಲಕ್ಷ್ಮಿಲೇಔಟ್-ಎಲ್.ಲೋಕೇಶ್,
* ಗಾಂಧಿನಗರ-ಸೌಮ್ಯ,
* ರಾಜರಾಜೇಶ್ವರಿನಗರ- ಗುರುಮೂರ್ತಿ,
* ಬಿಟಿಎಂ ಲೇಔಟ್-ಎ.ಹರೀರಾಮ್,
* ಯಲಹಂಕ-ಜಿ.ಈರಣ್ಣ,
* ದೊಡ್ಡಬಳ್ಳಾಪುರ- ಪುರುಶೋತ್ತಮ,
* ದೇವನಹಳ್ಳಿ-ವೆಂಕಟೇಶ್,
* ನೆಲಮಂಗಲ-ಸಿ.ಹನುಮಯ್ಯ,
* ವಿಜಯನಗರ (ಹೊಸಪೇಟೆ)-ಬಿ.ಗಣೇಶ,
* ಹೂವಿನ ಹಡಗಲಿ- ಕಟ್ಟೆಪ್ಪನವರ ಉಚ್ಚಂಗೆಪ್ಪ,
* ಕೂಡ್ಲಗಿ-ಮಣಗಾರ್ ಕರಿಬಸಪ್ಪ,
* ಚಿತ್ರದುರ್ಗ-ಜಿ.ಆರ್.ಪಾಂಡುರಂಗ,
* ಹೊಳಲ್ಕೆರೆ-ಜಿ.ಎನ್.ಪರಮೇಶ,
* ಹರಪನಹಳ್ಳಿ-ಕೆಂಚಪ್ಪ,
* ಜಗಳೂರು-ಕೆ.ಎಸ್.ಪ್ರಭು,
* ದಾವಣಗೆರೆ ಉತ್ತರ-ಮಮತಾ,
* ದಾವಣಗೆರೆ ದಕ್ಷಿಣ-ಬಿ.ಕೃಷ್ಣಪ್ಪ,
* ಹರಿಹರ-ಇ.ರಜಾಖುಲ್ಲಾ,
* ಹೊನ್ನಾಳ್ಳಿ-ಎ.ಕೆ.ಪರಶುರಾಮ,
* ಚನ್ನಗಿರಿ- ಎಸ್.ಎಚ್. ಅಣ್ಣಪ್ಪ,
* ಸೊರಭ-ಗುಡ್ಡಪ್ಪ ವಾಲ್ಮಿಕಿ,
* ಶಿವಮೊಗ್ಗ ಗ್ರಾಮಾಂತರ-ವಿರೇಶ್ ಕ್ಯಾತನಕೊಪ್ಪ,
* ತೀರ್ಥಹಳ್ಳಿ-ಮಂಜುನಾಥ ಗೌಡ,
* ಬೈಂದೂರು- ಉದಯ್ ಕುಮಾರ್,
* ಉಡುಪಿ-ಮಂಜುನಾಥ,
* ಕಾರ್ಕಳ-ಎಸ್.ಎಂ.ಜಾಕೀರ್ ಹುಸೇನ್,

* ಚಿಕ್ಕಮಗಳೂರು-ರಾಧಕೃಷ್ಣ,
* ಮೂಡಿಗೆರೆ-ಯು.ಬಿ. ಮಂಜಯ್ಯ,
* ನಿಪ್ಪಾಣಿ-ರಾಜೇಂದ್ರ ತರಕಾರ್,
* ಚಿಕ್ಕೋಡಿ (ಸದಲಗ)-ನಾಗೇಶ್ ಕಿವೂಡ್,
* ರಾಯಭಾಗ-ಮಯೂರ್ ಮದಲೆ,
* ಬೆಳಗಾಂ ಉತ್ತರ-ಮಹೇಂದ್ರ ದೇಶಪಾಂಡೆ,
* ಖಾನಾಪುರ- ಅಲೀಂ ಅಕ್ತರ್ ಎಸ್.ನಾಯಕ್,
* ಕಿತ್ತೂರು- ಯಮನಪ್ಪ ತಳವಾರ್,
* ರಾಮದುರ್ಗ- ಪಾಂಡುರಂಗ ನಾಯಕ್,
* ಬಾಗಲಕೋಟೆ- ಆರ್.ಡಿ.ಬಾಬು,
* ಬಾದಾಮಿ-ಜೋತಿ ಜಾಂತಿ ಚಂದ್ರ ದುರಗಪ್ಪ,
* ನಾಗಠಾಣ-ಸುಧಾಕರ ಕನ ಮಡಿ,
* ಇಂಡಿ-ಧರ್ಮಣ್ಣ ತೋಂಟಾಪುರ,
* ಮುದ್ದೇಬಿಹಾಳ್-ರವಿ ಎಸ್ ಸಜ್ಜನ್,
* ಬಬಲೇಶ್ವರ್-ಕಾಮಣ್ಣ ಗಂಗನಹಳ್ಳಿ,
* ಗುಲ್ಬರ್ಗ ಗ್ರಾಮಾಂತರ-ಅಂಬರಾಯ,
* ಚಿಂಚೋಳಿ- ಗೌತಮ್ ಬಕ್ಕಪ್ಪ ಬೊಮ್ನಳ್ಳಿ,

* ಗುಲ್ಬರ್ಗ ದಕ್ಷಿಣ- ವಾಸುದೇವ,
* ಸೇಡಂ-ಶಿವಶರಣಪ್ಪ,
* ಔರಾದ್- ದೇವಿದಾಸ್ ಸೂರ್ಯವಂಶಿ,
* ಬೀದರ್‌ ದಕ್ಷಿಣ- ಅಬ್ದುಲ್ ಮನ್ನಾನ್,
* ಹುಮನಾಬಾದ್-ಅಂಕುಶ್ ಗೋಕುಲೆ,
* ಬಸವಕಲ್ಯಾಣ-ಸೈಯದ್ ಅನ್ವರ್ ಖಾದರಿ,
* ಮಾನ್ವಿ-ಮಲ್ಲಪ್ಪ ಬಂಗಾರಿ,
* ಲಿಂಗಸಗೂರು-ನಂದಪ್ಪ,
* ರಾಯಚೂರು- ಹಾರೀಸ್ ಸಿದ್ಧಿಖಿ,
* ಮಸ್ಕಿ-ನಾಗರಾಜ್,
* ಸಿಂಧನೂರು-ಎಂ.ಕೆ.ಜಗ್ಗೇಶ್,
* ಧಾರವಾಡ-ನಿಂಗಪ್ಪ ಅಂದರಖಂಡಿ,
* ಹುಬ್ಬಳ್ಳಿ ಧಾರವಾಡ ಪಶ್ಚಿಮ- ಲಕ್ಷ್ಮಣ ಚಂದ್ರಪ್ಪ ಬಕ್ಕಾಯಿ,
* ಹುಬ್ಬಳ್ಳಿ ಧಾರವಾಡ ಪೂರ್ವ-ನಿಂಗಪ್ಪ ಮರಗನೂರು,
* ಹಳಿಯಾಳ- ಮೇಘರಾಜ್ ಮೇತ್ರಿ,
* ಕಾರವಾರ-ನಾಗೇಶ್ ಲಕ್ಷ್ಮೇಶ್ವರ್,
* ಸಿರಸಿ-ಸುಧಾಕರ್ ಜೋಗಳೇಕರ್,
* ಕುಮಟ-ವಶಂತ ಜೋಗಳೇಕರ್,
* ಕುಷ್ಟಗಿ- ಶವಪುತ್ರಪ್ಪ,
* ಕನಕಗಿರಿ-ಶ್ರೀಧರ್,
* ಶಿರಹಟ್ಟಿ- ದುರ್ಗಪ್ಪ ಸಾರೆಪ್ಪ ಪೂಜಾರ್,
* ಸಿಂಗ್ಗಾವ್- ಓಂಕಾರ್ ಕೃಷ್ಣ ಜಿ,
* ಹಾವೇರಿ-ಅಶೋಕ್ ಮರಿ ಯಣ್ಣ,
* ಬ್ಯಾಡಗಿ-ನಂಜುಂಡಪ್ಪ ಜಜ್ಜೂರು,
* ರಾಣಿಬೆನ್ನೂರು-ಉಮೇಶ್ ಎಚ್.ಗೌಡ,
* ಹಿರೆಕೆರೂರು-ಸುಲೇಮಾನ್ ಬಳಿಗಾರ್,
* ರಾಮ ನಗರ-ರಾಮಯ್ಯ ಶಿವರಾಂ,
* ಕನಕಪುರ-ಮಲ್ಲಿ ಕಾರ್ಜುನಯ್ಯ,
* ಚನ್ನಪಟ್ಟಣ-ವಿ.ಎನ್.ಸುಜೀವನ್ ಕುಮಾರ್,
* ಮಾಗಡಿ-ಜಾಫರ್ ಪಾಷ,
* ಆನೇಕಲ್-ಪಿ.ಶ್ರೀನಿವಾಸ್,
* ಮೇಲುಕೋಟೆ- ಮಹೇಶ್ ಮಾಚಹಳ್ಳಿ,
* ಮದ್ದೂರು- ಎಚ್.ಎಚ್. ಬೋರಯ್ಯ,
* ಶ್ರೀರಂಗಪಟ್ಟಣ-ಬಸವಯ್ಯ,
* ಬೇಲೂರು-ಡಿ.ಎಸ್.ಗಂಗಾಧರ,
* ಅರಕಲ ಗೂಡು-ಬಿ.ಸಿ.ರಾಜೇಶ್,
* ಪಿರಿಯಾಪಟ್ಟಣ-ಕೃಷ್ಣ,
* ಚಾಮುಂಡೇಶ್ವರಿ-ಜಿ.ಎಸ್.ನಾಯಕ್,
* ಕಂಪ್ಲಿ- ಮಾರೆಪ್ಪ,
* ಬಳ್ಳಾರಿ ಗ್ರಾಮಾಂತರ-ವಿ.ಮಾರಪ್ಪ,
* ಗದಗ-ಮಹದೇವ್ ಎಸ್.ಚಲವಾದಿ.

ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿ:
* ಚಾಮರಾಜಪೇಟೆ-ವೌಲಾನ ಉಸ್ಮಾನ್ ಬೇಗ್ ರಶಾದಿ,
* ಪುಲಕೇಶಿನಗರ-ಹೇಮಲತಾ,
* ಸರ್ವಜ್ಞ ನಗರ-ಡಾ.ಮೆಹಬೂಬ್ ಶರೀಫ್ ಆವಾದ್,
* ಚಿಕ್ಕಪೇಟೆ-ಮುಜಾಹಿದ್ ಪಾಷ,
* ಹೆಬ್ಬಾಳ- ಸ್ಯಯದ್ ಫಕ್ರುದ್ದೀನ್,
* ಬಂಟ್ವಾಳ-ಅಬ್ದುಲ್ ಮಜೀದ್,
* ಪುತ್ತೂರು-ಕೆ.ಎ.ಸಿದ್ದಿಕ್ ಪುತ್ತ್ತೂರು,
* ಸುಳ್ಯ-ಎಂ.ಕೂಸಪ್ಪ,
* ಮೂಡುಬಿದೆರೆ- ಇಸ್ಮಾಯಿಲ್,
* ಮಂಗಳೂರು ಉತ್ತರ- ಅಬೂಬಕ್ಕರ್ ಕುಳಾಯಿ,
* ಮಂಗಳೂರು ದಕ್ಷಿಣ-ಕೆ.ಅಬ್ದುಲ್ ಜಲೀಲ್,
* ಮಂಗಳೂರು ಉಳ್ಳಾಲ-ಅಕ್ರಮ್ ಹಸನ್,
* ನರಸಿಂಹರಾಜ- ಕೆ.ಅಬ್ದುಲ್ ಮಜೀದ್,
* ಚಾಮರಾಜ-ಪ್ರೊ.ಶಬೀರ್ ಮುಸ್ತಫಾ,
* ಯಾದಗಿರಿ ಜಿಲ್ಲೆ ಶಹಾಪುರ-ಸ್ಯಯದ್ ಇಸ್ಹಾಕ್ ಹುಸೈನ್,
* ಉಡುಪಿ ಜಿಲ್ಲೆ ಕಾಪು-ಅಬ್ದುಲ್ ಹಕೀಂ,
* ಬಿಜಾಪುರ- ಡಾ.ಮೊಹಮ್ಮದ್ ರಫೀಕ್ ಗುರಿಕ್ಕಾರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+