ಕ್ಷೇತ್ರ ಪರಿಚಯ: ಸಂಡೂರಲ್ಲಿ ಕಾಂಗ್ರೆಸ್ ಅಧಿಪತ್ಯ ಅಂತ್ಯ?

ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂದೆನಿಸಿರುವ ರಾಜ್ಯದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಸಂಡೂರು ಕೂಡಾ ಒಂದು. ಇಲ್ಲಿ ಮೊದಲಿನಿಂದಲೂ ಪಾರಮ್ಯ ಮೆರೆದಿದ್ದು ಘೋರ್ಪಡೆ ಅವರು. ಅವರ ನಂತರ, ಇಲ್ಲಿ ಕಾಂಗ್ರೆಸ್ ಪರವಾಗಿ ಸಂತೋಷ್ ಲಾಡ್ ಶಾಸಕರಾಗಿದ್ದರು. ಈಗ, ಇಲ್ಲಿ ಕಾಂಗ್ರೆಸ್ ನವರೇ ಆದ, ಸಂತೋಷ್ ಲಾಡ್ ಅವರಿಗೆ ಆಪ್ತರಾಗಿರುವ ಇ. ತುಕಾರಾಮ್.

ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಇದು ಎಸ್ ಟಿ ಮೀಸಲು ಕ್ಷೇತ್ರವಾಗಿದ್ದರಿಂದ ಸಂತೋಷ್ ಲಾಡ್ ಅವರು ತುಕಾರಾಮ್ ಅವರನ್ನು ಕಣಕ್ಕಿಳಿಸಿದ್ದರು. ಆ ಎರಡೂ ಬಾರಿಯೂ ತುಕಾರಾಮ್ ಅವರೇ ಗೆಲುವು ಸಾಧಿಸಿರುವುದು ಇಲ್ಲಿನ ವಿಶೇಷ. ಈ ಬಾರಿಯೂ ಇದು ಎಸ್ ಟಿ ಮೀಸಲು ಕ್ಷೇತ್ರವಾಗಿರುವುದರಿಂದ ಈ ಬಾರಿ ತುಕಾರಾಂ ಅವರಿಗೇ ಕಾಂಗ್ರೆಸ್ ಟಿಕೆಟ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

Karnataka Assembly Election 2018: Sandur constituency profile

ತುಕಾರಾಮ್ ಅವರಿಗೆ ಕ್ಷೇತ್ರದಲ್ಲಿ ಒಳ್ಳೆ ಹೆಸರಿದೆ. ಮೌಲ್ಯಾಧಾರಿತ, ಸಜ್ಜನ, ಜನಪರ ಕಾಳಜಿ ಉಳ್ಳ ವ್ಯಕ್ತಿ ಎಂಬ ಹೆಗ್ಗಳಿಕೆಯಿದೆ. ಅಲ್ಲದೆ, ಕ್ಷೇತ್ರದಲ್ಲಿ ಅವರಿಂದಾಗಿರುವ ಕೆಲವಾರು ಅಭಿವೃದ್ಧಿ ಕೆಲಸಗಳಿಂದಲೂ ಜನರು ಅವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನೇ ಇಟ್ಟುಕೊಂಡಿದ್ದಾರೆ.

ಇವರಿಗೆ ಸಡ್ಡು ಹೊಡೆಯಬೇಕೆಂದರೆ, ಬಿಜೆಪಿಯು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲೇಬೇಕಿದೆ. ಬಿಜೆಪಿ ಡಿ. ರಾಘವೇಂದ್ರ ಮತ್ತು ಜೆಡಿಎಸ್ ವಸಂತಕುಮಾರ್ ಸ್ಪರ್ಧಿಸುತ್ತಿದ್ದಾರೆ. ಘೋರ್ಪಡೆ ಕುಟುಂಬದ ಕಾರ್ತಿಕೇಯ ಅವರು ಬಿಜೆಪಿ ಸೇರಿದ್ದರೂ, ಸಮರ್ಥ ಎದುರಾಳಿ ಇಲ್ಲದ ಕಾರಣ ಧರ್ಮಾಪುರ ರಾಘವೇಂದ್ರ ಅವರಿಗೆ ಟಿಕೇಟ್ ಘೋಷಣೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+