ಕ್ಷೇತ್ರ ಪರಿಚಯ: ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಹಿರಿಯರ ಕದನ
ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಕಲಬುರಗಿ ಗ್ರಾಮೀಣ ಕೂಡಾ ಒಂದು. 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದ ಬಳಿಕ ಸೃಷ್ಟಿಯಾದ ಕೇತ್ರವಿದು.
ಇಲ್ಲಿ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ರೇವೂನಾಯಕ್ ಬೆಳಮಗಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನ ಚಂದ್ರಿಕಾ ಪರಮೇಶ್ವರ್ ವಿರುದ್ಧ 17 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಸಾಧಿಸಿದ್ದರು.
1994ರಿಂದ ಸತತ ಮೂರು ಬಾರಿ ಕಮಲಾಪುರ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬೆಳಮಗಿ ಅವರು ನಂತರ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರಕ್ಕೆ 2008ರಲ್ಲಿ ವಲಸೆ ಬಂದಿದ್ದರು. ಹೀಗೆ ಗೆಲುವು ಸಾಧಿಸಿದ ಬೆಳಮಗಿ ಮುಂದೆ ಯಡಿಯೂರಪ್ಪ ಸರಕಾರದಲ್ಲಿ ಪಶುಸಂಗೋಪನೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ 70 ವರ್ಷಕ್ಕಿಂತ ಹೆಚ್ಚಿನವರ ನಡುವೆಯೇ ಸ್ಪರ್ಧೆ ನಡೆದಿತ್ತು. ಆಗ 4 ಬಾರಿಯ ಶಾಸಕ ರೇವುನಾಯಕ ಬೆಳಮಗಿಯವರಿಗೆ 72 ವರ್ಷ ವಯಸ್ಸಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಜಿ ರಾಮಕೃಷ್ಣ ಆಗಷ್ಟೆ 75ನೇ ವರ್ಷಕ್ಕೆ ಕಾಲಿಟ್ಟಿದ್ದರು.
ಈ ಚುನಾವಣೆಯಲ್ಲಿ ಮಾತ್ರ ಸತತ ನಾಲ್ಕು ಬಾರಿ ಗೆಲುವು ಕಂಡಿದ್ದ ರೇವೂ ನಾಯಕ್ ಬೆಳಮಗಿ ಸೋಲಬೇಕಾಯಿತು. ಜಿ. ರಾಮಕೃಷ್ಣ ವಿರುದ್ಧ ಬೆಳಮಗಿ 8 ಸಾವಿರ ಮತಗಳ ಅಂತರದಿಂದ ಬೆಳಮಗಿ ಸೋಲು ಕಂಡಿದ್ದರು.
ಇಲ್ಲಿ ಕೆಜೆಪಿ ಅಭ್ಯರ್ಥಿ ಬಾಬುರಾವ ಚವ್ಹಾಣ ಬೆಳಮಗಿಯವರ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 26 ಸಾವಿರ ಮತಗಳನ್ನು ಪಡೆದು ಬೆಳಮಗಿ ಸೋಲಿಗೆ ಕಾರಣವಾಗಿದ್ದರು.
ಈ ಬಾರಿ ಕೆಜಿಪಿ ಮತ್ತೆ ಬಿಜೆಪಿಯಲ್ಲಿ ವಿಲೀನವಾಗಿರುವುದರಿಂದ ಇಲ್ಲಿ ಬಿಜೆಪಿ ಗೆಲುವು ಸುಲಭ ಎಂದುಕೊಳ್ಳಲಾಗಿದೆ.
ಸದ್ಯ ರೇವೂನಾಯಕ್ ಬೆಳಮಗಿಯವರಿಗೆ 77 ವರ್ಷ ವಯಸ್ಸು, ಜಿ. ರಾಮಕೃಷ್ಣ 80ರತ್ತ ಹೆಜ್ಜೆ ಹಾಕಿದ್ದು, ಇಲ್ಲಿ ಈ ಬಾರಿಯೂ ಹಿರಿಯರ ಕದನ ಕುತೂಹಲಕಾರಿಯಾಗಿದೆ. ಮಾಜಿ ಶಾಸಕ ಬಾಬುರಾವ ಚವ್ಹಾಣರ ನಡೆಯ ಬಗ್ಗೆಯೂ ಕುತೂಹಲವಿದೆ.
ಇಲ್ಲಿ ಜೆಡಿಎಸ್ ಮತ್ತು ಸಿಪಿಎಂಗೆ ಸ್ವಲ್ಪಮಟ್ಟಿನ ನೆಲೆ ಇದ್ದು ಫಲಿತಾಂಶದ ಏರುಪೇರಿನಲ್ಲಿ ತಮ್ಮದೇ ಕೊಡುಗೆ ನೀಡಲಿವೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications